ಒಟಿಟಿಗೆ ಬಂತು ನಿವೇದಿತಾ ಶಿವರಾಜ್‌ ಕುಮಾರ್‌ ನಿರ್ಮಾಣದ ಫೈರ್‌ ಫ್ಲೈ..ಎಲ್ಲಿ? ಯಾವಾಗ ಸ್ಟ್ರೀಮಿಂಗ್?‌

Picture of Cinibuzz

Cinibuzz

Bureau Report

ನಿವೇದಿತಾ ಶಿವರಾಜ್‌ ಕುಮಾರ್‌ ಚೊಚ್ಚಲ ಬಾರಿಗೆ ನಿರ್ಮಾಣ ಮಾಡಿರುವ ಫೈರ್‌ ಫ್ಲೈ ಸಿನಿಮಾವೀಗ ಒಟಿಟಿ ಎಂಟ್ರಿ ಕೊಟ್ಟಿದೆ. ಏಪ್ರಿಲ್‌ 24ರಂದು ರಿಲೀಸ್‌ ಆಗಿದ್ದ ಈ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ಫೈರ್‌ ಫ್ಲೈ ಸಿನಿಮಾ ಅಮೇಜಾನ್‌ ಪ್ರೈಮ್‌ ವಿಡಿಯೋದಲ್ಲಿ ಸ್ಟ್ರೀಮಿಂಗ್‌ ಕಂಡಿದೆ. ಶ್ರೀಮುತ್ತು ಸಿನಿ ಸರ್ವೀಸ್ ಸಂಸ್ಥೆಯಡಿ ನಿವೇದಿತಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು.

ಫೈರ್‌ ಫ್ಲೈ ಸಿನಿಮಾವನ್ನು ವಂಶಿ ಕೃಷ್ಣ ನಟಿಸಿ, ನಿರ್ದೇಶಿಸಿದ್ದಾರೆ. ನಾಯಕಿಯಾಗಿ ರಚನಾ ಇಂದರ್ ಅಭಿನಯಿಸಿದ್ದರು. ಅಚ್ಯುತ್ ಕುಮಾರ್, ಸುಧಾರಾಣಿ, ಶೀತಲ್ ಶೆಟ್ಟಿ, ಆನಂದ್ ನೀನಾಸಂ, ಚಿತ್ಕಲಾ ಬಿರಾದರ್, ಮೂಗು ಸುರೇಶ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಸಿಕೊಂಡಿದ್ದರು. ಚರಣ್ ರಾಜ್ ಅವರು ‘ಫೈರ್ ಫ್ಲೈ’ ಚಿತ್ರಕ್ಕೆ ಸಂಗೀತ ನೀಡಿದ್ದರು.

ಜಯರಾಮ್ ಶ್ರೀನಿವಾಸ್ ಹಾಗೂ ಹ್ಯಾಪಿ ಹನುಮಂತ್ ಅವರ ಸಹ- ನಿರ್ದೇಶನ ಈ ಚಿತ್ರಕ್ಕಿದೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣ, ರಘು ನಿಡುವಳ್ಳಿ ಅವರ ಸಂಭಾಷಣೆ, ಸುರೇಶ್ ಆರ್ಮುಗಮ್ ಅವರ ಸಂಕಲನ, ವರದರಾಜ್ ಕಾಮತ್ ಅವರ ಕಲೆ, ಅರ್ಜುನ್ ರಾಜ್ ಅವರ ಸಾಹಸ, ರಾಹುಲ್ ಮಾಸ್ಟರ್ ಅವರ ನೃತ್ಯ ಸಂಯೋಜನೆ ಫೈರ್ ಫ್ಲೈ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top