ಮಾಲ್ಡೀವ್ಸಲ್ಲಿ ಕೀರ್ತಿ ಸುರೇಶ್ ಬ್ಯಾಕ್‌ಲೆಸ್!

Picture of Cinibuzz

Cinibuzz

Bureau Report

ಇತ್ತೀಚೆಗೆ ತಮ್ಮ ಪತಿ ಆಂಟನಿ ಥಾಟಿಲ್ ಜೊತೆಗಿನ ಮಾಲ್ಡೀವ್ಸ್ ವಿಹಾರದ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದ ನಟಿ, ರಜೆ ಮುಗಿದರೂ ಅವರ ಮನಸ್ಸು ಮಾತ್ರ ಇನ್ನೂ ಆ ನೀಲಿ ನೀರಿನ ಕಿನಾರೆಗಳಲ್ಲೇ ಇದ್ದಂತಿದೆ. ಸಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಕೀರ್ತಿ, ತಮ್ಮ ಮಾಲ್ಡೀವ್ಸ್ ಪ್ರವಾಸದ ಇನ್ನಷ್ಟು ಫೋಟೋಗಳು ಮತ್ತು ಚಿಕ್ಕ ವಿಡಿಯೋ ತುಣುಕುಗಳನ್ನು ಹಂಚಿಕೊಂಡಿದ್ದಾರೆ. “ಮಾನಸಿಕವಾಗಿ ಮಾಲ್ಡೀವ್ಸ್‌ನಲ್ಲಿ, ದೈಹಿಕವಾಗಿ ಇಲ್ಲಿʼʼ ಎಂಬ ಕ್ಯಾಪ್ಶನ್‌ನೊಂದಿಗೆ ಪೋಸ್ಟ್ ಮಾಡಿದ್ದಾರೆ. ಅವರ ಈ ‘ಹಾಲಿಡೇ ಮೂಡ್’ ಅಭಿಮಾನಿಗಳನ್ನು ಸಖತ್ ಇಷ್ಟಪಡಿಸಿದೆ. ಈ ಪೋಸ್ಟ್‌ನಲ್ಲಿ ವಿಶೇಷವಾಗಿ ಒಂದು ಫೋಟೋ ಎಲ್ಲರ ಗಮನ ಸೆಳೆದಿದೆ – ಅದು ಅವರ ಬ್ಯಾಕ್‌ಲೆಸ್ ಶಾಟ್! ಈ ಫೋಟೋ ಇಂಟರ್‌ನೆಟ್‌ನಲ್ಲಿ ದಿನದೊಪ್ಪತ್ತಿನಲ್ಲಿ ವೈರಲ್ ಆಗಿ ಸಖತ್ ಸದ್ದು ಮಾಡುತ್ತಿದೆ.


ಪೋಸ್ಟ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಲೈಕ್‌ಗಳು ಮತ್ತು ಕಾಮೆಂಟ್‌ಗಳು ಹರಿದುಬಂದಿವೆ. ಕೀರ್ತಿ ಅವರ ಸರಳ ಸೌಂದರ್ಯ ಮತ್ತು ಮನಮೋಹಕ ಹೊಳಪಿಗೆ ಅಭಿಮಾನಿಗಳು ಮನಸೋತಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.ʼ

ಕೀರ್ತಿ ಸುರೇಶ್ ತಮ್ಮ ಬಹುಕಾಲದ ಗೆಳೆಯ ಆಂಟನಿ ಥಾಟಿಲ್ ಅವರೊಂದಿಗೆ 2024ರ ಡಿಸೆಂಬರ್‌ನಲ್ಲಿ ಗೋವಾದ ಸುಂದರ ರೆಸಾರ್ಟ್‌ನಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾದರು. ಸದ್ಯ ನವದಂಪತಿ ತಮ್ಮ ಹೊಸ ಜೀವನದ ಮಧುರ ಕ್ಷಣಗಳನ್ನು ಸವಿಯುತ್ತಿದ್ದಾರೆ. ಮುಂದಿನ ತೆಲುಗು ಚಿತ್ರದ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲವಾದರೂ, ಕೀರ್ತಿ ‘ಅಕ್ಕಾ’ ಎಂಬ ಮುಂಬರುವ ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಒಂದು ಬಾಲಿವುಡ್ ಚಿತ್ರವೂ ಅವರ ಕೈಯಲ್ಲಿದೆ.

ಶಿವು ಅರಿಸಿನಗೆರೆ

ಇನ್ನಷ್ಟು ಓದಿರಿ

Scroll to Top