ಕುರುಕ್ಷೇತ್ರಂ ತೆಲುಗು ಆಡಿಯೋ ರಿಲೀಸ್!

Picture of Cinibuzz

Cinibuzz

Bureau Report

ಕನ್ನಡದಲ್ಲಿ ಈಗಾಗಲೇ ಹವಾ ಸೃಷ್ಟಿಸಿ ಭಾರತದಾದ್ಯಂತ ಸಂಚಲನವನ್ನುಂಟು ಮಾಡಿರುವ ಸಿನಿಮಾ ಕುರುಕ್ಷೇತ್ರ. ಚಿತ್ರದ ರಿಲೀಸ್ ಗೆ ಈಗಾಗಲೇ ಕೌಂಟ್ ಡೌನ್ ಶುರುವಾಗಿದ್ದು, ಕನ್ನಡಿಗರು ಪೌರಾಣಿಕ ಚಿತ್ರವೊಂದರ ಬರುವಿಕೆಗೆ ಹಾತೊರೆಯುತ್ತಿದ್ದಾರೆ. ಇತ್ತೀಚಿಗಷ್ಟೇ ಕನ್ನಡ ಕುರುಕ್ಷೇತ್ರದ ಆಡಿಯೋವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿಕೊಂಡು ಸುಮ್ಮನಾಗಿದ್ದ ಚಿತ್ರತಂಡ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತದೆ ಎಂದು ಅನೌನ್ಸ್ ಮಾಡಿದ್ದರೂ ಸಹ ಬೇರೆ ಭಾಷೆಗಳಲ್ಲಿ ಟ್ರೇಲರ್, ಟೀಸರ್, ಆಡಿಯೋ, ಪ್ರೊಮೋಷನ್ ಗಳನ್ನು ಇಲ್ಲಿಯವರೆಗೂ ನಡೆಸಿರಲೇ ಇಲ್ಲ. ಆದರೆ ನಿರ್ಮಾಪಕ ಮುನಿರತ್ನ ಆಂಧ್ರ ನಾಡಿನಲ್ಲಿ ಕುರುಕ್ಷೇತ್ರದ ಆಡಿಯೋವನ್ನು ಹಾಗೂ ಟ್ರೇಲರನ್ನು ಸದ್ದಿಲ್ಲದೇ ರಿಲೀಸ್ ಮಾಡಿ ಬಂದಿದ್ದಾರೆ

ಆಡಿಯೋ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅರ್ಜುನ್ ಸರ್ಜಾ, ನಿರ್ಮಾಪಕ ಮುನಿರತ್ನ, ನಿರ್ದೇಶಕರಲ್ಲೊಬ್ಬರಾದ ನಾಗಣ್ಣ, ವಿತರಕ ರಾಕ್ ಲೈನ್ ವೆಂಕಟೇಶ್, ಸೋನು ಸೂದ್ ಮತ್ತಿತರರು ಪಾಲ್ಗೊಂಡಿದ್ದರು. ಇನ್ನುಳಿದಂತೆ ತಮಿಳು, ಹಿಂದಿ ಭಾಷೆಗಳ ಕಡೆಯೂ ಕುರುಕ್ಷೇತ್ರ ಸದ್ಯದಲ್ಲಿಯೇ ಹೆಜ್ಜೆ ಹಾಕಲಿದ್ದು, ನಿರ್ಮಾಪಕ ಮುನಿರತ್ನ ಅವರ ಕನಸಿನಂತೆ ಪ್ಯಾನ್ ಇಂಡಿಯಾ ಬಿಡುಗಡೆಯಾಗುವ ನಿರೀಕ್ಷೆಯೂ ಇದೆ.

ಇನ್ನಷ್ಟು ಓದಿರಿ

Scroll to Top