ಕಮಲ್ ಮಗಳು ಅಕ್ಷರಾಗೆ ಮೋಸ ಮಾಡಿದ್ದು ಯಾರು?
ಕಮಲ್ ಹಾಸನ್ ಮಗಳು ಅಕ್ಷರಾ ಹಾಸನ್ ಕೂಡಾ ಈಗ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾಳೆ. ಈಗಷ್ಟೇ ಚಿಗುರುತ್ತಿರುವ ಅಕ್ಷರಾ ಈಗ ಸೋಷಿಯಲ್ ಮೀಡಿಯಾದಲ್ಲಿ ಕಣ್ಣೀರು ಹಾಕಿದ್ದಾಳೆ. ಊಟಿಯಲ್ಲಿ ನಡೆದ ಒಂದು ಘೋರ ವಂಚನೆಯ ಬಗ್ಗೆ ಜನರಿಗೆ ಎಚ್ಚರಿಕೆ ಕೊಟ್ಟಿದ್ದಾಳೆ. ಏನಪ್ಪಾ ಅಂದ್ರೆ, ಯಾರೋ ಒಬ್ಬ ಇಬ್ರಾಹಿಂ ಅಖ್ತರ್ ಅನ್ನೋ ಮಹಾನುಭಾವ, ಅಕ್ಷರಾ ಮತ್ತು ಆಕೆಯ ಕುಟುಂಬದ ಹೆಸರನ್ನು ದುರ್ಬಳಕೆ ಮಾಡಿಕೊಂಡು ದೊಡ್ಡ ಮಟ್ಟದ ಫ್ರಾಡ್‌ಗೆ ಇಳಿದಿದ್ದಾನಂತೆ.

ಅಕ್ಷರಾ ಈ ವಿಚಾರವಾಗಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡ ಸಾಲುಗಳು ಹೀಗಿವೆ.. “ಇಬ್ರಾಹಿಂ ಅಖ್ತರ್ ಅನ್ನೋ ವ್ಯಕ್ತಿ ಊಟಿಯಲ್ಲಿ ಆಫೀಸ್ ಇಟ್ಟುಕೊಂಡು, ನನ್ನ ಮತ್ತು ನನ್ನ ಕುಟುಂಬದ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾನೆ. ನಾವೆಲ್ಲಾ ಸಿನಿಮಾ ಪ್ರೊಡಕ್ಷನ್‌ನಲ್ಲಿ ಭಾಗಿಯಾಗಿದ್ದೇವೆ ಅಂತ ಸುಳ್ಳು ಹೇಳುತ್ತಿದ್ದಾನೆ. ಈ ಹೇಳಿಕೆಗಳು ಸಂಪೂರ್ಣವಾಗಿ ಸುಳ್ಳು. ನಮಗೆ ಅವನಿಗೂ ಯಾವುದೇ ಸಂಬಂಧವಿಲ್ಲ!”ಎಂದು ಸ್ಪಷ್ಟವಾಗಿ ಹೇಳಿದ್ದಾಳೆ, ನಮಗೆ ಆ ವ್ಯಕ್ತಿಗೂ ಒಂದು ಇಂಚು ಸಂಬಂಧವಿಲ್ಲ ಅಂತಾ ಈ ಮೂಲಕ ಅಫಿಡವಿಟ್ ಕೊಟ್ಟಿದ್ದಾಳೆ. ಅಷ್ಟೇ ಅಲ್ಲ, ಆತನ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿದ್ದೇವೆ ಎಂದೂ ಹೇಳಿದ್ದಾಳೆ . “ದಯವಿಟ್ಟು ಎಚ್ಚರದಿಂದಿರಿ ಮತ್ತು ಈ ವ್ಯಕ್ತಿಯನ್ನು ಸಂಪರ್ಕಿಸಬೇಡಿ. ಈ ಪೋಸ್ಟ್ ಎಲ್ಲರ ಗಮನಕ್ಕೆ ತರಲು” ಎಂದು ಎಚ್ಚರಿಕೆಯನ್ನೂ ನೀಡಿದ್ದಾಳೆ. ಅಕ್ಷರಾಳ ಈ ಹೇಳಿಕೆ ಈಗ ವೈರಲ್ ಆಗಿದೆ. ಅಭಿಮಾನಿಗಳು ಮತ್ತು ಫಾಲೋವರ್ಸ್ ಆಘಾತ ವ್ಯಕ್ತಪಡಿಸಿದ್ದಾರೆ, ಅಕ್ಷರಾಳ ಬೆಂಬಲಕ್ಕೆ ನಿಂತಿದ್ದಾರೆ.









































