ನಿಕ್ ಜೋನಸ್ ಪ್ರಿಯಾಂಕರನ್ನು ಸಮುದ್ರಕ್ಕೆ ತಳ್ಳಿದ ಫೋಟೋ ವೈರಲ್!

Picture of Cinibuzz

Cinibuzz

Bureau Report

ಸಿನಿಮಾಗಳಿಗಿಂತ ಈಗೀಗ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಇಲ್ಲಸಲ್ಲದ ವಿಚಾರಗಳಿಗೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಪ್ರಿಯಾಂಕ ವಿಚಾರವೆಂದರೆ ಸಾಕು ಟ್ರೋಲಿಗರಿಗೆ, ಕಾಮೆಂಟಿಗರಿಗೆ ಹಬ್ಬವೋ ಹಬ್ಬ. ಸೋಶಿಯಲ್ ಮೀಡಿಯಾದಲ್ಲಿ ಚಿಕ್ಕ ತುಣುಕನ್ನೂ ಬಿಟ್ಟು ಬಿಡದೇ ಹರಡಿ ಮಜಾ ತೆಗೆದುಕೊಳ್ಳುವಂತಾಗಿದೆ. ಇತ್ತೀಚಿಗೆ ಅಸ್ತಮ ವಿಚಾರಕ್ಕೆ ಸುದ್ದಿಯಾಗಿದ್ದು ಪ್ರಿಯಾಂಕ ಚೋಪ್ರಾ ಮತ್ತೆ ತನ್ನ ಗಂಡ ನಿಕ್ ಜೋನಾಸ್ ನಿಂದ ಸುದ್ದಿಯಾಗಿದ್ದಾರೆ.

ಯೆಸ್.. ಪ್ರಿಯಾಂಕಾ ಚೋಪ್ರಾ ಅವರು ಜುಲೈ 18 ರಂದು ತಮ್ಮ 37ನೇ ಹುಟ್ಟಹಬ್ಬವನ್ನು ಫ್ಲೋರಿಡಾದ ಮಿಯಾಮಿಯಲ್ಲಿ ಆಚರಿಸಿದ್ದರು. ಈ ವೇಳೆ ಅವರ ಪತಿ, ಗಾಯಕ ನಿಕ್ ಜೋನಸ್ ಅವರನ್ನು ಸಮುದ್ರಕ್ಕೆ ತಳ್ಳಿದ ಫೋಟೋ ವೈರಲ್ ಆಗುತ್ತಿದ್ದು, ಇವನಿಗ್ಯಾಕಪ್ಪ ಬಂತು ಇಂಥಾ ಬುದ್ದಿ ಎನ್ನುವಂತೆ ನೋಡುವಂತಾಗಿದೆ. ಆದರೆ ನಿಕ್ ಜೋನಾಸ್ ತಮಾಷೆಗೆ ತನ್ನ ಹೆಂಡತಿಯನ್ನು ತಳ್ಳಿದ್ದಂತೆ.. ನಿಜವೋ ಸುಳ್ಳೋ ಸ್ವಲ್ಪ ಕನ್ ಪ್ಯೂಸ್.

ಇನ್ನಷ್ಟು ಓದಿರಿ

Scroll to Top