ಫೇಮಸ್ ಸ್ಪಿನ್ನರ್ ಬಯೋಪಿಕ್ ನಲ್ಲಿ ವಿಜಯ್ ಸೇತುಪತಿ!

Picture of Cinibuzz

Cinibuzz

Bureau Report

ವಿಶ್ವ ಕ್ರಿಕೆಟ್ ಕಂಡಂತಹ ಮತ್ತೊಬ್ಬ ಕ್ರಿಕೆಟ್ ದಿಗ್ಗಜನ ಬಯೋಪಿಕ್ ಗೆ ಕಾಲಿವುಡ್ ಇಂಡಸ್ಟ್ರಿ ತಯಾರಿ ಮಾಡಿಕೊಳ್ಳುತ್ತಿದೆ. ಯೆಸ್.. ಶ್ರೀಲಂಕಾ ತಂಡದ ಲೆಜೆಂಡ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಕುರಿತಾಗಿ ಸಿನಿಮಾ ಮಾಡಲು ಕಾಲಿವುಡ್ ರೆಡಿಯಾಗಿದ್ದು, ಮುತ್ತಯ್ಯನ ಪಾತ್ರ ಮಾಡಲು ವಿಜಯ್ ಸೇತುಪತಿ ಅವರನ್ನು ಅಪ್ರೋಚ್ ಮಾಡಲಾಗಿದೆ ಎನ್ನಲಾಗಿದೆ.

ಟೆಸ್ಟ್ ಕ್ರಿಕೆಟ್ ನಲ್ಲಿ 800 ವಿಕೆಟ್ ಗಳಿಸಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಮುರಳೀಧರನ್ ಪ್ರಥಮ ಸ್ಥಾನದಲ್ಲಿದ್ದಾರೆ. 18 ವರ್ಷಕ್ಕೂ ಅಧಿಕ ಸಮಯ ಕ್ರಿಕೆಟ್ ಜಗತ್ತನ್ನು ಆಳಿದ ಸ್ಪಿನ್ನರ್ ಕಥೆಯನ್ನು ತೆರೆಮೇಲೆ ನೋಡುವ ಅವಕಾಶ ಸಿಗುತ್ತಿರೋದಕ್ಕೆ ಕ್ರಿಕೆಟ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಬಿಗ್ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಲಿದೆ. ಭಾರತ, ಶ್ರೀಲಂಕಾ, ಇಂಗ್ಲೆಡ್ ನಲ್ಲಿ ಸಿನಿಮಾ ಚಿತ್ರೀಕರಣ ನಡೆಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆಯಂತೆ. ಉಳಿದಂತೆ ಅಧಿಕೃತ ಮಾಹಿತಿಗಳೆಲ್ಲವೂ ಸದ್ಯದಲ್ಲಿಯೇ ಹೊರಬೀಳಲಿದೆ.

ಇನ್ನಷ್ಟು ಓದಿರಿ

Scroll to Top