ದುಬಾರಿ ಮೊತ್ತಕ್ಕೆ ಗೀತಾ ಸಿನಿಮಾ ಡಿಜಿಟಲ್ ರೈಟ್ಸ್ ಸೇಲ್!

Picture of Cinibuzz

Cinibuzz

Bureau Report

99 ಸಿನಿಮಾದ ನಂತರ ಗೋಲ್ಡನ್ ಸ್ಟಾರ್ ನಟಿಸಿರುವ ಸಿನಿಮಾ ಗೀತಾ. ಟೈಟಲ್ ಮೂಲಕವೇ ಭಾರಿ ಸಂಚನವನ್ನುಂಟು ಮಾಡಿರುವ ಗೀತಾ ಚಿತ್ರಕ್ಕೆ ಶಾನ್ವಿ ಶ್ರೀವಾತ್ಸವ್, ಪ್ರಯಾಗ ಮಾರ್ಟಿನ್, ಪಾರ್ವತಿ ಅರುಣ್ ಸೇರಿದಂತೆ ಮೂವರು ನಾಯಕಿಯರಿದ್ದಾರೆ. ಅಲ್ಲದೇ ಸುಧಾರಾಣಿ ಕೂಡ ವಿಶೇಷ ಪಾತ್ರದಲ್ಲಿಯೂ ನಟಿಸಿದ್ದಾರೆ. ರೊಮ್ಯಾಂಟಿಕ್ ಲವ್ ಸ್ಟೋರಿಯ ಜತೆ ಜತೆಗೆ ಗೋಕಾಕ್ ಚಳವಳಿಯ ಮೇಲೂ ಬೆಳಕು ಚೆಲ್ಲಿರುವ ಗೀತಾ ಡಬಲ್ ಧಮಾಕ ಸೃಷ್ಟಿಸಲಿದೆ ಎಂದು ಗೋಲ್ಡನ್ ಫ್ಯಾನ್ಸ್ ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಈಗಾಗಲೇ ಟಾಕಿ ಪೋರ್ಷನ್ ಮುಗಿಸಿಕೊಂಡು ಒಂದು ಹಾಡಿನ ಚಿತ್ರೀಕರಣವನ್ನು ಉಳಿಸಿಕೊಂಡಿರುವ ಗೀತಾ ಸದ್ಯದಲ್ಲಿಯೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಶುರುವಿಟ್ಟುಕೊಳ್ಳಲಿದೆ. ಈ ಮಧ್ಯೆ ಚಿತ್ರದ ಡಿಜಿಟಲ್ ರೈಟ್ಸ್ ಬರೋಬ್ಬರು 2.75 ಕೋಟಿಗೆ ಅಮೆಜಾನ್ ಪ್ರೈಮ್ ಗೆ ಗೀತಾ ಬಿಕರಿಯಾಗಿರೋದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. ಇತ್ತೀಚಿಗೆ ತಯಾರಾಗುತ್ತಿರುವ ಕನ್ನಡ ಸಿನಿಮಾಗಳ ಟಿವಿ ರೈಟ್ಸ್ ಹಾಗೂ ಡಿಜಿಟಲ್ ರೈಟ್ಸ್ ದಾಖಲೆಗಳ ಮೊತ್ತಕ್ಕೆ ಮಾರಾಟವಾಗುತ್ತಿದ್ದು, ಅದರ ಸಾಲಿಗೆ ಗೀತಾ ಕೂಡ ಸೇರ್ಪಡೆಯಾಗಲಿದೆ. ಗೀತಾ ಚಿತ್ರವನ್ನು ವಿಜಯ್ ನಾಗೇಂದ್ರ ನಿರ್ದೇಶನ ಮಾಡುತ್ತಿದ್ದು, ಅನೂಪ್ ರೂಬೆನ್ಸ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top