ಸೂಪರ್ ಸ್ಟಾರ್ ಮಹೇಶ್ ಬಾಬು ಸದ್ಯ ತಮ್ಮ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘SSMB 29’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಈ ಚಿತ್ರ ಜಗತ್ತಿನಾದ್ಯಂತ ಸಾಗುವ ಒಂದು ಆಕ್ಷನ್-ಅಡ್ವೆಂಚರ್ ಕಥೆಯಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಲಾಗುತ್ತಿದೆ. ಇದು ಒಂದು ಅದ್ಭುತ ಸಿನಿಮಾ ಅನುಭವ ನೀಡಲಿದೆ ಅಂತಾ ಮಹೇಶ್ ಬಾಬು ಅಭಿಮಾನಿಗಳು ನಂಬಿದ್ದಾರೆ.

ರಾಜಮೌಳಿ ಅವರ ಚಿತ್ರಗಳೆಂದರೆ ಘೋಷಣೆಯಿಂದ ಹಿಡಿದು ಬಿಡುಗಡೆಯವರೆಗೂ ಸಾಕಷ್ಟು ಸಮಯ ತೆಗೆದುಕೊಳ್ಳುವುದು ಸಹಜ. ಇದು ಅಭಿಮಾನಿಗಳ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಆದರೆ, ಮಹೇಶ್ ಬಾಬು ತಮ್ಮ ಆಫ್-ಸ್ಕ್ರೀನ್ ಕಾರ್ಯಕ್ರಮಗಳ ಮೂಲಕ ಅಭಿಮಾನಿಗಳಲ್ಲಿ ಸದಾ ಕ್ರೇಜ್ ಉಳಿಸಿಕೊಳ್ಳುತ್ತಾರೆ.
ಇತ್ತೀಚೆಗೆ, ಹೈದರಾಬಾದ್‌ನಲ್ಲಿ ನಡೆದ ಅಖಿಲ್ ಅಕ್ಕಿನೇನಿ ಮತ್ತು ಜೈನಾಬ್ ರವ್ದ್ಜೀ ಅವರ ಅದ್ದೂರಿ ವಿವಾಹ ಸ್ವಾಗತ ಸಮಾರಂಭದಲ್ಲಿ ಮಹೇಶ್ ಬಾಬು ಭಾಗವಹಿಸಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಕೇವಲ ಒಂದು ಸಿಂಪಲ್ ಟೀ-ಶರ್ಟ್‌ನಲ್ಲಿ ಕಾಣಿಸಿಕೊಂಡರೂ, ಅವರ ಸರಳ ಸೌಂದರ್ಯ ಮತ್ತು ಸ್ಟೈಲ್ ಎಲ್ಲರನ್ನೂ ಮೋಡಿ ಮಾಡಿದೆ. ಅವರ ಯೌವನಯುತ ಮತ್ತು ವಯಸ್ಸನ್ನು ಮರೆಮಾಚುವ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. “ರಿವರ್ಸ್ ಏಜಿಂಗ್” ಎನ್ನುವುದು ಇವರನ್ನೇ ನೋಡಿ ಕಲಿಯಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೊಗಳಿಕೆಯ ಸುರಿಮಳೆಯೇ ಸಿಕ್ಕಿದೆ.
ಈ ಸಮಾರಂಭದಲ್ಲಿ ಮಹೇಶ್ ಬಾಬು ಅವರೊಂದಿಗೆ ಪತ್ನಿ ನಮ್ರತಾ ಶಿರೋಡ್ಕರ್ ಮತ್ತು ಮಗಳು ಸಿತಾರಾ ಕೂಡ ಭಾಗವಹಿಸಿದ್ದರು. ನವದಂಪತಿಗಳೊಂದಿಗೆ ನಾಗಾರ್ಜುನ ಮತ್ತು ಅಮಲಾ ಅಕ್ಕಿನೇನಿ ದಂಪತಿಗಳು ಸಹ ಫೋಟೋಗೆ ಪೋಸ್ ನೀಡಿ, ಈ ಕ್ಷಣವನ್ನು ಮತ್ತಷ್ಟು ಸ್ಮರಣೀಯವಾಗಿಸಿದರು.












































