“ಶಿವಣ್ಣ ಮೊದಲಿನಂತಿಲ್ಲ!’’ – ತುಂಬಾ ಜನರ ಇವತ್ತಿನ ಕಮೆಂಟ್ ಇದು!

ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ಅದ್ಯಾವುದೋ ವಿಡಿಯೋವೊಂದನ್ನೇ ನೋಡಿ ಜನ ತೀರ್ಮಾನಕ್ಕೆ ಬಂದುಬಿಟ್ಟಿದ್ದಾರೆ. ʻʻಪ್ರೀತಿಯಿಂದ ಬಂದ ಅಭಿಮಾನಿಗಳ ಮೇಲೆ ಶಿವಣ್ಣ ಸಿಡುಕಿದ್ದಾರೆ. ಬಾಯಿಗೆ ಬಂದಂಗೆ ಬೈದಿದ್ದಾರೆʼʼ ಅಂತೆಲ್ಲಾ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ…!
ಮನುಷ್ಯತ್ವ, ಮಾನವೀಯತೆಗೆ ಅರ್ಥ ಗೊತ್ತಿರುವ ಯಾರೇ ಆದರೂ ಇಂಥ ಮಾತಾಡುವುದಿಲ್ಲ. ಒಂದೇ ಒಂದು ಸಲ ಯೋಚಿಸಲಿ, ಶಿವರಾಜ್ ಕುಮಾರ್ ಅವರ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ, ಈ ಹೊತ್ತಿಗೆ ಯಾರ ಕಣ್ಣಿಗೂ ಬೀಳದಂತೆ ಅಜ್ಞಾತರಾಗಿಬಿಡುತ್ತಿದ್ದರು.
ಶಿವಣ್ಣನಿಗೆ ಎನರ್ಜಿ, ವಿಲ್ ಪವರ್ ಜಾಸ್ತಿ ಎಂಬ ಮಾತುಗಳು ಏನೇ ಇರಲಿ, ಅವರೂ ಮನುಷ್ಯ ತಾನೆ? ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಅವರು ನಿಜಕ್ಕೂ ಬಸವಳಿದುಹೋಗಿದ್ದಾರೆ. ಸಹೋದರ ಪುನೀತ್ ರಾಜ್ ಕುಮಾರ್ ಕಾಲವಾದ ದುಃಖದಲ್ಲಿರುವಾಗಲೇ ಅವರಿಗೆ ಅನಾರೋಗ್ಯ ಕೂಡಾ ಎದುರಾಯ್ತು. ಕ್ಯಾನ್ಸರ್‌ನಂಥ ಮಹಾಮಾರಿ ಅವರನ್ನು ಹಿಂಡಿತ್ತು. ಹೊರದೇಶಕ್ಕೋಗಿ ಟ್ರೀಟ್ಮೆಂಟ್ ತೆಗೆದುಕೊಂಡು ಬಂದರು. ಅದೇನು, ಜ್ವರ, ನೆಗಡಿ ಇದ್ದಂಗಾ? ಟ್ರೀಟ್ ಮೆಂಟ್ ಮುಗಿದ ನಂತರವೂ ವರ್ಷಗಟ್ಟಲೆ ಔಷಧಗಳನ್ನು ತೆಗೆದುಕೊಳ್ಳಬೇಕು. ದೇಹದೊಳಕ್ಕೆ ಹೋದ ಆ ಮೆಡಿಸಿನ್ನುಗಳು ಹೈರಾಣು ಮಾಡುತ್ತವೆ. ಅವರ ದೇಹಕ್ಕೆ ವಿಶ್ರಾಂತಿಯ ಅಗತ್ಯವಿರುತ್ತದೆ. ಹೋದಲ್ಲಿ ಬಂದಲ್ಲಿ ಜನ ಮುಗಿಬಿದ್ದರೆ, ಅವರು ತಾನೆ ಏನು ಮಾಡಲು ಸಾಧ್ಯ? ಈ ಹೊತ್ತಲ್ಲೂ ಅವರು ಒಂದರ ಹಿಂದೆ ಒಂದು ಸಿನಿಮಾವನ್ನು ಮಾಡುತ್ತಿದ್ದಾರೆ. ಆರೋಗ್ಯ ಕೈಕೊಟ್ಟ ಸಂದರ್ಭದಲ್ಲೂ ಯಾವುದೇ ನಿರ್ಮಾಪಕನಿಗೆ ಅನ್ಯಾಯವಾಗದಂತೆ ನೋಡಿಕೊಂಡಿದ್ದಾರೆ. ಆಸ್ಪತ್ರೆಯಿಂದ ಬರುತ್ತಲೇ ಶೂಟಿಂಗು, ಪ್ರಮೋಷನ್ನು ಅಂತಾ ಓಡಾಡುತ್ತಿದ್ದಾರೆ. ಶಿವಣ್ಣ ಅಂದರೆ ಈಗ ಬರೀ ಸ್ಯಾಂಡಲ್ ವುಡ್ ಗೆ ಮಾತ್ರ ಸ್ಟಾರ್ ಅಲ್ಲ. ತಮಿಳು-ತೆಲುಗಲ್ಲೂ ಅವರಿಗೆ ಅಭಿಮಾನಿಗಳಿದ್ದಾರೆ.
