ಸೆಪ್ಟೆಂಬರ್ 6ಕ್ಕೆ ಗಣಪನ `ಗೀತಾ’ ಬಿಡುಗಡೆ!

Picture of Cinibuzz

Cinibuzz

Bureau Report

99 ಚಿತ್ರದ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷೆಯ ಗೀತಾ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ದೊಡ್ಡ ದೊಡ್ಡ ಚಿತ್ರಗಳ ಬಿಡುಗಡೆಗೆ ಕಾಯುತ್ತಿದ್ದ ಗೀತಾ ಟೀಂ ಕಡೆಗೂ ರಿಲೀಸ್ ಡೇಟ್ ಫೈನಲ್ ಮಾಡಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಬ್ಯುಸಿ ಇರುವ ಗೀತಾ ಸಿನಿಮಾ ಸೆಪ್ಟೆಂಬರ್ 6ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ.

ಸಾಹೋ, ಪೈಲ್ವಾನ್ ಚಿತ್ರಗಳು ಈಗಾಗಲೇ ತಮ್ಮ ತಮ್ಮ ರಿಲೀಸ್ ದಿನಾಂಕವನ್ನು ಬದಲಿಸಿಕೊಂಡಿದ್ದು, ಅದೇ ಗ್ಯಾಪಲ್ಲಿ ಗೀತಾ ಸಿನಿಮಾ ತೆರೆಗೆ ಬರುವ ತರಾತುರಿಯಲ್ಲಿದೆ. ಅಂದಹಾಗೆ ಚಿತ್ರಕ್ಕೆ ವಿಜಯ್ ನಾಗೇಂದ್ರ ಆ್ಯಕ್ಷನ್ ಕಟ್ ಹೇಳಿದ್ದು, ಗಣೇಶ್ ತಮ್ಮ ಹೋಮ್ ಬ್ಯಾನರ್ ಗೋಲ್ಡನ್ ಮೂವೀಸ್ ಹಾಗೂ ಸೈಯದ್ ಸಲಾಂ ಎಸ್.ಎಸ್. ಫಿಲಂಸ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಒಂದು ತ್ರಿಕೋನ ಪ್ರೇಮ ಕಥೆಯ ಜತೆಗೆ ಗೋಕಾಕ್ ಚಳವಳಿಯ ಮೇಲೂ ಬೆಳಕು ಚೆಲ್ಲುವ ಗೀತಾ ಚಿತ್ರದಲ್ಲಿ ಗಣೇಶ್ ಗೆ ನಾಯಕಿಯರಾಗಿ ಶಾನ್ವಿ ಶ್ರೀವಾತ್ಸವ್, ಪ್ರಯಾಗ್ ಮಾರ್ಟಿನ್, ಪಾರ್ವತಿ ಅರುಣ್ ಕಾಣಿಸಿಕೊಂಡಿದ್ದಾರೆ. ಸುಧಾರಾಣಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top