ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಮೂರು ಶೇಡಿನಲ್ಲಿ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾ ರಾಂಧವ. ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸೆನ್ಸೇಷನ್ ಸೃಷ್ಟಿಸಿರುವ ಈ ಚಿತ್ರ ಈಗಾಗಲೇ ಆಗಸ್ಟ್ 2ರಂದು ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದೆ. ಈ ಮೊದಲೇ ಚಿತ್ರದ ಟೀಸರ್, ಟ್ರೇಲರ್, ಹಾಗೂ ವಿಡಿಯೋಗಳು ಬಿಡುಗಡೆಗೊಂಡು ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿಯೂ ಇದೆ. ರಾಂಧವ ಭುವನ್ ವೃತ್ತಿ ಬದುಕಿಗೊಂದು ಟರ್ನಿಂಗ್ ಪಾಯಿಂಟ್ ನೀಡಬಹುದಾದ ಚಿತ್ರವಾಗಲಿದೆ ಎಂಬುದು ಈಗಾಗಲೇ ಸಾಬೀತಾಗಿದೆ ಕೂಡ.

ರಿಲೀಸ್ ಗೆ ಕೆಲ ದಿನಗಳು ಬಾಕಿ ಇರುವಾಗಲೇ ಚಿತ್ರತಂಡ ರಾಂಧವ ಚಿತ್ರದ ಪ್ರಥಮ ಪ್ರತಿಯನ್ನು ಸಿದ್ಧಪಡಿಸಿ ಸೆನ್ಸಾರ್ ಗೆ ಕಳುಹಿಸಿತ್ತು. ಚಿತ್ರವನ್ನು ನೋಡಿದ ಸೆನ್ಸಾರ್ ಮಂಡಳಿ ರಾಂಧವನನ್ನು ಹಾಡಿ ಹೊಗಳಿದ್ದಲ್ಲದೇ ಯಾವುದೇ ಕಟ್ಟು ಮ್ಯೂಟಿಲ್ಲದೇ ರಾಂಧವನಿಗೆ ಯು/ಎ ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಿದೆ. ಆಗಸ್ಟ್ 2ರಂದು ರಾಂಧವ ರಿಲೀಸ್ ಆದರೆ ಕುರುಕ್ಷೇತ್ರ ಚಿತ್ರಕ್ಕೆ ಟಕ್ಕರ್ ಕೊಡಬಹುದೆಂಬ ಸಂತಸ ಚಿತ್ರತಂಡದಲ್ಲಿದ್ದರೂ ಅನಿವಾರ್ಯ ಕಾರಣಗಳಿಂದ ಕುರುಕ್ಷೇತ್ರದ ರಿಲೀಸ್ ದಿನಾಂಕ ಮುಂದೂಡಿರೋದು ಕೊಂಚ ನಿರಾಸೆ, ಧೈರ್ಯ ಮಾತ್ರ ರಾಂಧವ ಚಿತ್ರತಂಡಕ್ಕಿದೆ. ರಾಂಧವ ಚಿತ್ರವನ್ನು ಸುಕೃತಿ ಚಿತ್ರಾಲಯ ಬ್ಯಾನರ್ ನಲ್ಲಿ ಸನತ್ ಕುಮಾರ್ ನಿರ್ಮಾಣ ಮಾಡಿದ್ದು, ಸುನೀಲ್ ಆಚಾರ್ಯ ನಿರ್ದೇಶನ ಮಾಡಿದ್ದಾರೆ. ಇನ್ನು ಭುವನ್ ಗೆ ನಾಯಕಿಯಾಗಿ ಅಪೂರ್ವ ಶ್ರೀನಿವಾಸ್ ನಟಿಸಿದ್ದು, ಉಳಿದಂತೆ ಜಹಾಂಗೀರ್, ಯಮುನಾ, ವಾಣಿಶ್ರೀ ಪ್ರಮುಖ ಪಾತ್ರದಲ್ಲಿದ್ದಾರೆ.











































