What would it be like if a dark shadow of horror, suspense, and packed comedy fell over a joyous wedding celebration? Answering this question is the much-awaited film ‘Marriage Party’, written and directed by Chayan Shetty, who previously caught attention with Adhipatra. Having already won over movie buffs with two released songs, the team has now dropped the official trailer as release day approaches. Blending humor, fear, suspense, and intrigue, the trailer promises to keep viewers on edge while hinting at the thrilling elements hidden within ‘Marriage Party’. Slated to hit theaters across the state in Kannada and Malayalam on December 4, 2026, the film promises full-fledged entertainment right from its trailer.

Marriage_Party

Picture of Cinibuzz

Cinibuzz

Bureau Report

‘ಮ್ಯಾರೇಜ್ ಪಾರ್ಟಿ’ ಟ್ರೇಲರ್ನಲ್ಲಿ ಅಡಗಿದೆ ಭರ್ಜರಿ ಮನರಂಜನೆಯ ಸ್ಫೋಟ!

ಸಂಭ್ರಮದ ಮದುವೆ ಮನೆಗೆ ಹಾರರ್, ಸಸ್ಪೆನ್ಸ್ ಮತ್ತು ಭರ್ಜರಿ ಹಾಸ್ಯದ ಕರಿನೆರಳು ಬಿದ್ದರೆ ಹೇಗಿರುತ್ತದೆ? ಈ ಪ್ರಶ್ನೆಗೆ ಉತ್ತರ ನೀಡಲು ಸಜ್ಜಾಗಿದೆ, ಈ ಹಿಂದೆ ‘ಅಧಿಪತ್ರ’ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಚಯನ್ ಶೆಟ್ಟಿ ಕಥೆ ಬರೆದು ನಿರ್ದೇಶಿಸಿರುವ ಬಹುನಿರೀಕ್ಷಿತ ಚಿತ್ರ ‘ಮ್ಯಾರೇಜ್ ಪಾರ್ಟಿ’. ಈಗಾಗಲೇ ಬಿಡುಗಡೆಯಾಗಿದ್ದ ಎರಡು ಹಾಡುಗಳ ಮೂಲಕ ಸಿನಿಪ್ರಿಯರನ್ನು ಬಹುವಾಗಿ ಸೆಳೆದುಕೊಂಡಿದ್ದ ಈ ಚಿತ್ರದ ಬಿಡುಗಡೆಯ ಕ್ಷಣಗಳು ಹತ್ತಿರವಾಗುತ್ತಿರುವ ಹೊತ್ತಿನಲ್ಲಿ, ಚಿತ್ರತಂಡ ತನ್ನ ಅಧಿಕೃತ ಟ್ರೇಲರ್ ಅನ್ನು ಹೊರಬಿಟ್ಟಿದೆ. ನಗು, ಭಯ, ಸಸ್ಪೆನ್ಸ್ ಮತ್ತು ಕುತೂಹಲಗಳ ಹದವಾದ ಮಿಶ್ರಣದೊಂದಿಗೆ ಮೂಡಿಬಂದಿರುವ ಈ ಟ್ರೇಲರ್, ಸಿನಿಪ್ರಿಯರ ನಿದ್ದೆ ಕೆಡಿಸುವುದರ ಜೊತೆಗೆ ‘ಮ್ಯಾರೇಜ್ ಪಾರ್ಟಿ’ಯ ಆಂತರ್ಯದಲ್ಲಿರಬಹುದಾದ ರೋಚಕ ಅಂಶಗಳನ್ನೂ ಪ್ರೇಕ್ಷಕರ ಮುಂದೆ ತೆರೆದಿಟ್ಟಿದೆ. ಇದೇ ಡಿಸೆಂಬರ್ 4, 2026 ರಂದು ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿರುವ ಈ ಸಿನಿಮಾ, ಟ್ರೇಲರ್ ಮೂಲಕವೇ ಭರ್ಜರಿ ಮನರಂಜನೆಯ ಭರವಸೆ ನೀಡಿದೆ.

