ಶ್ರೀರೆಡ್ಡಿ A1 ಚಿತ್ರದ ಪರ್ ಫಾರ್ಮೆನ್ಸ್ ವಿಡಿಯೋ ವೈರಲ್!

Picture of Cinibuzz

Cinibuzz

Bureau Report

ಟಾಲಿವುಡ್ ವಿವಾದಾತ್ಮಕ ನಟಿ ಶ್ರೀರೆಡ್ಡಿ ಇತ್ತೀಚಿಗೆ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಆ ವಿಡಿಯೋದಲ್ಲಿ ಶ್ರೀರೆಡ್ಡಿ  A1( Accused No. 1) ನ ತಮಿಳಿನ ಖ್ಯಾತ ಹಾಸ್ಯ ನಟ ಸಂತಾನಂ ಅವರ ಹಾಡಿಗೆ ಪರ್ ಫಾರ್ಮೆನ್ಸ್ ಮಾಡಿದ್ದಾರೆ. ಒರಿಜಿನಲ್ ವಿಡಿಯೋದಲ್ಲಿ ಚಿತ್ರದ ನಾಯಕಿ ಬ್ರಾಹ್ಮಣ ಜಾತಿಯವಳಾಗಿದ್ದು, ತನ್ನ ಪ್ರೀತಿಯನ್ನು ಸಾಬೀತುಪಡಿಸಲು ಆಫ್ ಬಾಯ್ಲ್ಡ್ ಎಗ್ ತಿನ್ನುತ್ತಾಳೆ.

ಮೊದಲಿಗೆ ಈ ಚಿತ್ರದ ಟೀಸರ್ ಬಂದಾಗ ವೀಕ್ಷಕರು ಸಾಕಷ್ಟು ಟೀಕೆಗಳನ್ನು ಮಾಡಿದರು. ವಿಶೇಷವಾಗಿ ಮಾಧ್ಯಮದವರು ಕೆಟ್ಟ ಅಭಿರುಚಿ ಹೊಂದಿರುವ ಚಿತ್ರ ಎಂದೂ ಅಭಿಪ್ರಾಯಪಟ್ಟಿದ್ದರು. ಆದರೆ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ನಟ ಸಂತಾನಂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದರಿಂದ ನೀವು ಹಾಸ್ಯವನ್ನು ಮಾತ್ರ ತೆಗೆದುಕೊಳ್ಳಬೇಕಾಗಿತ್ತು, ನಿಜವಾಗಿಯೂ ಜನರ ಭಾವನೆಗಳನ್ನು ನೋಯಿಸುವ ಉದ್ದೇಶ ನಮಗಿಲ್ಲ. ಇದಕ್ಕಾಗಿ ಕ್ಷಮೆಯಾಚಿಸುವ ಅಗತ್ಯವಿಲ್ಲ. ಇದು ಮಾಧ್ಯಮಗಳು ಮಾಡುತ್ತಿರುವ ಅಗ್ಗದ ಪ್ರಚಾರ ಎಂದು ಆರೋಪಿಸಿದ್ದರು. ಎ1 ಚಿತ್ರವನ್ನು ಇಯಕ್ಕು ನಾರ್ ಜಾನ್ಸನ್ ನಿರ್ದೇಶನ ಮಾಡಿದ್ದು, ಎಸ್. ರಾಜ್ ನಾರಾಯಣನ್ ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top