ಜುಲೈ 24ಕ್ಕೆ ನನ್ನ ಪ್ರಕಾರದ ಹಾಡು ರಿಲೀಸ್!

Picture of Cinibuzz

Cinibuzz

Bureau Report

ಪ್ರಿಯಾಮಣಿ ಮತ್ತು ಕಿಶೋರ್ ಕುಮಾರ್ ನಟಿಸಿರುವ ಹೊಸ ಸಿನಿಮಾ ನನ್ನ ಪ್ರಕಾರ. ಈ ಚಿತ್ರದ ಹೂ ನಗೆ ಆಮಂತ್ರಿಸಿದೆ ಎಂಬ ಹಾಡು ಇದೇ ಜುಲೈ 24ರಂದು ಸಂಜೆ 5 ಗಂಟೆಗೆ ಜೀ ಮ್ಯೂಜಿಕ್ ಸೌತ್ ಮೂಲಕ ಬಿಡುಗಡೆಯಾಗಲಿದೆ. ಈ ಹಾಡನ್ನು ಕಿರಣ್ ಕಾವೇರಪ್ಪ ಬರೆದಿದ್ದು, ಹುಲಿರಾಯ ಖ್ಯಾತಿಯ ಅರ್ಜುನ್ ರಾಮು ಸಂಗೀತ ಸಂಯೋಜನೆ ಮಾಡಿದ್ದಾರೆ.

ನನ್ನ ಪ್ರಕಾರ ಸಿನಿಮಾವನ್ನು ಜಿವಿಕೆ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಗುರುರಾಜ್ ಎಸ್ ನಿರ್ಮಾಣ ಮಾಡಿದ್ದು, ವಿನಯ್ ಬಾಲಾಜಿ ನಿರ್ದೇಶನ ಮಾಡಿದ್ದಾರೆ. ಇನ್ನು ಮನ್ವರ್ಷಿ, ವಿನಯ್ ಬಾಲಾಜಿ ಸಂಭಾಷಣೆ, ಮನೋಹರ್ ಜೋಶಿ ಛಾಯಾಗ್ರಹಣ, ಸತೀಶ್ ಸಂಕಲನ, ಡಿಫರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top