ಕುರುಕ್ಷೇತ್ರ ರಿಲೀಸ್ ಇನ್ನೂ ಲೇಟ್!

Picture of Cinibuzz

Cinibuzz

Bureau Report

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ ಎಂದು ದಿನಗಣನೆ ಮಾಡುತ್ತಿದ್ದ ಅಭಿಮಾನಿಗಳು ಮತ್ತೆ ನಿರಾಸೆಪಡುವಂತಾಗಿದೆ. ಹೌದು.. ಕುರುಕ್ಷೇತ್ರ ಬಿಡುಗಡೆ ದಿನಾಂಕವನ್ನು ಮತ್ತೆ ಬದಲಿಸಿಕೊಂಡಿದೆ.  ಈ ಮೊದಲು ವರಮಹಾಲಕ್ಷ್ಮಿ ಹಬ್ಬದ ದಿನದಂದೆ ಕುರುಕ್ಷೇತ್ರ ಬಿಡುಗಡೆಯಾಗುತ್ತದೆ ಎಂದು ನಿರ್ಮಾಪಕ ಮುನಿರತ್ನ ಸುದ್ದಿಗೋಷ್ಟಿಯಲ್ಲಿ ಅನೌನ್ಸ್ ಮಾಡಿದ್ದರು. ಅದಾದಮೇಲೆ ಪುನಃ ಒಂದು ವಾರ ಮುಂಚಿತವಾಗಿ ಅಂದರೆ ಆಗಸ್ಟ್ 2ರಂದು ಸಿನಿಮಾ ರಿಲೀಸ್ ಮಾಡಲಾಗುತ್ತದೆ ಎಂದು ದಿನಾಂಕವನ್ನು ಬದಲಿಸಿರುವುದಾಗಿಯೂ ತಿಳಿಸಿದ್ದರು.

ಅದರನ್ವಯ ಕುರುಕ್ಷೇತ್ರ ಆಗಸ್ಟ್ 2ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂಬ ನಿರೀಕ್ಷೆ ಎಲ್ಲರಲ್ಲಿತ್ತು. ಸದ್ಯ ಮತ್ತೆ ದಿನಾಂಕವನ್ನು ಬದಲಿಸಿಕೊಂಡಿದ್ದು, ಮುಂದೆ ಯಾವಾಗ ಕುರುಕ್ಷೇತ್ರ ರಿಲೀಸ್ ಆಗಲಿದೆ ಎಂಬ ಮಾಹಿತಿಯನ್ನು ಚಿತ್ರತಂಡ ತಿಳಿಸಿದೆ. ಮೂಲಗಳ ಪ್ರಕಾರ ವರಮಹಾಲಕ್ಷ್ಮಿ ಹಬ್ಬದಂದೇ ಕುರುಕ್ಷೇತ್ರ ರಿಲೀಸ್ ಆಗಬಹುದೆಂದು ಹೇಳಲಾಗುತ್ತಿದ್ದು, ಅಧಿಕೃತ ಘೋಷಣೆಯಾಗಿಲ್ಲ.

ಇನ್ನಷ್ಟು ಓದಿರಿ

Scroll to Top