ಬಾಕ್ಸಿಂಗ್ ಟ್ರೇನಿಯಾಗಲಿದ್ದಾರೆ ಗುಲ್ಟು ನಾಯಕ!

Picture of Cinibuzz

Cinibuzz

Bureau Report

ಗುಲ್ಟು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದ ನಟ ನವೀನ್ ಶಂಕರ್. ಗುಲ್ಟು ಯಶಸ್ಸಿನ ಬಳಿಕ ನವೀನ್ ಶಂಕರ್ ಇನ್ನೂ ಹೆಸರಿಡದ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದಾರಂತೆ. ಅಲ್ಲದೇ ಅದು ಕ್ರೀಡಾ  ಸಂಬಂಧಿ ಸಿನಿಮಾವಾಗಿದ್ದು, ಬಾಕ್ಸಿಂಗ್‍ ಟ್ರೇನಿಯಾಗಿ ನವೀನ್ ಶಂಕರ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ಪಾತ್ರಕ್ಕಾಗಿ ನವೀನ್ ನುರಿತ ಬಾಕ್ಸರ್ ನಿಂದ ಟ್ರೇನಿಂಗ್ ಪಡೆಯುತ್ತಿದ್ದಾರಂತೆ. ಇನ್ನು ಈ ಚಿತ್ರವನ್ನು ಶ್ರೀಧರ್ ನಿರ್ದೇಶನ ಮಾಡುತ್ತಿದ್ದು, ನವೀನ್ ಶಂಕರ್ ಗೆ ಐಶಾನಿ ಶೆಟ್ಟಿ ನಾಯಕಿಯಾಗಿ ಜತೆಯಾಗಿದ್ದಾರೆ. ಸದ್ಯ ಮುಹೂರ್ತ ಮುಗಿಸಿಕೊಂಡಿರುವ ಚಿತ್ರತಂಡ ಜುಲೈ ಅಂತ್ಯಕ್ಕೆ ಶೂಟಿಂಗ್ ಪ್ರಾರಂಭಿಸುವ ಪ್ಲ್ಯಾನ್ ನಲ್ಲಿದೆ.

ಇನ್ನಷ್ಟು ಓದಿರಿ

Scroll to Top