ಅದ್ದೂರಿ 2 ಚಿತ್ರಕ್ಕೆ ಝರಾ ಯೆಸ್ಮೀನ್ ನಾಯಕಿ!  

Picture of Cinibuzz

Cinibuzz

Bureau Report

ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಟಿಸುತ್ತಿರುವ ಸಿನಿಮಾ ಅದ್ದೂರಿ 2. ಟೈಟಲ್ ವಿಚಾರಕ್ಕೆ ಬಹಳಷ್ಟು ದಿನಗಳಿಂದ ಸುದ್ದಿಯಲ್ಲಿದ್ದ ಈ ಸಿನಿಮಾ ಸದ್ಯ ಹಿರೋಯಿನ್ ವಿಚಾರಕ್ಕೂ ಸುದ್ದಿಯಾಗಿದೆ. ವಿಡಿಯೋ ಆಲ್ಬಂಗಳ ಮೂಲಕ ಖ್ಯಾತಿ ಪಡೆದ ಝರಾ ಯೆಸ್ಮೀನ್ ನಾಯಕಿ ನಿರಂಜನ್ ಗೆ ನಾಯಕಿಯಾಗಿ ಜತೆಯಾಗಿದ್ದಾರಂತೆ.

ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿರುವ ಝರಾ, ಹಲವು ವಿಡಿಯೋ ಆಲ್ಬಂಗಳಲ್ಲಿ ಹೆಜ್ಜೆ ಹಾಕಿದ್ದರು. ಅಲ್ಲದೇ ಜಾಹೀರಾತುಗಳಲ್ಲೂ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಗಾಯಕ ಫಲಕ್ ಶಬೀರ್ ಜತೆಗಿನ ಏಕ್ ವಾರ್ ಗೀತೆ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. ಅದ್ದೂರಿ 2 ಮೂಲಕ ಝರಾ ಯೆಸ್ಮೀನ್ ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿದ್ದಾರೆ. ಇನ್ನು ಚಿತ್ರಕ್ಕೆ ಅಗತ್ಯವೆಂಬಂತೆ ನಿರಂಜನ್ ಸುಧೀಂದ್ರ ಸಿಕ್ಕಾಪಟ್ಟೆ ಮೈ ಹುರಿಗೊಳಿಸುತ್ತಿದ್ದು, 8 ಪ್ಯಾಕ್ ಕೂಡ ಮಾಡಲಿದ್ದಾರಂತೆ. ಆರಸ್ಟ್ ನಲ್ಲಿ ಶೂಟಿಂಗ್ ಶುರುವಾಗಲಿದ್ದು, ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಜನೆಯಲ್ಲಿ ಚಿತ್ರತಂಡವಿದೆ. ಅದ್ದೂರಿ 2 ಚಿತ್ರವನ್ನು ರಮೇಶ್ ವೆಂಕಟೇಶ್ ಬಾಬು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top