ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ಈಗಾಗಲೇ ಅದ್ದೂರಿ ಮೇಕಿಂಗ್, ಬಹುದೊಡ್ಡ ತಾರಾಂಗಣ, ಟೀಸರ್, ಲಿರಿಕಲ್ ವಿಡಿಯೋಗಳ ಮೂಲಕ ಹೈಪ್ ಕ್ರಿಯೇಟ್ ಮಾಡಿರುವ ಕುರುಕ್ಷೇತ್ರ ಆಗಾಗ ಹೊಸ ಹೊಸ ಪೋಸ್ಟರ್ ಗಳನ್ನು ರಿಲೀಸ್ ಮಾಡುತ್ತಲೇ ಇದೆ.
21
ಇದೀಗ ರಿಲೀಸ್ ಗೆ ಮುಂಚಿತವಾಗಿ ಮತ್ತೊಂದು ಪೋಸ್ಟರ್ ಗಳನ್ನು ಚಿತ್ರತಂಡ ರಿಲೀಸ್ ಮಾಡಿದ್ದು, ಪೋಸ್ಟರ್ ನಲ್ಲಿ ದುರ್ಯೋದನ ದರ್ಶನ್ ಹಾಗೂ ಕರ್ಣ ಅರ್ಜುನ್ ಸರ್ಜಾ ಒಂದೇ ಸಿಂಹಾಸನದಲ್ಲಿ ಕುಳಿತಿದ್ದಾರೆ. ಇಬ್ಬರು ಒಟ್ಟಾಗಿ ಕುಳಿತಿರುವ ಪೋಸ್ಟರ್ ಕಂಡು ಅಭಿಮಾನಿಗಳು ಫುಲ್ ದಿಲ್ ಖುಷ್ ಆಗಿದ್ದಾರೆ. ಇದೊಂದು ಬಹುಕೋಟಿ ವೆಚ್ಚದ ಸಿನಿಮಾ ಇದಾಗಿದ್ದು ಆಗಸ್ಟ್ 2 ರಂದು ವಿಶ್ವದಾದ್ಯಂತ ತೆರೆಕಾಣಲಿದೆ.











































