ಮೆಲ್ಬೋರ್ನ್ ಫಿಲಂ ಫೆಸ್ಟಿವಲ್ ಗೆ ಗಂಟು ಮೂಟೆ!

Picture of Cinibuzz

Cinibuzz

Bureau Report

ನ್ಯೂಯಾರ್ಕ್ ಫಿಲಂ ಫೆಸ್ಟಿವಲ್ ನಲ್ಲಿ ಉತ್ತಮ ಚಿತ್ರಕಥೆ ಪ್ರಶಸ್ತಿ ಗೆದ್ದ ಕನ್ನಡ ಸಿನಿಮಾ ಗಂಟು ಮೂಟೆ. ಅದಾದ ಮೇಲೆ ಕೆನಡಾ ಫಿಲಂ ಅವಾರ್ಡ್ಸ್ ನಲ್ಲಿ ಪ್ರದರ್ಶನಗೊಂಡು ಪ್ರಸಿದ್ಧ ನಟಿ ಸೀಮಾ ಬಿಸ್ವಾಸ್ ಹಾಗೂ ಆದಿಲ್ ಹುಸೈನ್ ಮುಂತಾದವರಿಂದ ಪ್ರಶಂಸೆಯನ್ನು ಗಳಿಸಿತ್ತು.

ಸದ್ಯ ಆಸ್ಟ್ರೇಲಿಯಾ ಕಡೆ ಪ್ರಯಾಣ ಬೆಳೆಸಿರುವ ಗಂಟು ಮೂಟೆ ಸಿನಿಮಾ ಇಂಡಿಯನ್ ಫಿಲಂ ಫೆಸ್ಟಿವಲ್ ಆಫ್ ಮೆಲ್ಬೋರ್ನ್ ನಲ್ಲಿ ಪ್ರದರ್ಶನಗೊಳ್ಳಲಿದೆ. ಹಾಗೆಯೇ ಇಟಲಿಯ ರೋಮ್ ನಲ್ಲಿ ನಡೆಯುವ ಸೋಶಿಯಲ್ ವರ್ಲ್ಡ್ ಫಿಲಂ ಫೆಸ್ಟಿವಲ್ ನಲ್ಲಿ  ಯಂಗ್ ಇಂಡಿಪೆಂಡಂಟ್ ಸಿನಿಮಾ ಆ ದಿ ವರ್ಲ್ಡ್ ವಿಭಾಗದಲ್ಲಿ ಆಯ್ಕೆಯಾಗಿರುವ ಏಕೈಕ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೂ ಗಂಟು ಮೂಟೆ ಪಾತ್ರವಾಗಿದೆ.  ಈಗಾಗಲೇ ವಿಶ್ವದಾದ್ಯಂತ ಗಮನ ಸೆಳೆಯುವ ಮೂಲಕ ಗಂಟು ಮೂಟೆ ಸದ್ದು ಮಾಡುತ್ತಿದ್ದು, ಸದ್ಯದಲ್ಲೇ ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ.  90ರ ದಶಕದಲ್ಲಿ, ‘ಸಿನಿಮಾ’ದ ಹಾಗೆ ‘ಜೀವನ’ ಇರುತ್ತದೆ ಎಂದು ಭ್ರಮಿಸುವ 16-17ರ ಹರೆಯದ ಹುಡುಗಿ ‘ಮೀರಾ’ ಳ  ನಿಜ ಪ್ರಪಂಚದೆಡೆಗೆ ಪ್ರಯಾಣವೇ  ‘ಗಂಟುಮೂಟೆ’. ಈ ಸಿನಿಮಾವನ್ನು ಅಮೇಯುಕ್ತಿ ಸ್ಟುಡಿಯೋಸ್ ನಿರ್ಮಿಸಿದ್ದು, ರೂಪ ರಾವ್ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top