ಸೆಪ್ಟೆಂಬರ್ 12ಕ್ಕೆ ಪೈಲ್ವಾನ್ ಬಿಡುಗಡೆ ಸಾಧ್ಯತೆ!

Picture of Cinibuzz

Cinibuzz

Bureau Report

ರಾಜಕೀಯ ಆಸಕ್ತರು ಮೈತ್ರಿ ಸರ್ಕಾರವಿದ್ದಾಗ ಸರ್ಕಾರ ಉಳಿಯುತ್ತಾ? ಉಳಿಯಲ್ವಾ? ಅನ್ನೋ ಗೊಂದಲದಲ್ಲಿದ್ದರೆ, ಸಿನಿಮಾಸಕ್ತರು ಆ ಸ್ಟಾರ್ ಸಿನಿಮಾ ಆ ರಿಲೀಸ್ ಆಗಬಹುದು, ಈಗ ಆಗಬಹುದು ಅನ್ನೋ ಕನ್ ಫ್ಯೂಸ್ ನಲ್ಲಿರೋದು ಕಾಮನ್ನು. ಸದ್ಯ ಸಾಕಷ್ಟು ಅಭಿಮಾನಿಗಳಿಗೆ ಗೊಂದಲದ ಹೊಳೆಯನ್ನೇ ಹರಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಪೈಲ್ವಾನ್. ಸಿನಿಮಾ ತಯಾರಾಗುವವರೆಗೂ ಒಂದು ರೀತಿಯ ಕೌತುಕವಿದ್ದರೆ, ತಯಾರಾಗಿ ರಿಲೀಸ್ ಗೆ ರೆಡಿಯಾದ ಮೇಲೆ ಮತ್ತೊಂದು ರೀತಿಯ ಕೌತುಕತೆ ಕಾಡುವುದಕ್ಕೆ ಶುರುವಾಗಿದೆ. ಈಗಾಗಲೇ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡ್ತೀವಿ ಅಂದಿದ್ದ ಚಿತ್ರತಂಡ ಆಗಸ್ಟ್ 29ಕ್ಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಮತ್ತೆ ದಿನಾಂಕ ಬದಲಿಸಿದ್ದರು. ಆದರೆ ಪ್ಯಾನ್ ಇಂಡಿಯಾ ರಿಲೀಸ್ ಮಾಡುವ ಉದ್ದೇಶದಲ್ಲಿ ಆ ದಿನಾಂಕವನ್ನು ಬದಲಿಸಿ ಮತ್ತೂ ಒಂದು ವಾರ ಮುಂದಕ್ಕೆ ಹಾಕಿದೆ.

ಹೌದು.. ಸದ್ಯ ನಿರ್ದೇಶಕರೇ ತಿಳಿಸಿರುವ ಪ್ರಕಾರ ಪೈಲ್ವಾನ್ ಸೆಪ್ಟೆಂಬರ್ 12ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಕುರಿತು ಕೃಷ್ಣ ಅವರೇ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ಇಷ್ಟು ದಿನಗಳವರೆಗೆ ನಿಮಗೆ ಕಾಯಿಸಿದ್ದಕ್ಕೆ ಕ್ಷಮಿಸಿ. ಇದೇ ಸೆಪ್ಟೆಂಬರ್ 12ಕ್ಕೆ ವಿಶ್ವದಾದ್ಯಂತ ಪೈಲ್ವಾನ್ ಚಿತ್ರ ತೆರೆ ಕಾಣಲಿದೆ ಎಂದಿದ್ದಾರೆ. ಪೈಲ್ವಾನ್ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಇದೀಗ ಸೆಪ್ಟೆಂಬರ್ 12ಕ್ಕೆ ಕನ್ ಫರ್ಮ್ ಎನ್ನಲಾಗುತ್ತಿದೆ. ಈ ವಿಚಾರಕ್ಕೆ ಅಭಿಮಾನಿಗಳು ಖುಷಿ ಪಡಬೇಕೋ ಇಲ್ಲ ಮತ್ತೂ ಮುಂದೂಡಲ್ಪಟ್ಟರೆ ಎಂದು ಚಿಂತಿಸಬೇಕೋ ಗೊತ್ತಿಲ್ಲ.

ಇನ್ನಷ್ಟು ಓದಿರಿ

Scroll to Top