ವಿಕ್ರಂ ರವಿಚಂದ್ರನ್ ಗೆ ಆಕಾಂಕ್ಷ ಶರ್ಮ ನಾಯಕಿ!

Picture of Cinibuzz

Cinibuzz

Bureau Report

ಕ್ರೇಜಿಸ್ಟಾರ್ ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಚಿತ್ರಕ್ಕೆ ನಾಯಕಿ ಬೇಕಾಗಿದ್ದಾರೆ ಎಂದು ಈ ಮೊದಲು ಚಿತ್ರತಂಡ ಜಾಹೀರಾತನ್ನು ಹೊರಡಿಸಿತ್ತು. ಸದ್ಯ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದ್ದು, ಮುಂಬೈ ಬೆಡಗಿ ಆಕಾಂಕ್ಷ ಶರ್ಮ ತ್ರಿವಿಕ್ರಮ ಚಿತ್ರದಲ್ಲಿ ವಿಕ್ರಮ್ ಗೆ ಜೋಡಿಯಾಗಿ ಅಭಿನಯಿಸಲಿದ್ದಾರೆ.

ಮಾಡೆಲಿಂಗ್ ಹಾಗೂ ನೃತ್ಯದಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿರುವ ಆಕಾಂಕ್ಷ ಶರ್ಮಾ ಚೊಚ್ಚಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಆಗಸ್ಟ್ 9 ರ ವರಮಹಾಲಕ್ಷ್ಮಿ ಹಬ್ಬದಂದು ಸೆಟ್ಟೇರಲಿದೆ. ಇನ್ನು ದಾಂಡೇಲಿ, ಬೆಂಗಳೂರು, ರಾಜಸ್ಥಾನ, ಸಿಂಗಾಪುರದಲ್ಲಿ ಸಿನಿಮಾ ಶೂಟಿಂಗ್ ಮಾಡುವ ಪ್ಲ್ಯಾನ್ ನಲ್ಲಿ ಚಿತ್ರತಂಡವಿದೆ. ಇನ್ನು ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡುತ್ತಿದ್ದು, ಚಿತ್ರದ ಹಾಡೊಂದಕ್ಕೆ ಭಾರತದ ಮೈಕೆಲ್ ಜಾಕ್ಸನ್ ಪ್ರಭುದೇವ್ ನೃತ್ಯ ಸಂಯೋಜನೆ ಮಾಡಲಿದ್ಧಾರೆ ಎಂದು ಚಿತ್ರತಂಡ ತಿಳಿಸಿದೆ.

ಇನ್ನಷ್ಟು ಓದಿರಿ

Scroll to Top