ಕನ್ನಡ ನನ್ನ ಮಾತೃಭಾಷೆ ಅಂದಳು ಬೆಂಗಳೂರು ಹುಡುಗಿ!
ದಕ್ಷಿಣ ಭಾರತದ ಪ್ರತಿಭಾವಂತ ತಾರೆ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ನಟಿ ನಿತ್ಯಾ ಮೆನನ್ ತೆರೆಯ ಮೇಲೆ ತಮ್ಮ ಸಹಜ ಅಭಿನಯದಿಂದ ಎಷ್ಟು ಗಮನ ಸೆಳೆಯುತ್ತಾರೆಯೋ, ನಿಜ ಜೀವನದಲ್ಲೂ ತಮ್ಮ ಸರಳ ವ್ಯಕ್ತಿತ್ವ ಹಾಗೂ ಭಾಷಾ ಪ್ರೇಮದಿಂದ ಅಷ್ಟೇ ಮೋಡಿ ಮಾಡುತ್ತಾರೆ. ಇತ್ತೀಚೆಗೆ ತಮಿಳಿನ ಖ್ಯಾತ ನಿರೂಪಕ ಗೋಪಿನಾಥ್ ಅವರ ಜನಪ್ರಿಯ ಪಾಡ್ಕಾಸ್ಟ್ ಸಂದರ್ಶನದಲ್ಲಿ ಕಾಣಿಸಿಕೊಂಡಿರುವ ನಿತ್ಯಾ, ತಾವು ಹುಟ್ಟಿ ಬೆಳೆದ ಬೆಂಗಳೂರಿನೊಂದಿಗಿನ ತಮ್ಮ ಅವಿನಾಭಾವ ಸಂಬಂಧ, ಕನ್ನಡದ ಮೇಲಿನ ಅಪಾರ ಪ್ರೀತಿ ಹಾಗೂ ಹೊಸ ಭಾಷೆಗಳನ್ನು ಕಲಿಯುವ ತಮ್ಮ ವಿಶೇಷ ಹವ್ಯಾಸದ ಬಗ್ಗೆ ಮನಬಿಚ್ಚಿ ಮಾತನಾಡಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ನಿತ್ಯಾ ಮೆನನ್ ಅವರಿಗೆ ಕನ್ನಡವೆಂದರೆ ಕೇವಲ ಬರಿಯ ಭಾಷೆಯಲ್ಲ, ಅದು ಅವರ ಉಸಿರಂತೆ. ಮೂಲತಃ ಮಲೆಯಾಳಿಯಾದರೂ ಕನ್ನಡ ಮತ್ತು ತಮಿಳು ನನಗೆ ಮಾತೃಭಾಷೆ ಇದ್ದಂತೆ. ಎನ್ನುವ ನಿತ್ಯಾ ನಿಮಗೆ ಗೊತ್ತಿರುವ ಭಾಷೆಗಳು ಯಾವುವು ಅಂದರೆ ಆರು ಭಾಷೆಗಳ ಪಟ್ಟಿ ನೀಡುತ್ತಾರೆ. ಅದರಲ್ಲಿ ಕನ್ನಡಕ್ಕೇ ಮೊದಲ ಸ್ಥಾನವನ್ನೂ ನೀಡಿದ್ದಾರೆ.
ತಮಿಳು ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದರೂ ಸಹ, ತಮ್ಮ ಮಾತುಗಳ ನಡುವೆ ಸಹಜವಾಗಿಯೇ ಕನ್ನಡದ ಪದಗಳನ್ನು ಬಳಸುವ ಮೂಲಕ ಅವರು ತಮ್ಮ ಕನ್ನಡದ ಬೇರುಗಳನ್ನು ಹೆಮ್ಮೆಯಿಂದ ನೆನಪಿಸಿಕೊಂಡಿರುವುದು ಕನ್ನಡಿಗರಲ್ಲಿ ಸಂತಸ ಮೂಡಿಸಿದೆ. ಬೆಂಗಳೂರಿನ ಇಂದಿರಾನಗರದ ಸ್ಟುಡಿಯೋದಲ್ಲಿ ನಡೆದ ಈ ಆಪ್ತ ಮಾತುಕತೆಯಲ್ಲಿ, ತಮ್ಮ ಬಾಲ್ಯ ಹಾಗೂ ಬೆಳೆದು ಬಂದ ವಾತಾವರಣದಿಂದಾಗಿ ಕನ್ನಡ ಮತ್ತು ತಮಿಳು ಭಾಷೆಗಳು ತಮಗೆ ಮಾತೃಭಾಷೆಯಷ್ಟೇ ಸಹಜವಾಗಿ ಒಲಿದಿವೆ ಎಂದು ಅವರು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಕೇವಲ ಕನ್ನಡ ಮಾತ್ರವಲ್ಲದೆ, ನಿತ್ಯಾ ಮೆನನ್ ಒಬ್ಬ ಅಪ್ಪಟ ಭಾಷಾ ಪ್ರೇಮಿ ಎಂಬುದು ಮತ್ತೊಂದು ವಿಶೇಷ. ತಮಗೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಾದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಹಿಂದಿ ಮತ್ತು ಇಂಗ್ಲಿಷ್ ಹೀಗೆ ಒಟ್ಟು ಆರು ಭಾಷೆಗಳು ನಿರರ್ಗಳವಾಗಿ ಬರುತ್ತವೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಭಾಷೆಗಳ ಮೇಲೆ ತಮಗೆ ಮೊದಲಿನಿಂದಲೂ ವಿಶೇಷ ಆಸಕ್ತಿ ಮತ್ತು ಒಲವಿದೆ ಎಂದಿರುವ ನಿತ್ಯಾ, ಹೊಸ ಹೊಸ ಭಾಷೆಗಳನ್ನು ಕಲಿಯುವುದನ್ನು ತುಂಬಾ ಇಷ್ಟಪಡುತ್ತಾರೆ. ವಿವಿಧ ಭಾಷೆಗಳ ಶಬ್ದ ಮತ್ತು ಉಚ್ಚಾರಣೆಯ ಸೊಗಡನ್ನು ಮನಸಾರೆ ಆಸ್ವಾದಿಸುವ ಅವರು, ಸದ್ಯ ಸ್ಪ್ಯಾನಿಷ್ ಭಾಷೆಯನ್ನೂ ಕಲಿಯುತ್ತಿದ್ದು, ಬಂಗಾಳಿ ಭಾಷೆಯ ಸೊಗಡಿನ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಭಾಷಾ ವೈವಿಧ್ಯವನ್ನು ಅನಾವರಣಗೊಳಿಸಿದ್ದಾರೆ.
