ಯಶ್ ಹೆಗಲಿಗೇರಿದ ಐರಾ!

Picture of Cinibuzz

Cinibuzz

Bureau Report

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಸಿಂಡ್ರೆಲಾ ದಂಪತಿಗಳ ಮಗು ಹುಟ್ಟುವ ಮುಂಚೆಯಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಯಶ್ ಅಭಿಮಾನಿಗಳಂತೂ ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲಿಸುವಂತೆ ನೇಮ್ ಸೆಲೆಕ್ಷನ್ ನಲ್ಲಿ ತೊಡಗಿಕೊಂಡಿದ್ದರು.

ಯಶ್ ದಂಪತಿಯ ಮಗಳು ಐರಾ ಹುಟ್ಟು 8 ತಿಂಗಳುಗಳೇ ಕಳೆದಿವೆ. ಆಗೊಂದು ಹೀಗೊಂದು ಮಗುವಿನ ಕಲರ್ ಫುಲ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಲೇ ಇರುತ್ತವೆ. ಸದ್ಯ ಐರಾ ಹೊಸ ಫೋಟೋವನ್ನು ರಾಧಿಕ ಶೇರ್ ಮಾಡಿದ್ದು, ಐರಾ ಯಶ್ ಹೆಗಲ ಮೇಲೆ ಕುಳಿತು ನಲಿಯುತ್ತಿದ್ದಾಳೆ. ಅಲ್ಲದೇ ಪೋಟೋಗೆ ರಾಧಿಕಾ ಇದೊಂದು ಯಶ್​ರ ಭರ್ಜರಿ ವರ್ಕೌಟ್ ಎಂದೂ  ಕ್ಯಾಪ್ಷನ್ ಕೊಟ್ಟಿದ್ದಾರೆ.

ಇನ್ನಷ್ಟು ಓದಿರಿ

Scroll to Top