ಕಣ್ಸನ್ನೆಯ ಮೂಲಕ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಅನ್ನೋ ಪಟ್ಟ ಪಡೆದುಕೊಂಡ ಮಾಲಿವುಡ್ ನಟಿ ಪ್ರಿಯಾ ವಾರಿಯರ್. ಯಾವುದೋ ಚಿಕ್ಕ ಪಾತ್ರದ ತುಣುಕೊಂದು ಆಕೆಯನ್ನು ರಾತ್ರೋ ರಾತ್ರಿ ಸ್ಟಾರ್ ಸೆಲೆಬ್ರೆಟಿಯನ್ನಾಗಿಸಿ ಆಕೆಯ ಹಣೆಬರಹವನ್ನೇ ಬದಲಿಸಿಬಿಟ್ಟಿತ್ತು. ಇನ್ ಸ್ಟಾಗ್ರಾಂ ನಲ್ಲಿಯೂ ಪ್ರಿಯಾ ಹೆಚ್ಚು ಸಕ್ರಿಯರಾಗಿದ್ದು, ಆಕೆಯ ಒಂದೇ ಒಂದು ಪೋಸ್ಟಿಗೂ ಲಕ್ಷಗಟ್ಟಲೆ ಲೈಕ್ಸ್ ಹಾಗೂ ವ್ಯೂ ಸಿಗುತ್ತದೆ. ಇತ್ತೀಚಿಗೆ ಪ್ರಿಯಾ ವಾರಿಯರ್ ತಮ್ಮದೇ ಒಂದು ಕಿಸ್ಸಿಂಗ್ ವಿಡಿಯೋವನ್ನು ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.
https://www.instagram.com/p/B0C_FbJAY3m/?utm_source=ig_web_copy_link
ಈ ವಿಡಿಯೋದಲ್ಲಿರುವ ಪ್ರಿಯಾ ಗೆಟಪ್ ನೋಡಿದರೆ ಒರು ಆಡಾರ್ ಲವ್ ಸಿನಿಮಾದ ಚಿತ್ರೀಕರಣದಲ್ಲಿ ಮಾಡಿದ್ದ ವಿಡಿಯೋ ಎಂಬುದು ಗೊತ್ತಾಗುತ್ತದೆ. ಈ ವಿಡಿಯೋದಲ್ಲಿ ಪ್ರಿಯಾ ಒಬ್ಬ ವ್ಯಕ್ತಿಯ ಜತೆಗೆ ಆಪ್ತವಾಗಿ ಕುಳಿತಿದ್ದಾರೆ. ಇನ್ನೇನೂ ಇಬ್ಬರೂ ಹತ್ತಿರ ಬಂದು ಚುಂಬಿಸಬೇಕು ಎನ್ನವಷ್ಟರಲ್ಲಿ ಎದುರಿಗೆ ಕುಳಿತಿದ್ದ ವ್ಯಕ್ತಿ ನೀರು ಕುಡಿಯುತ್ತಾನೆ. ಮೇಲ್ನೋಟಕ್ಕೆ ಇದು ಕಿಸ್ಸಿಂಗ್ ಸೀನ್ ನಂತೆ ಕಂಡರೂ ಪಕ್ಕಾ ಪ್ರಾಂಕ್ ವಿಡಿಯೋ ಎಂಬುದು ಅಂತಿಮವಾಗಿ ತಿಳಿದು ಬರುತ್ತದೆ. ಹಾಗಿದ್ದರೂ ಈಗಾಗಲೇ ವಿಡಿಯೋ 16 ಲಕ್ಷ ವೀಕ್ಷಣೆ ಪಡೆದುಕೊಂಡು ಬಹಳಷ್ಟು ಪರ ವಿರೋಧ ಕಮೆಂಟುಗಳು ಬರುತ್ತಿದೆ.
No Comment! Be the first one.