ಚಿತ್ರರಂಗದ ಬಿಡುವಿಲ್ಲದ ಜಂಜಾಟಗಳಿಂದ ಕೊಂಚ ಬಿಡುವು ಪಡೆದುಕೊಂಡಾಗಲೆಲ್ಲಾ ನಿತ್ಯಾ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ, ಇಂತಹ ಹೊಸ ಭಾಷೆಗಳನ್ನು ಕಲಿಯುವುದು ಹಾಗೂ ತಮ್ಮ ವ್ಯಕ್ತಿತ್ವವನ್ನು ಇನ್ನಷ್ಟು ವಿಕಸನಗೊಳಿಸಿಕೊಳ್ಳುವಂತಹ ರಚನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ. ಭಾಷೆಯೆಂಬುದು ಕೇವಲ ಸಂವಹನದ ಮಾಧ್ಯಮವಲ್ಲ, ಅದು ಆಯಾ ಸಂಸ್ಕೃತಿ ಮತ್ತು ಜನರ ಭಾವನೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಸೇತುವೆ ಎಂಬುದನ್ನು ನಿತ್ಯಾ ಮೆನನ್ ತಮ್ಮ ಈ ಮಾತುಗಳ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸಿನಿಮಾ ಲೋಕದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ತಾವು ಹುಟ್ಟಿ ಬೆಳೆದ ಬೆಂಗಳೂರಿನ ನೆಲ ಮತ್ತು ಕನ್ನಡ ಭಾಷೆಯ ಮೇಲಿನ ಅವರ ಈ ಪ್ರೀತಿ, ಸರಳತೆ ಮತ್ತು ಕಲಿಕೆಯ ತುಡಿತ ನಿಜಕ್ಕೂ ಕನ್ನಡಿಗರ ಮನಗೆಲ್ಲುವಂತಿದೆ. ಕನ್ನಡದಿಂದ ಎಲ್ಲವನ್ನೂ ಪಡೆದು, ಕನ್ನಡವೇ ಗೊತ್ತಿಲ್ಲದಂತೆ ಬಿಂಕ ಮಾಡುವವರು ಈ ಹೆಣ್ಣುಮಗಳ ಕಾಲಡಿ ತೂರಬೇಕು!
Nithya Menen’s Love for Kannada!
“Kannada is my mother tongue,” said the Bengaluru girl!
As much as talented South Indian star and National Award-winning actress Nithya Menen captures attention on screen with her natural performances, she equally charms in real life with her simple personality and love for languages. Recently appearing on popular Tamil host Gopinath’s podcast interview, Nithya won fans’ hearts by speaking openly about her inseparable bond with Bengaluru where she was born and raised, her immense affection for Kannada, and her special hobby of learning new languages.
For Nithya Menen, who was born and brought up in Bengaluru, Kannada is not just a mere language—it is like her breath. Although she is originally a Malayali, Nithya says that Kannada and Tamil feel just like her mother tongues. When asked what languages she knows, she lists six languages—and gives Kannada the very first place among them.
Even while speaking in a Tamil interview, she naturally weaves Kannada words into her conversation, proudly remembering her Kannada roots—a gesture that has brought joy to Kannadigas. During this candid conversation held at a studio in Indiranagar, Bengaluru, she shared from the heart that because of her childhood and upbringing environment, Kannada and Tamil came to her as naturally as a mother tongue.
Beyond just Kannada, another special trait is that Nithya Menen is a true language lover. She proudly shared that she speaks a total of six languages fluently: all four South Indian languages—Kannada, Tamil, Telugu, and Malayalam—along with Hindi and English. Saying she has had a special interest and fondness for languages right from the beginning, Nithya loves learning new ones. Deeply enjoying the charm of words and pronunciation across different languages, she is currently learning Spanish as well, and has also expressed appreciation for the beauty of Bengali, showcasing her linguistic diversity.
Whenever she gets a break from the busy hustle of the film industry, Nithya doesn’t waste her precious time; instead, she actively engages in constructive activities like learning new languages and further developing her personality. Through her words, Nithya Menen has once again proven that a language is not just a medium of communication, but a bridge to deeply understand that culture and people’s emotions. No matter how high she rises in the world of cinema, her love for the land of Bengaluru where she grew up and for the Kannada language, along with her simplicity and eagerness to learn, truly wins the hearts of Kannadigas. Those who take everything from Kannada and put on airs pretending they don’t know Kannada at all ought to bow down to this woman!












































