ಜಯಮ್ಮನ ಮಗ ಖ್ಯಾತಿಯ ವಿಕಾಸ್ ಚೊಚ್ಚಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ ಕಾಣದಂತೆ ಮಾಯವಾದನು ಚಿತ್ರದ ಟ್ರೇಲರ್ ಇತ್ತೀಚಿಗಷ್ಟೇ ಬಿಡುಗಡೆಯಾಗಿದೆ. ಯೂಟ್ಯೂಬ್ ನಲ್ಲಿಯೂ ಬಹಳಷ್ಟು ಮೆಚ್ಚುಗೆಯನ್ನು ಪಡೆದಿರುವ, ಕೌತುಕತೆಯನ್ನು ಸೃಷ್ಟಿಸಿರುವ ಈ ಟ್ರೇಲರನ್ನು ಪವರ್ ಸ್ಟಾರ್ ವೀಕ್ಷಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕಾಣದಂತೆ ಮಾಯವಾದನು ಸಿನಿಮಾ ಪಕ್ಕಾ ಆತ್ಮದ ಕಥೆಯನ್ನು ಹೇಳಹೊರಟಿರುವ ಚಿತ್ರವಗಿದ್ದು, ಬ್ಯಾಕ್ ಬೆಂಚರ್ಸ್ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಚಂದ್ರಶೇಖರ್ ನಾಯ್ಡು, ಸೋಮ್ ಸಿಂಗ್ ಹಾಗೂ ಪುಷ್ಪ ಸೋಮ್ ಸಿಂಗ್ ಅವರು ನಿರ್ಮಾಣ ಮಾಡಿದ್ದಾರೆ.

ಇನ್ನು ವಿಕಾಸ್ ಗೆ ನಾಯಕಿಯಾಗಿ ಸಿಂಧು ಲೋಕನಾಥ್ ನಟಿಸಿದ್ದು, ಉಳಿದಂತೆ ಅಚ್ಯುತ ಕುಮಾರ್, ವಿನಯ ಪ್ರಸಾದ್, ಸುಚೇಂದ್ರ ಪ್ರಸಾದ್, ರಾಘವ್ ಉದಯ್, ಭಜರಂಗಿ ಲೋಕಿ, ಧರ್ಮಣ್ಣ, ಸೀತಾ ಕೋಟೆ, ಸನ್ನಿ ಮಹಿಪಾಲ್, ಬಾಬು ಹಿರಣ್ಣಯ್ಯ, ಹೊನ್ನವಳ್ಳಿ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಕಾಣದಂತೆ ಮಾಯವಾದವನು ಚಿತ್ರವನ್ನು ರಾಜ್ ಪತ್ತಿಪಾಟಿ ನಿರ್ದೆಶನ ಮಾಡಿದ್ದು, ಸದ್ಯದಲ್ಲಿಯೇ ಸೆನ್ಸಾರ್ ಮಂಡಳಿ ಪ್ರಥಮ ಪ್ರತಿಯನ್ನು ವೀಕ್ಷಿಸಲಿದೆ.











