ಸಾಂಪ್ರದಾಯಿಕ ಮದುವೆಯ ಸಡಗರ, ಸಂಭ್ರಮ ಹಾಗೂ ತಯಾರಿಗಳ ಸುಂದರ ದೃಶ್ಯಗಳೊಂದಿಗೆ ಟ್ರೇಲರ್ ತೆರೆದುಕೊಳ್ಳುತ್ತದೆ. ಆದರೆ, ಶುಭಕಾರ್ಯದ ಈ ಸಡಗರ ಬಹಳ ಹೊತ್ತು ಉಳಿಯುವುದಿಲ್ಲ; ಮದುವೆ ಮನೆಯಲ್ಲಿ ಅನಿರೀಕ್ಷಿತ ವಿಘ್ನಗಳು, ಒಂದು ಸಾವು ಹಾಗೂ ವಿಲಕ್ಷಣ ಘಟನೆಗಳು ಒಂದರ ಹಿಂದೆ ಒಂದರಂತೆ ಎದುರಾಗುತ್ತವೆ. ಕಥೆಗೆ ಅಸಲಿ ತಿರುವು ಸಿಗುವುದೇ ಇಲ್ಲಿ! ಜ್ಯೋತಿಷಿಯೊಬ್ಬರು ‘ಪ್ರೇತದ ಮದುವೆ’ ಮಾಡುವಂತೆ ನೀಡುವ ವಿಚಿತ್ರ ಸಲಹೆ ಪ್ರೇಕ್ಷಕರ ಹುಬ್ಬೇರಿಸುವಂತೆ ಮಾಡುತ್ತದೆ. ಜನಮಾನಸದಲ್ಲಿರುವ ವಿಚಿತ್ರ ನಂಬಿಕೆಗಳು, ‘ಅಮಾವಾಸ್ಯೆಯ ರಾತ್ರಿ ಹೊರಗೆ ಹೋಗಬಾರದು’ ಎಂಬ ಕಟ್ಟುನಿಟ್ಟಿನ ಎಚ್ಚರಿಕೆಗಳು ಹಾಗೂ ದಟ್ಟವಾದ, ಅಬೇಧ್ಯ ಕಾಡಿನ ದಾರಿಯಲ್ಲಿ ಎದುರಾಗುವ ಭಯಾನಕ ಅನುಭವಗಳು ಮತ್ತು ಕಾಡೊಳಗಿನ ರಹಸ್ಯಗಳು ಕಥೆಗೆ ಹಾರರ್ ಮತ್ತು ಸಸ್ಪೆನ್ಸ್ ಮೆರುಗು ನೀಡಿವೆ. ಸಾಮಾನ್ಯವಾಗಿ ಕಡಲ ಕಿನಾರೆಯಲ್ಲಿ ಘಟಿಸುವ ಕಥೆಯೆಂದರೇನೇ ಕುತೂಹಲ ಮೂಡಿಕೊಳ್ಳುತ್ತದೆ; ಆದರೆ, ‘ಮ್ಯಾರೇಜ್ ಪಾರ್ಟಿ’ಯಲ್ಲಿ ಕರಾವಳಿ ಸೀಮೆಯ ಒಡಲಿನಲ್ಲಿರುವ ಮತ್ತೊಂದು ರೋಚಕ ಕಥನವಿದೆ ಎಂಬ ವಿಚಾರವೂ ಟ್ರೇಲರ್ ಮೂಲಕವೇ ಜಾಹೀರಾಗಿದೆ.

ರಾತ್ರಿ ವೇಳೆ ನಡೆಯುವ ಗದ್ದಲಗಳು, ಭಯದಿಂದ ಗುರುಗಳೇ ಓಡಿಹೋಗುವ ದೃಶ್ಯಗಳು ಹಾಗೂ ಮದುವೆ ಮನೆಯಲ್ಲಿ ನಡೆಯುವ ನಾನಾ ಅವಾಂತರಗಳು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವುದರ ಜೊತೆಗೆ ಎದೆಯಲ್ಲಿ ಸಣ್ಣದೊಂದು ಆತಂಕವನ್ನೂ ಹುಟ್ಟಿಸುತ್ತವೆ. ಇಷ್ಟೆಲ್ಲಾ ಗೊಂದಲ ಮತ್ತು ಗಲಾಟೆಗಳ ನಡುವೆ, ಟ್ರೇಲರ್ನ ಕೊನೆಯಲ್ಲಿ ವಾಕಿ-ಟಾಕಿಯಲ್ಲಿ ಕೇಳಿಬರುವ ಒಂದು ಸಂದೇಶ ಇಡೀ ಕಥೆಗೆ ಮತ್ತೊಂದು ರೋಚಕ ಆಯಾಮ ನೀಡುತ್ತದೆ. ಶಿರಾಡಿ ಕಾಡಿನಿಂದ ತಪ್ಪಿಸಿಕೊಂಡಿರುವ ಹುಲಿಯೊಂದು ಮದ್ದೂರಿನ ಕಡೆಗೆ ಬಂದಿದೆ ಎಂಬ ಆಘಾತಕಾರಿ ಮಾಹಿತಿ ಹೊರಬೀಳುವ ಮೂಲಕ, ಮದುವೆ ಮನೆಯ ಈ ಪಾರ್ಟಿ ಮತ್ತಷ್ಟು ಅಪಾಯಕಾರಿ, ರೋಚಕ ಮತ್ತು ಕುತೂಹಲಕಾರಿ ತಿರುವು ಪಡೆದುಕೊಳ್ಳುವ ಸುಳಿವು ನೀಡಿದೆ.

