ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಖ್ಯಾತ ಹಿನ್ನೆಲೆ ಗಾಯಕಿ ಮಂಗ್ಲಿ, ಸ್ವತಂತ್ರ ಸಂಗೀತ ಆಲ್ಬಂಗಳಿಂದಲೇ ಜನಪ್ರಿಯತೆ ಗಳಿಸಿದ್ದವಳು. ಸದ್ಯ ಕನ್ನಡ ಚಿತ್ರರಂಗದಲ್ಲೂ ಮಂಗ್ಲಿ ಶ್ಯಾನೆ ಫೇಮಸ್ಸು. ಮೊನ್ನೆ ದಿನ ಈಕೆ ತನ್ನ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಳು. ಹೈದರಾಬಾದ್‌ನ ಯೆರ್ಲಪಲ್ಲಿ ಬಳಿಯ ಐಷಾರಾಮಿ ಫಾರ್ಮ್‌ಹೌಸ್‌ನಲ್ಲಿ ಆಯೋಜಿಸಲಾಗಿದ್ದ ಈ ಪಾರ್ಟಿಗೆ ಅವರ ಆಪ್ತರು ಮತ್ತು ಕುಟುಂಬ ಸದಸ್ಯರು ಸುಮಾರು 50 ಮಂದಿ ಹಾಜರಿದ್ದರು.

ಪಾರ್ಟಿ ತಡರಾತ್ರಿಯವರೆಗೂ ನಡೆಯುತ್ತಲೇ ಇತ್ತು. ಜೋರಾದ ಶಬ್ದದಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸರಿಸುಮಾರು ರಾತ್ರಿ 3 ಗಂಟೆಯ ಸುಮಾರಿಗೆ, ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದರು. ತಪಾಸಣೆಯ ವೇಳೆ ಪೊಲೀಸರಿಗೆ ಶಾಕಿಂಗ್ ಅಂಶಗಳು ಪತ್ತೆಯಾಗಿವೆ. ಪಾರ್ಟಿಯಲ್ಲಿ ವಿದೇಶಿ ಮದ್ಯದ ಜೊತೆಗೆ ಗಾಂಜಾ (ಮಾರಿಜುವಾನಾ) ಸೇವನೆ ಕೂಡ ಕಂಡುಬಂದಿದೆ! ಅಲ್ಲಿದ್ದ ಎಲ್ಲರಿಗೂ ರಕ್ತ ಪರೀಕ್ಷೆ ನಡೆಸಲಾಗಿದ್ದು, ಮಂಗ್ಲಿ ಸೇರಿದಂತೆ ಹಲವರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.

ಈ ಘಟನೆಯ ಕುರಿತು ರಂಗಾ ರೆಡ್ಡಿ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಅದ್ದೂರಿ ಆಚರಣೆ ಈಗ ವಿವಾದದ ಸುಳಿಗೆ ಸಿಲುಕಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾಳೆ. ತೆಲುಗು ಸಂಗೀತ ಲೋಕದ ಈ ಖ್ಯಾತ ಗಾಯಕಿ ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾಳೆ. ಮುಂದೇನಾಗಲಿದೆ ಎಂಬುದರ ಕುರಿತು ಕುತೂಹಲ ಮನೆ ಮಾಡಿದೆ. ಸದ್ಯಕ್ಕೆ ಮಂಗ್ಲಿ ಈ ಬಗ್ಗೆ ವಿಡಿಯೋವೊಂದನ್ನು ಮಾಡಿ, ಪಾರ್ಟಿಯಲ್ಲಿ ಬರೀ ಲಿಕ್ಕರ್ ಮಾತ್ರ ಇತ್ತು. ಬೇರೇನೂ ಇರಲಿಲ್ಲ ಅಂತಾ ಪುಂಗಿದ್ದಾಳೆ. ಅಸಲೀ ವರಸೆ ಬೇರೇನೇ ಇದೆ.!!











































