ಅನೌನ್ಸ್ ಆಯ್ತು ಸಾಹೋ ರಿಲೀಸ್ ಡೇಟ್!

Picture of Cinibuzz

Cinibuzz

Bureau Report

ಬಾಹುಬಲಿ ನಂತರ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳದ ಪ್ರಭಾಸ್ ಸದ್ಯ ಸಾಹೋ ಮೂಲಕ ಮತ್ತೆ ಕಮ್ ಬ್ಯಾಕ್ ಆಗಿದ್ದಾರೆ. ಈ ಹಿಂದೆ ಆಗಸ್ಟ್ 15ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಅನೌನ್ಸ್ ಮಾಡಿದ್ದ ಚಿತ್ರತಂಡ ಪರ ಭಾಷಾ ಚಿತ್ರಗಳ ಬಿಸಿಯ ನಡುವೆ ತನ್ನ ಬಿಡುಗಡೆ ದಿನಾಂಕವನ್ನು ಮುಂದೂಡಿತ್ತು. ಮತ್ತೆ ಯಾವಾಗ ರಿಲೀಸ್ ಆಗಬಹುದೆಂಬ ಮಾಹಿತಿಯನ್ನು ರಿವೀಲ್ ಸದ್ಯದಲ್ಲಿಯೇ ಮಾಡುವುದಾಗಿಯೂ ತಿಳಿಸಿತ್ತು.

ಕೊಟ್ಟ ಮಾತಿನಂತೆ ಸಾಹೋ ಚಿತ್ರತಂಡ ತನ್ನ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಇದೇ ಆಗಸ್ಟ್ 30ರಂದು ಸಾಹೋ ಬಿಡುಗಡೆ ಮಾಡುವುದಾಗಿಯೂ ಅಧಿಕೃತವಾಗಿ ತಿಳಿಸಿದೆ. ಈ ಪೋಸ್ಟರನ್ನು ಪ್ರಭಾಸ್ ಅವರೇ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ. ಪೋಸ್ಟರ್ ನಲ್ಲಿ ಶ್ರದ್ಧಾ ಕಪೂರ್ ಮತ್ತು ಪ್ರಭಾಸ್ ರೊಮ್ಯಾಂಟಿಂಗ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

 

ಸಾಹೋ ಚಿತ್ರವನ್ನು ಸುಜೀತ್ ನಿರ್ದೇಶನ ಮಾಡಿದ್ದು, ವಂಶಿ ಕೃಷ್ಣ ಬಂಡವಾಳ ಹೂಡಿದ್ದಾರೆ. ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಸಾಹೋ ಆಗಸ್ಟ್ ಅಂತ್ಯಕ್ಕೆ ರಿಲೀಸ್ ಆಗಲಿದೆ.

ಇನ್ನಷ್ಟು ಓದಿರಿ

Scroll to Top