ಇರ್ಫಾನ್ ಖಾನ್ ಕಣ್ಮರೆ…

Picture of Cinibuzz

Cinibuzz

Bureau Report

ಬಾಲಿವುಡ್ ಕಂಡ ಅಪ್ಪಟ ಪ್ರತಿಭಾವಂತ ಕಲಾವಿದ ಇರ್ಫಾನ್ ಖಾನ್. ಚಿತ್ರನಿರ್ದೇಶಕರು ಅವರಿಗೆಂದೇ ಚಿತ್ರಕಥೆ ಹೆಣೆಯುತ್ತಿದ್ದುದು ಹೌದು. ಪವರ್‌ಹೌಸ್ ಟ್ಯಾಲೆಂಟ್ ಎಂದೇ ಗುರುತಿಸಿಕೊಳ್ಳುವ ಇರ್ಫಾನ್ ಹಾಲಿವುಡ್‌ನಲ್ಲೂ ಛಾಪು ಮೂಡಿಸಿದ್ದರು.

ಭಾರತ ಚಿತ್ರರಂಗದ ಅತ್ಯದ್ಭುತ ನಟ ಇರ್ಫಾನ್ ಖಾನ್ ಇನ್ನಿಲ್ಲವಾಗಿದ್ದಾರೆ. ೫೪ ವರ್ಷ ವಯಸ್ಸಿನ ಇರ್ಫಾನ್ ಭಾರತದ ಹಿರಿಮೆಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದ ಅಪರೂಪದ ನಟ. ಕಳೆದ ಮೂರು ದಿನಗಳ ಹಿಂದಷ್ಟೇ ಇವರ ತಾಯಿ ಸಯಿದಾ ಬೇಗಂ ತೀರಿಕೊಂಡಿದ್ದರು. ಲಾಕ್‌ಡೌನ್ ಕಾರಣಕ್ಕಾಗಿ ಜೈಪುರದಲ್ಲಿ ನಡೆದ ಅವರ ಅಂತಿಮ ಸಂಸ್ಕಾರಕ್ಕೆ ಇರ್ಫಾನ್ ಹೋಗಲು ಸಾಧ್ಯವಾಗಿರಲಿಲ್ಲ. ಈಗ ಇರ್ಫಾನ್ ಅಮ್ಮನನ್ನು ಹಿಂಬಾಲಿಸಿ ಹೊರಟಿದ್ದಾರೆ…

ಬಾಲಿವುಡ್ ಕಂಡ ಅಪ್ಪಟ ಪ್ರತಿಭಾವಂತ ಕಲಾವಿದ ಇರ್ಫಾನ್ ಖಾನ್. ಚಿತ್ರನಿರ್ದೇಶಕರು ಅವರಿಗೆಂದೇ ಚಿತ್ರಕಥೆ ಹೆಣೆಯುತ್ತಿದ್ದುದು ಹೌದು. ಪವರ್‌ಹೌಸ್ ಟ್ಯಾಲೆಂಟ್ ಎಂದೇ ಗುರುತಿಸಿಕೊಳ್ಳುವ ಇರ್ಫಾನ್ ಹಾಲಿವುಡ್‌ನಲ್ಲೂ ಛಾಪು ಮೂಡಿಸಿದ್ದರು. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎನ್ನುವ ಹೊತ್ತಿನಲ್ಲಿ ಅಭಿಮಾನಿಗಳಿಗೆ ಇರ್ಫಾನ್ ಕಡೆಯಿಂದ ಒಂದು ಶಾಕಿಂಗ್ ಸುದ್ದಿ ಬಂದಿತ್ತು. ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಎನ್ನುವ ವಿಚಿತ್ರ ಕಾಯಿಲೆಯಿಂದ ಇರ್ಫಾನ್ ಬಳಲುತ್ತಿದ್ದಾರೆ ಎಂದು ವೈದ್ಯರು ಡಯಾಗ್ನೈಸ್ ಮಾಡಿದ್ದರು. ಇದೊಂದು ರೀತಿಯ ಕ್ಯಾನ್ಸರ್. ಇದರಿಂದ ಆತಂಕಕ್ಕೀಡಾಗಿದ್ದ ಇರ್ಫಾನ್ ಅಭಿಮಾನಿಗಳು ನಟ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದರು.

ವೈದ್ಯರ ಸಲಹೆಯಂತೆ ಇರ್ಫಾನ್ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದರು. ಒಂದು ವರ್ಷದ ಹಿಂದೆ ಲಂಡನ್‌ಗೆ ತೆರಳಿದ್ದರು.  ಎಂಟು ತಿಂಗಳ ನಂತರ ಮುಂಬಯಿಗೆ ಹಿಂದಿರುಗಿದ್ದರು. ಮುಂಬಯಿ ಏರ್‌ಪೋರ್ಟ್‌ನಲ್ಲಿ ಅಭಿಮಾನಿಗಳು ಸೆರೆಹಿಡಿದ ಇರ್ಫಾನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ತಲೆಗೆ ಟೊಪ್ಪಿ ತೊಟ್ಟು ಸ್ಕಾರ್ಫ್ ಹಾಕಿಕೊಂಡು ಏರ್‌ಪೋರ್ಟ್‌ನಿಂದ ಇರ್ಫಾನ್ ಹೊರನಡೆಯುತ್ತಿರುವ ಫೋಟೋಗಳವು. ಇದಾದನಂತರ ಇರ್ಫಾನ್  ಗುಣಮುಖರಾಗಿದ್ದಾರೆ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ಇರ್ಫಾನ್ ಯಾವತ್ತೂ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

ಇನ್ನಷ್ಟು ಓದಿರಿ

Scroll to Top