ಸ್ಯಾಂಡಲ್ ವುಡ್ ದಾಖಲೆಗಳ ಧ್ವಂಸ ಮಾಡಲು ಬರುತ್ತಿದ್ದಾನೆ ಕಂಸ!

Picture of Cinibuzz

Cinibuzz

Bureau Report

ದುನಿಯಾ ಚಿತ್ರದ ಮೂಲಕ ಲೂಸ್ ಮಾದ ಎಂದೇ ಗುರುತಿಸಿಕೊಂಡಿರುವ ನಟ ಯೋಗೀಶ್. ಮದುವೆಯಾದ ಮೇಲೆ ಲಂಬೋದರ ಎಂಬ ಚಿತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿದ್ದ ಲೂಸ್ ಮಾದ ಯೋಗಿ ಸದ್ಯ ಕಂಸನಾಗಿ ಅವತಾರವೆತ್ತಿದ್ದಾರೆ.

ಯೋಗಿ ಕರಿಯರ್ ನಲ್ಲಿಯೇ ಕಂಸ ಬಿಗ್ ಬಜೆಟ್ ಸಿನಿಮಾವಾಗಿರಲಿದ್ದು, ಸ್ವಂತ ಬ್ಯಾನರ್ ನಲ್ಲಿಯೇ ಚಿತ್ರವೂ ಮೂಡಿಬರುತ್ತಿದೆ. ಆ್ಯಪಲ್ ಕೇಕ್ ಚಿತ್ರವನ್ನು ನಿರ್ದೇಶಿಸಿದ್ದ ರಂಜಿತ್ ಕುಮಾರ್ ಗೌಡ ಕಂಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅಂದಹಾಗೆ ಲೂಸ್ ಮಾದ ಕಂಸ ಚಿತ್ರ ಸೇರಿದಂತೆ ಲಂಕೆ, ಉದ್ಯೋಗಂ ಪುರುಷ ಲಕ್ಷಣಂ ಎಂಬ ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top