ಪಾತಿ ಫಿಲಂಸ್ ಅವರ `ನನ್ನ ಹೆಸರುಕಿಶೋರ ಏಳು ಪಾಸು 8′ ಚಿತ್ರವು ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ ರಿಲೀಸ್ ಗೆ ರೆಡಿಯಾಗಿದೆ. ಈ ಮಧ್ಯೆ ಚಿತ್ರದ ಲಿರಿಕಲ್ ಸಾಂಗೊಂದು ಬಿಡುಗಡೆಯಾಗಿದ್ದು, ಕೇಳುಗರಿಂದ ಮೆಚ್ಚುಗೆ ಪಡೆದಿದ್ದಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.
ತಾತ ಮತ್ತು ಮೊಮ್ಮಗನ ಬಾಂದವ್ಯ ಬೆಸೆಯುವ ಸಿನಿಮಾ ಇದಾಗಿದ್ದು, ಡ್ರಾಮಾ ಜೂನಿಯರ್ಸ್ ಖ್ಯಾತಿಯ ಮಹೇಂದ್ರ ಈ ಚಿತ್ರದಲ್ಲಿ ನಟಿಸಿದ್ದಾನೆ. ಇನ್ನು ತಾತನ ಪಾತ್ರದಲ್ಲಿ ದತ್ತಣ್ಣ ನಟಿಸಿದ್ದಾರೆ. ಉಳಿದಂತೆ ತಬಲಾ ನಾಣಿ, ಮಾಸ್ಟರ್ ಪ್ರವರ್ತ ರಾಜು, ಮಂಡ್ಯ ಆನಂದ್ ತಾರಾಗಣದಲ್ಲಿದ್ದಾರೆ. ಈ ಚಿತ್ರವು ಭಾರತಿ ಶಂಕರ್ ನಿರ್ದೆಶನದಲ್ಲಿ ಮೂಡಿಬಂದಿದೆ.
No Comment! Be the first one.