ಈ ವಾರ ಸಿಂಗ ತೆರೆಗೆ!

Picture of Cinibuzz

Cinibuzz

Bureau Report

ಯು ಕೆ ಎಂ ಸ್ಟುಡಿಯೋಸ್ ಲಾಂಛನದಲ್ಲಿ ಉದಯ್ ಕೆ ಮೆಹ್ತಾ ಅವರು ನಿರ್ಮಿಸಿರುವ `ಸಿಂಗ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಾಮ್ ಲೀಲಾ ಫೇಮಿನ ವಿಜಯ್ ಕಿರಣ್ ಸಿಂಗ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿರಂಜೀವಿ ಸರ್ಜಾ ಮತ್ತು ಅದಿತಿ ಪ್ರಭುದೇವ ಸಿಂಗದಲ್ಲಿ ಜತೆಯಾಗಿದ್ದು, ಉಳಿದಂತೆ ರವಿಶಂಕರ್, ತಾರಾ, ಶಿವರಾಜ್ ಕೆ.ಆರ್ ಪೇಟೆ, ಅರುಣಾ ಬಾಲರಾಜ್, ರಂಜಿತಾ, ಚಂದ್ರಪ್ರಭ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಇನ್ನು ಕಿರಣ್ ಹಂಪಾಪುರ ಛಾಯಾಗ್ರಹಣ, ಧರ್ಮ ವಿಶ್ ಸಂಗೀತ ಸಂಯೋಜನೆ, ರವಿ ವರ್ಮ ಮತ್ತು ಪಳನಿ ರಾಜ್ ಸಾಹಸ, ಗಣೇಶ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಮತ್ತು ಕವಿರಾಜ್, ಚೇತನ್ ಗೀತಸಾಹಿತ್ಯ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top