ಬೌಬೌ ಚಿತ್ರದ ಆಡಿಯೋ ಬಿಡುಗಡೆ!

Picture of Cinibuzz

Cinibuzz

Bureau Report

ಶ್ವಾನ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಲಿಂಕ್ ಮಾಡಬಹುದಾದ ಚಿತ್ರಗಳು ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಬಂದಿವೆ. ಬರುತ್ತಲೂ ಇವೆ. ಪಟ್ಟಿಗೆ ಹೊಸ ಸೇರ್ಪಡೆ ಬೌಬೌ.

ಬೌಬೌ ಚಿತ್ರದಲ್ಲಿ ಒಬ್ಬ ಪುಟ್ಟ ಬಾಲಕ ಹಾಗೂ ನಾಯಿಯ ನಡುವೆ ನಡೆಯುವ ಘಟನೆಗಳೇ ಚಿತ್ರದ ಪ್ರಮುಖ ಕಥಾವಸ್ತುವಾಗಿದ್ದು, ಇದನ್ನು ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬಂಗಾಳಿ ಸೇರಿ 6 ಭಾಷೆಗಳಲ್ಲಿ ನಿರ್ಮಾಣ ಮಾಡಲು ನಿರ್ಮಾಪಕರು ಚಿಂತಿಸಿದ್ದಾರೆ, ನಾಯಿಯಾಗಿ ಲಾಬ್ರರ್ಡನ್ ನಟಿಸಿದರೆ ಬಾಲಕನಾಗಿ ಆಹಾನ್ ಕಾಣಿಸಿಕೊಂಡಿದ್ದಾರೆ. ತಮಿಳಿನ ಹಲವಾರು ನಿರ್ದೇಶಕರ ಬಳಿ ಕೆಲಸ ಮಾಡಿರುವ ಎಸ್. ಪ್ರದೀಪ್‍ಕಿಲಕರ್ ಅವರೇ ಬೌಬೌ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top