ತಾತನ ಕ್ರಿಕೆಟ್ ಹಾದಿಯಲ್ಲಿ ಮೊಮ್ಮಗ ಇಬ್ರಾಹಿಂ ಅಲಿ ಖಾನ್!

Picture of Cinibuzz

Cinibuzz

Bureau Report

ಅಪ್ಪ ಸ್ಟಾರ್ ಆದರೆ ಮಗನೂ ಸ್ಟಾರಾಗುವುದು, ಅಪ್ಪ ರಾಜಕಾರಣಿಯಾದರೆ ಮಗನೂ ರಾಜಕಾರಣಿಯಾಗುವುದು ಈಗೀಗ ಹೆಚ್ಚು ಪ್ರವರ್ದಮಾನಕ್ಕೆ ಬಂದಿದ್ದು, ಅದರಲ್ಲಿ ಎದ್ದವರೆಷ್ಟು? ಬಿದ್ದವರೆಷ್ಟು! ವಿಚಾರ ಬೇರೆ. ಆದರೆ ಬಾಲಿವುಡ್ ನಟ ಸೈಫ್ ಆಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ ತನ್ನ ತಂದೆಯ ಹಾದಿಯನ್ನು ಹಿಡಿಯದೇ ತನ್ನ ಅಜ್ಜ ಮನ್ಸೂರ್ ಅಲಿ ಖಾನ್ ಪಟೌಡಿಯ ಹಾದಿ ಹಿಡಿದಿದ್ದಾರೆ. ಹೌದು.. ಅವರ ತಾತ 60ರ ದಶಕಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಹೆಸರಾಂತ ಕ್ರಿಕೆಟ್ ಆಟಗಾರರಾಗಿದ್ದರು. ಸದ್ಯ ಮೊಮ್ಮಗ ಕೂಡ ತಾತನಂತೆ ಕ್ರಿಕೆಟ್ ಆಟಗಾರನಾಗಲು ಉತ್ಸುಕನಾಗಿದ್ದು, ಕ್ರಿಕೆಟ್ ನತ್ತ ಮುಖ ಮಾಡಲು ಹವಣಿಸುತ್ತಿದ್ದಾರೆ.

ಇದಕ್ಕೆ ತಂದೆ ಸೈಫ್ ಹಾಗೂ ತಾಯಿ ಅಮೃತಾ ಸಿಂಗ್ ಸಹ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದರ ಮೊದಲ ಹೆಜ್ಜೆ ಎಂಬಂತೆ ಈಗಾಗಲೇ ಇಬ್ರಾಹಿಂ ಮುಂಬೈ ಜಿಮ್​ ಖಾನದಲ್ಲಿ ಕ್ರಿಕೆಟ್ ಅಭ್ಯಾಸದಲ್ಲಿ ತೊಡಗಿದ್ದಾರೆ. ಇನ್ನು ಸೈಫ್- ಅಮೃತಾ ದಂಪತಿ ಮಗಳು ಸಾರಾ ಅಲಿ ಖಾನ್ ಈಗಾಗಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗೆಯೇ ಮಗನಿಗೂ ಚಿತ್ರರಂಗದತ್ತ ಒಲವು ಇದೆ ಎಂಬುದನ್ನು ಸೈಫ್ ಬಹಿರಂಗ ಪಡಿಸಿದ್ದಾರೆ. ಆದರೆ ಅದಕ್ಕೂ ಮೊದಲು ಕ್ರಿಕೆಟ್ ಲೋಕದಲ್ಲಿ ಒಂದು ಕೈ ನೋಡಿಯೇ ಬಿಡೋಣ ಎಂಬ ತೀರ್ಮಾನಕ್ಕೆ ಇಬ್ರಾಹಿಂ ಬಂದಿದ್ದಾರೆ. ಕ್ರಿಕೆಟ್ ಕೈ ಹಿಡಿಯದಿದ್ದರೆ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿಯಲು ನವಾಬ ಕುಡಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇನ್ನಷ್ಟು ಓದಿರಿ

Scroll to Top