ಕೆಜಿಎಫ್‌ನಲ್ಲಿ ಅರಳಿದ ಕನ್ನಡದ ಕನಸು!

Picture of Cinibuzz

Cinibuzz

Bureau Report

ಈಗೊಂದಷ್ಟು ವರ್ಷಗಳ ಹಿಂದೆ ತಮನ್ನ ತೆಲುಗು ಸೇರಿದಂತೆ ನಾನಾ ಭಾಷೆಗಳಲ್ಲಿ ಮೆರೆಯುತ್ತಿದ್ದರಲ್ಲಾ? ಆ ಕಾಲದಲ್ಲಿಯೇ ಆಕೆ ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಾರೆಂಬ ಸುದ್ದಿ ಆಗಾಗ ಹರಿದಾಡುತ್ತಲೇ ಇತ್ತು. ಆದರೆ ಯಾಕೋ ಅದಕ್ಕೆ ಈವರೆಗೂ ಕಾಲ ಕೂಡಿ ಬಂದಿಲ್ಲ. ಆದರೆ ಯಶ್ ಅಭಿನಯದ ವಿಶೇಷ ಹಾಡೊಂದರಲ್ಲಿ ತಮನ್ನಾ ಕುಣಿದಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಕನ್ನಡದಲ್ಲಿ ನಟಿಸೋ ಇರಾದೆಯನ್ನು ಹೊರ ಹಾಕಿದ್ದಾರೆ. ಕನ್ನಡದಲ್ಲಿ ತಮಗೆ ಯಾವ ಹೀರೋ ಜೊತೆ ನಟಿಸಲು ಇಷ್ಟ ಎಂಬುದನ್ನೂ ಹೇಳಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ತಮನ್ನಾ ಯಶ್ ಜೊತೆ ಹಾಡೊಂದರಲ್ಲಿ ಕುಣಿದಿದ್ದಾರೆ. ಈ ಸಂದರ್ಭದಲ್ಲಿ ಈ ಚಿತ್ರಕ್ಕೆಂದೇ ಎರಡು ವರ್ಷಗಳಿಂದ ಎಲ್ಲವನ್ನೂ ಮೀಸಲಿಟ್ಟಿರುವ ಯಶ್ ಮತ್ತು ಇಡೀ ಚಿತ್ರತಂಡವನ್ನು ತಮನ್ನಾ ಮೆಚ್ಚಿಕೊಂಡಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಅವರ ವರ್ಕಿಂಗ್ ಸ್ಟೈಲ್ ಬಗೆಗೂ ಅತೀವ ಮೆಚ್ಚುಗೆ ಸೂಚಿಸಿರೋ ತಮನ್ನಾ ಇಂಥಾ ಚಿತ್ರ ತಂಡದ ಜೊತೆ ಕೆಲಸ ಮಾಡಿದ್ದು ತಮ್ಮ ಪಾಲಿಗೆ ಅವಿಸ್ಮರಣೀಯ ಅನುಭವ ಎಂದೂ ಹೇಳಿಕೊಂಡಿದ್ದಾರೆ.

ಅಂದಹಾಗೆ ತಮನ್ನಾಗೆ ಬಹು ಕಾಲದಿಂದಲೂ ಕನ್ನಡ ಚಿತ್ರದಲ್ಲಿ ನಟಿಸೋ ಆಸೆ ಇದೆಯಂತೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ನಟಿಸಬೇಕೆಂಬುದು ಅವರ ಕನಸಂತೆ. ಒಂದಿಳ್ಳೆ ಕಥೆ ಬಂದರೆ ಹಿಂದೆ ಮುಂದೆ ನೋಡದೇ ಒಪ್ಪಿಕೊಳ್ಳೋದಾಗಿಯೂ ಅವರು ಹೇಳಿದ್ದಾರೆ. ಇತ್ತೀಚೆಗೆ ಪುನೀತ್ ಜೆತೆ ತಮನ್ನಾ ಜಾಹೀರಾತೊಂದರಲ್ಲಿ ನಟಿಸಿದ್ದರು. ಪುನೀತ್ ಮತ್ತು ತಮನ್ನಾ ಒಟ್ಟಾಗಿ ನಟಿಸೋ ದಿನಗಳೂ ಹತ್ತಿರದಲ್ಲಿರುವಂತಿದೆ.

#

ಇನ್ನಷ್ಟು ಓದಿರಿ

Scroll to Top