ಶಿಲ್ಪಾ ಶೆಟ್ಟಿ ಫೋಸು ಕೊಡಲು ಹೋಗಿ ಧರಿಸಿದ ಬಟ್ಟೆ ಎಳೆದುಕೊಳ್ಳುವಂತಾಯ್ತು!

Picture of Cinibuzz

Cinibuzz

Bureau Report

ಸೆಲೆಬ್ರೆಟಿಗಳು ಏನೋ ಮಾಡಲು ಹೋಗಿ ಮತ್ತೇನೋ ಅವಘಡಗಳಾಗಿ ಪಬ್ಲಿಕ್ಕಿನಲ್ಲಿ ಮಾನ ಕಳೆದುಕೊಂಡ ಸಾಕಷ್ಟು ಉದಾಹರಣೆಗಳಿವೆ. ಇಂತಹ ವಿಚಾರಕ್ಕೆ ಕೆಲವರು ನಾಚಿಕೊಂಡರೆ, ಮತ್ತೂ ಕೆಲವರು ಕೋಪಗೊಂಡು ಆ ಸ್ಥಳದಲ್ಲಿ ನಿಲ್ಲದೇ ನಾಟಕೀಯವಾಗಿ ಪರಾರಿಯಾಗಿರುತ್ತಾರೆ. ಸದ್ಯ ಇಂತಹುದೇ ತಮಾಷೆಗೆ ಗುರಿಯಾಗಿರೋದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ.

https://www.instagram.com/p/B0Qx_3ChlTH/?utm_source=ig_web_copy_link

ಇತ್ತೀಚಿಗೆ ಶಿಲ್ಪಾ ಶೆಟ್ಟಿಯವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸೂಕ್ಷ್ಮವಾಗಿ ವಿಡಿಯೋ ನೋಡಿದ ಪ್ರತಿಯೊಬ್ಬರು ಬಿದ್ದು ಬಿದ್ದು ನಗುವಂತಾಗಿದೆ. ಹೌದು ವಿಡಿಯೋದಲ್ಲಿ ಶಿಲ್ಪಾ ಶೆಟ್ಟಿ ಮರ್ಲಿನ್ ಮನ್ರೋ ಅವರ ರೀತಿಯಲ್ಲಿ ಫೋಸು ನೀಡಲು ಹೋಗಿದ್ದಾರೆ. ಆದರೆ ರಭಸವಾದ ಗಾಳಿಗೆ ಶಿಲ್ಪಾ ಶೆಟ್ಟಿ ಧರಿಸಿರುವ ಬಟ್ಟೆ ಮೇಲೆ ಹಾರಿದೆ. ವಿಡಿಯೋಗೆ ಪೋಸು ಕೊಡುವುದನ್ನು ಬಿಟ್ಟು ಮುಜುಗರಕ್ಕೀಡಾಗಿ ಬಟ್ಟೆ ಎಳೆದುಕೊಂಡ ಶಿಲ್ಪಾ ಶೆಟ್ಟಿ ನಕ್ಕು ಸುಮ್ಮನಾಗಿದ್ದಾರೆ. ಈ ವಿಡಿಯೋವನ್ನು ಸ್ವತಃ ಶಿಲ್ಪಾ ಶೆಟ್ಟಿಯವರೇ ತಮ್ಮ ಇನ್ ಸ್ಟಾಗ್ರಾಂ ಅಕೌಂಟ್ ನಲ್ಲಿ ಶೇರ್ ಮಾಡಿದ್ದು, ಸಾಕಷ್ಟು ತಮಾಷೆಯ ಕಮೆಂಟುಗಳು ಬರುತ್ತಿದೆ.

ಇನ್ನಷ್ಟು ಓದಿರಿ

Scroll to Top