ಶ್ರೀ ವಾರಾಹಿ ಫಿಲಂಸ್ ಬ್ಯಾನರಿನಡಿಯಲ್ಲಿ ಸಂತೋಷ್ ವಿ ಅವರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಚಯನ್ ಶೆಟ್ಟಿ ಈ ಬಾರಿ ಗಟ್ಟಿ ಕಥೆಯೊಂದನ್ನು ಕೈಗೆತ್ತಿಕೊಂಡಿರುವ ವಿಚಾರ ಟ್ರೇಲರ್ ಮೂಲಕ ಸ್ಪಷ್ಟವಾಗಿದ್ದು, ತುಳು ಹಾಗೂ ಕನ್ನಡ ರಂಗಭೂಮಿ ಮತ್ತು ಸಿನಿಮಾರಂಗದ ಘಟಾನುಘಟಿ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ವಿನೀತ್ ಕುಮಾರ್, ಪ್ರಕಾಶ್ ಕೆ. ತುಮಿನಾಡು, ದೀಪಕ್ ರೈ ಪಾಣಾಜೆ, ನವೀನ್ ಡಿ. ಪಡೀಲ್, ಮೈಮ್ ರಾಮದಾಸ್, ಪುಷ್ಪರಾಜ್ ಬೋಳಾರ್, ನಮಿತಾ ಕಿರಣ್, ರಕ್ಷಿತಾ ಪೂಜಾರಿ ಹಾಗೂ ಅನನ್ಯ ಸೇರಿದಂತೆ ರಘು ಪಾಂಡೇಶ್ವರ, ಜ್ಯೋತಿ ಶೆಟ್ಟಿ, ರಾಧಾಕೃಷ್ಣ, ಪಿಡಿ ಸತೀಶ್ ಮತ್ತು ಭೀಮ್ ರಾವ್ ವಾಸ್ಟರ್ ಮುಂತಾದ ಪ್ರತಿಭಾವಂತ ತಾರಾಗಣ ಚಿತ್ರದಲ್ಲಿದ್ದು, ಇವರ ಜುಗಲ್ಬಂದಿ ತೆರೆಯ ಮೇಲೆ ಮೋಡಿ ಮಾಡುವುದು ಖಚಿತವಾಗಿದೆ.

ತಾಂತ್ರಿಕವಾಗಿಯೂ ‘ಮ್ಯಾರೇಜ್ ಪಾರ್ಟಿ’ ಅತ್ಯಂತ ಶ್ರೀಮಂತವಾಗಿ ಮೂಡಿಬಂದಿದೆ. ರಿತ್ವಿಕ್ ಮುರಳೀಧರ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಟ್ರೇಲರ್ನ ಹಾರರ್, ಸಸ್ಪೆನ್ಸ್ ಹಾಗೂ ಹಾಸ್ಯದ ಮೂಡ್ ಅನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದೆ. ಶ್ರೀಕಾಂತ್ ಅವರ ಛಾಯಾಗ್ರಹಣ ಕಾಡಿನ ನಿಗೂಢತೆ ಮತ್ತು ಮದುವೆ ಮನೆಯ ಸಡಗರವನ್ನು ಕಣ್ತುಂಬಿಕೊಳ್ಳುವಂತೆ ಸೆರೆಹಿಡಿದಿದ್ದರೆ, ‘ಸು ಫ್ರಂ ಸೋ’ ಖ್ಯಾತಿಯ ನಿತಿನ್ ಶೆಟ್ಟಿ ಅವರ ಸಂಕಲನ ಟ್ರೇಲರ್ನ ವೇಗ ಮತ್ತು ಕುತೂಹಲವನ್ನು ಕೊನೆಯವರೆಗೂ ಕಾಯ್ದುಕೊಂಡಿದೆ. ಜೊತೆಗೆ, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ ಅವರ ಸಾಹಿತ್ಯ ಚಿತ್ರದ ಹಾಡುಗಳಿಗೆ ಮತ್ತಷ್ಟು ತೂಕ ತಂದಿದೆ. ಒಟ್ಟಿನಲ್ಲಿ, ವಿಚಿತ್ರ ನಂಬಿಕೆಗಳು, ಪ್ರೇತದ ಮದುವೆ, ಕಾಡಿನ ರಹಸ್ಯ, ಭರ್ಜರಿ ಹಾಸ್ಯ ಮತ್ತು ಹುಲಿಯ ಆತಂಕದ ನಡುವೆ ನಡೆಯುವ ಈ ‘ಮ್ಯಾರೇಜ್ ಪಾರ್ಟಿ’ ಇದೇ ಡಿಸೆಂಬರ್ 4 ರಂದು ಕನ್ನಡ ಮತ್ತು ಮಲೆಯಾಳಂನಲ್ಲಿ ತೆರೆಕಂಡು ಪ್ರೇಕ್ಷಕರಿಗೆ ಭರಪೂರ ಮನರಂಜನೆಯ ರಸದೌತಣ ಬಡಿಸಲು ಸಜ್ಜಾಗಿದೆ.