ಶಿವರಾಜ್ ಕುಮಾರ್ ಅವರ ಅಭಿಮಾನಿ ಅನ್ನಿಸಿಕೊಂಡವರು ಈಗ ಅವರನ್ನು ಹೆಚ್ಚು ಹಿಂಸಿಸಬಾರದು. ಏನೇ ಪಬ್ಲಿಕ್ ಫಿಗರ್ ಆಗಿದ್ದರೂ ಅವರಿಗೇ ಆದ ಖಾಸಗೀ ಬದುಕಿರುತ್ತೆ. ಅಭಿಮಾನಿಗಳಿಗಾಗಿ ಅವರು ಸಿನಿಮಾ ಮಾಡ್ತಿರೋದೇ ದೊಡ್ಡ ವಿಚಾರ. ಇಂಥದ್ದರಲ್ಲಿ ಎಲ್ಲೆಂದರಲ್ಲಿ ಫೋಟೋಗಾಗಿ ಕಾಟ ಕೊಟ್ಟರೆ ಅವರು ತಾನೆ ಏನು ಮಾಡಲು ಸಾಧ್ಯ? ಯಾರಿಗಾದರೂ ಸಿಟ್ಟು ಬರುತ್ತದೆ. ಅದನ್ನು ವಿಡಿಯೋ ಮಾಡಿಕೊಂಡು, ತಮಗೆ ಬೇಕಾದಂತೆ ತಿರುಚೋ ದುಷ್ಟರಿಗೇನೂ ಕಡಿಮೆಯಿಲ್ಲ. ಒಬ್ಬ ಹಿರಿಯ ನಾಯಕನಟನ ವಿಡಿಯೋ ಹಾಕಿ ನ್ಯೂಸೆನ್ಸ್ ಕ್ರಿಯೇಟ್ ಮಾಡೋದಾಗಲಿ, ಮನಸ್ಸಿಗೆ ಬಂದಂಗೆ ಕಮೆಂಟ್ ಮಾಡೋದಾಗಲಿ ಒಳ್ಳೇದಲ್ಲ.
ಇವೆಲ್ಲ ಏನೇ ಆಗಲಿ, ಶಿವರಾಜ್ ಕುಮಾರ್ ಅವರು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಲಿ…!
Please, Don’t Disturb Shivanna’s Peace!
“Shivanna is not the same anymore!” – this is a common comment from many people today.
People have jumped to conclusions after watching some random video circulating on social media. They are posting things like, “Shivanna got angry with fans who came to him with love. He scolded them harshly…!”
Anyone who understands the meaning of humanity and compassion wouldn’t say such things. Just think for a moment. If anyone else were in Shivarajkumar’s place, they would have probably vanished from the public eye by now, seeking solitude.
No matter how much we talk about Shivanna’s energy and willpower, at the end of the day, he is human, isn’t he? In the last three to four years, he has been truly exhausted. While still grieving the loss of his brother, Puneeth Rajkumar, he had to face his own health crisis. A formidable disease like cancer took a toll on him. He had to travel abroad for treatment. And that’s not like recovering from a simple fever or a cold, is it? Even after the treatment is over, one has to take medication for years. Those medicines that enter the body can be incredibly draining and demand a lot of rest. When people mob him everywhere he goes, what can he possibly do?
Even amidst all this, he continues to work on one film after another. Despite his health issues, he has made sure that no producer suffers a loss. He has been jumping into shoots and promotional events right after getting back from the hospital. Today, Shivanna isn’t just a star in Sandalwood; he has fans in the Tamil and Telugu industries as well.
Those who call themselves fans of Shivarajkumar should not trouble him more at this time. No matter how much of a public figure he is, he too has a private life. The very fact that he continues to make films for his fans is a big deal. In such a situation, if people constantly pester him for photos everywhere, what can he do? Anyone would get angry. And there is no shortage of mischievous people who will record it, edit it as they please, and twist the narrative. It is not right to create a nuisance by posting a video of a senior actor or to comment on it as one pleases.
Regardless of all this, let’s hope Shivarajkumar focuses more on his health!











































