ಕೆಜಿಎಫ್ 2 ದುಬಾರಿ ನರಾಚಿ ಸೆಟ್ಟು!

Picture of Cinibuzz

Cinibuzz

Bureau Report

ಪ್ರಪಂಚದಾದ್ಯಂತ ಸೌಂಡು ಮಾಡಿದ ಕನ್ನಡ ಸಿನಿಮಾ ಕೆಜಿಎಫ್. ವಿಭಿನ್ನ ಮೇಕಿಂಗ್, ಯಶ್ ಮ್ಯಾನರಿಸಂ, ಮ್ಯೂಸಿಕ್ ಇತ್ಯಾದಿ ಸಾಕಷ್ಟು ಅಂಶಗಳಿಂದಲೂ ಹೆಚ್ಚು ಪ್ರಶಂಸೆಯನ್ನು ಗಳಿಸಿದ ಕೆಜಿಎಫ್ ಈಗಾಗಲೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣವನ್ನು ಆರಂಭಿಸಿಕೊಂಡಿದೆ. ಈ ಮೊದಲೇ ತಿಳಿದಂತೆ ಕೆಜಿಎಫ್ ಮೈನಿಂಗ್ ರಿಲೇಟೆಡ್ ಸಿನಿಮಾ. ಚಾಪ್ಟರ್ 1ನಲ್ಲಿಯೂ ಬಹುದೊಡ್ಡ ಸೆಟ್ ಮೂಲಕವೇ ಬಹುತೇಕ ಚಿತ್ರದ ಭಾಗಗಳನ್ನು ಶೂಟ್ ಮಾಡಲಾಗಿತ್ತು. ಈಗ ಮತ್ತೆ ಅಂತಹುದೇ ದುಬಾರಿ ಸೆಟ್ ಹಾಕುವ ಮೂಲಕವೇ ಕೆಜಿಎಫ್ ಸದ್ದು ಮಾಡುತ್ತಿದೆ.

ಕಾರ್ಮಿಕ ದೃಶ್ಯದ ಸನ್ನಿವೇಶಕ್ಕಾಗಿ ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ ನರಾಚಿ ಸೆಟ್ ನಿರ್ಮಾಣ ಮಾಡಲಾಗುತ್ತಿದ್ದು, ನೂರಾರು ಕಾರ್ಮಿಕರು ಸೆಟ್ ನಿರ್ಮಾಣದಲ್ಲಿಯೂ ಶ್ರಮ ವಹಿಸುತ್ತಿದ್ದಾರೆ. ಸದ್ಯ ಸರಾಚಿ ದೃಶ್ಯ ಅನಾವರಣಗೊಂಡಿದ್ದು ಸೆಟ್ ನಿರ್ಮಾಣದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಜಿಎಫ್ ಚಾಪ್ಟರ್ 1ಕ್ಕೆ ಕಾಯುತ್ತಿದ್ದ ಯಶ್ ಅಭಿಮಾನಿಗಳು ಅದೇ ನಿರೀಕ್ಷೆಯಲ್ಲಿಯೇ ಕೆಜಿಎಫ್ 2 ಚಿತ್ರಕ್ಕಾಗಿಯೂ ಕಾಯುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top