A Ghost’s Game Inside a Wedding House!!

‘Marriage Party’ Trailer Packs an Explosive Dose of Entertainment!

What would it be like if a dark shadow of horror, suspense, and packed comedy fell over a joyous wedding celebration? Answering this question is the much-awaited film ‘Marriage Party’, written and directed by Chayan Shetty, who previously caught attention with Adhipatra. Having already won over movie buffs with two released songs, the team has now dropped the official trailer as release day approaches. Blending humor, fear, suspense, and intrigue, the trailer promises to keep viewers on edge while hinting at the thrilling elements hidden within ‘Marriage Party’. Slated to hit theaters across the state in Kannada and Malayalam on December 4, 2026, the film promises full-fledged entertainment right from its trailer.

The trailer opens with vibrant visuals of traditional wedding festivities, joy, and preparations. However, the celebration doesn’t last long—unexpected hurdles, a death, and bizarre events unfold one after another at the wedding house. That is where the real twist begins! An astrologer’s strange suggestion to perform a “ghost wedding” leaves viewers stunned. Superstitions in popular belief, strict warnings not to step out on a new moon night (Amavasye), terrifying encounters along a dense, impenetrable forest path, and secrets deep in the woods add layers of horror and suspense. While stories set along the coast naturally spark curiosity, the trailer reveals that ‘Marriage Party’ brings another gripping narrative nestled within the coastal belt.

Late-night commotion, scenes of a priest running away in fear, and various mishaps at the wedding house leave audiences laughing out loud while stirring a subtle sense of unease. Amidst all the chaos and confusion, a message heard over a walkie-talkie at the end of the trailer adds another thrilling dimension to the plot—revealing the shocking news that a tiger escaped from the Shiradi forest and is heading toward Maddur, signaling that this wedding party is about to take a far more dangerous, exciting, and intriguing turn.

Produced lavishly by Santhosh V under the Sri Varahi Films banner, the trailer makes it clear that Chayan Shetty has taken on a solid story backed by a powerhouse ensemble from Tulu and Kannada theater and cinema. Featuring Vineeth Kumar, Prakash K. Thuminadu, Deepak Rai Panaje, Naveen D. Padil, Mime Ramdas, Pushparaj Bollar, Namitha Kiran, Rakshitha Poojari, and Ananya, along with Raghu Pandeshwar, Jyothi Shetty, Radhakrishna, PD Sathish, and Bhim Rao Vaster, their on-screen chemistry is bound to captivate viewers.

Technically, too, ‘Marriage Party’ looks rich and polished. Rithvik Muralidhar’s music and background score effectively set the trailer’s shifting moods of horror, suspense, and comedy. Srikanth’s cinematography captures both the mystery of the forest and the vibrancy of the wedding festivities, while editing by Su From So fame Nithin Shetty maintains the trailer’s pace and suspense until the very end. Meanwhile, lyrics by Pramod Maravanthe and Trilok Trivikrama add further weight to the film’s songs. All in all, set against bizarre beliefs, a ghost wedding, forest secrets, hearty comedy, and the threat of a tiger, ‘Marriage Party’ is gearing up to release in Kannada and Malayalam on December 4 to serve up a feast of entertainment.

#marriageparty#Cinibuzz#projaysoorya

ಇನ್ನಷ್ಟು ಓದಿರಿ

ಹೇಗಿದೆ ಸಿನಿಮಾ?

Scroll to Top