ದ್ರೋಣ ಮೇಷ್ಟ್ರು ಪಾಠ ಸೆಪ್ಟೆಂಬರ್ ಗೆ!

Picture of Cinibuzz

Cinibuzz

Bureau Report

ಡಾಲ್ಫಿನ್ ಮೀಡಿಯಾ ಹೌಸ್ ಲಾಂಛನದಲ್ಲಿ ಮಹದೇವ್ ಬಿ. ಸಂಗಮೇಶ್. ಬಿ, ಶೇಶು ಚಕ್ರವರ್ತಿ ಕೂಡಿ ನಿರ್ಮಿಸುತ್ತಿರುವ ದ್ರೋಣ ಸಿನಿಮಾವನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ರಿಲೀಸ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ದ್ರೋಣ ಟೀಮ್ ನಿರತವಾಗಿದೆ.

ಇನ್ನು ಮಾಡ್ರನ್ ಮೇಷ್ಟ್ರಾಗಿ ಶಿವರಾಜ್ ಕುಮಾರ್ ಪಿಸ್ತೂಲ್ ಹಿಡಿಯುವ ಕೈನಲ್ಲಿ ಬೆತ್ತ ಹಿಡಿದು ಮಕ್ಕಳಿಗೆ ಪಾಠ ಮಾಡಲಿದ್ದಾರೆ. ಅವರಿಗೆ ಇನಿಯ, ರವಿ ಕಿಶನ್, ರಂಗಾಯಣ ರಘು, ಬಾಬು ಹಿರಣ್ಣಯ್ಯ, ಶಂಕರ್ ರಾವ್, ರೇಖಾದಾಸ್ ಮತ್ತಿತರರು ಸಾಥ್ ನೀಡಿದ್ದಾರೆ. ಪ್ರಮೋದ್ ಚಕ್ರವರ್ತಿ ದ್ರೋಣನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇನ್ನಷ್ಟು ಓದಿರಿ

Scroll to Top