ದಿಶಾ ಪಟಾನಿಗೆ ಮೆಮೊರಿ ಲಾಸ್ ಆಗಿದೆಯಂತೆ!

Picture of Cinibuzz

Cinibuzz

Bureau Report

ಬಾಲಿವುಡ್ ನಟಿ ದಿಶಾ ಪಟಾಣಿ ಮತ್ತು ಟೈಗರ್ ಶ್ರಾಫ್ ನಡುವೆ ಇದ್ದ ಕುಚ್ ಕುಚ್ ಅಂತ್ಯವಾಗಿದೆ ಎಂಬ ಸುದ್ದಿ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ದಿಶಾ ಪಟಾಣಿ ಕುಟಾಣಿಯಂತಹ ಹೇಳಿಕೆ ಕೊಟ್ಟು ಎಲ್ಲರಿಗೂ ಶಾಕ್ ನೀಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಈ ಕುರಿತು ದಿಶಾ ಅವರನ್ನು ಕೇಳಿದಾಗ ದಿಶಾ ಪಟಾಣಿ ತಾಳ್ಮೆಯಿಂದಲೇ ಪ್ರತಿಕ್ರಿಯಿಸಿದ್ದು, ಕೆಲ ತಿಂಗಳುಗಳ ಹಿಂದೆ ಮಾರ್ಷಲ್ ಆರ್ಟ್ಸ್ ಪ್ರಾಕ್ಟೀಸ್ ಮಾಡುವಾಗ ತಲೆಗೆ ಏಟು ಬಿದ್ದು ಕಳೆದ ಆರು ತಿಂಗಳಲ್ಲಿ ನಡೆದ ಘಟನೆಗಳೆಲ್ಲವೂ ಮರೆತು ಹೋಗಿರುವುದಾಗಿ ತಿಳಿಸಿದ್ದಾರೆ. ಮೆಮೋರಿ ಲಾಸ್​ ಆಗಿರುವುದರಿಂದ ಟೈಗರ್ ಕೆಲ ದಿನಗಳ ಕಾಲ ದಿಶಾರನ್ನು ಒಂಟಿಯಾಗಿ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಪರೋಕ್ಷವಾಗಿ ಟೈಗರ್ ಅವರನ್ನು ಬಿಟ್ಟಿರುವುದಾಗಿಯೂ ದಿಶಾ ಪಟಾಣಿ ಜಾಣರಂತೆ ಹೇಳಿದ್ದಂತೂ ನೆರೆದಿದ್ದವರಿಗೆ ಮನವರಿಕೆಯಾದದ್ದು ಮಾತ್ರ ನಿಜವೇ.

ಇನ್ನಷ್ಟು ಓದಿರಿ

Scroll to Top