Currently, the hot topic of intense discussion in the film industry is the secret behind the presidency of the Karnataka Chalanachitra Academy. Following the end of incumbent president Sadhu Kokila’s tenure, curiosity has sparked within the industry over who will take the helm next. The names of director Kavitha Lankesh and actor-director S. Narayan are being heard at the forefront of this race, making the question of who will secure the Academy seat the talk of the town!

academy_cinibuzz_kannada_film

Picture of Cinibuzz

Cinibuzz

Bureau Report

ಅಕಾಡೆಮಿ ಅಧ್ಯಕ್ಷಸ್ಥಾನಕ್ಕೆ ಕವಿತಾ ಅಥವಾ ನಾರಾಯಣ್?

Kavitha or Narayan for the Academy President’s Post?

ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಹಾಟ್ ಟಾಪಿಕ್ ಆಗಿ ತೀವ್ರವಾಗಿ ಚರ್ಚೆಯಲ್ಲಿರುವುದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಗದ್ದುಗೆಯ ಗುಟ್ಟು. ಹಾಲಿ ಅಧ್ಯಕ್ಷ ಸಾಧು ಕೋಕಿಲಾ ಅವರ ಅಧಿಕಾರಾವಧಿ ಮುಕ್ತಾಯಗೊಂಡ ಬೆನ್ನಲ್ಲೇ, ಮುಂದಿನ ಚುಕ್ಕಾಣಿ ಹಿಡಿಯುವವರು ಯಾರು ಎಂಬ ಕುತೂಹಲ ಚಿತ್ರರಂಗದಲ್ಲಿ ಗರಿಗೆದರಿದೆ. ಈ ರೇಸ್‌ನಲ್ಲಿ ನಿರ್ದೇಶಕಿ ಕವಿತಾ ಲಂಕೇಶ್ ಹಾಗೂ ನಟ-ನಿರ್ದೇಶಕ ಎಸ್.ನಾರಾಯಣ್ ಅವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿದ್ದು, ಅಕಾಡೆಮಿ ಪೀಠ ಯಾರಿಗೆ ಒಲಿಯಲಿದೆ ಎಂಬುದು ಸದ್ಯದ ಪ್ರಶ್ನೆಯಾಗಿದೆ!

ಹಿಂದೆ ವಾಪಸ್ ತಿರುಗಿ ನೋಡಿದರೆ, ಕಳೆದ ಬಾರಿಯೇ ಕವಿತಾ ಲಂಕೇಶ್ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಅಂತಿಮಗೊಳ್ಳಬೇಕಿತ್ತು. ಆದರೆ ಅನಿವಾರ್ಯ ರಾಜಕೀಯ ಹಾಗೂ ಇತರೆ ಕಾರಣಗಳಿಂದ ಆ ಅವಕಾಶ ಕೈತಪ್ಪಿ ಹೋಗಿತ್ತು. ಆ ಸಮಯದಲ್ಲಿ ಅನಿವಾರ್ಯವಾಗಿ ಸಾಧು ಕೋಕಿಲಾ ಅವರಿಗೆ ಆ ಸ್ಥಾನ ಒಲಿದುಬಂದಿತ್ತು ಅನ್ನೋದು ನಿಜ. ಆದರೆ ಈ ಬಾರಿ ಕವಿತಾ ಲಂಕೇಶ್ ಅವರ ಪರವಾಗಿ ಬಲವಾದ ಒಲವಿದ್ದರೆ, ಮತ್ತೊಂದೆಡೆ ಎಸ್.ನಾರಾಯಣ್ ಅವರು ರಾಜಕೀಯ ವಲಯದ ಉನ್ನತ ನಾಯಕರಿಗೆ ಹತ್ತಿರವಿರುವ ಕಾರಣ, ಲಾಬಿ ಮತ್ತು ರಾಜಕೀಯ ಸಮೀಕರಣಗಳಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆಗಳೂ ದಟ್ಟವಾಗಿವೆ. ಈ ಇಬ್ಬರ ನಡುವಿನ ತೀವ್ರ ಪೈಪೋಟಿ ಈಗ ಎಲ್ಲರ ಗಮನ ಸೆಳೆದಿದೆ.

ಯಾರು ಬಂದರೆ ಚಿತ್ರರಂಗಕ್ಕೆ ಲಾಭ ಎಂಬ ವಿಶ್ಲೇಷಣೆ ಬಂದಾಗ, ಎಸ್.ನಾರಾಯಣ್ ಅವರು ಅಕಾಡೆಮಿ ಚಟುವಟಿಕೆಗಳನ್ನು ಚುರುಕುಗೊಳಿಸುವಲ್ಲಿ ಮತ್ತು ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುತ್ತಾರೆ ಎಂಬ ಅಭಿಪ್ರಾಯವಿದೆ. ನಾಗಭರಣ ಅವರು ಹಿಂದೆ ಅಕಾಡೆಮಿಯನ್ನು ವಿವಿಧ ಜಿಲ್ಲೆಗಳಿಗೆ ವಿಸ್ತರಿಸಿ ಜನಪರ ಸ್ಪರ್ಶ ನೀಡಿದಂತೆ, ಎಸ್.ನಾರಾಯಣ್ ಅವರಿಂದಲೂ ಅಂತಹ ಕ್ರಿಯಾಶೀಲತೆ ನಿರೀಕ್ಷಿಸಬಹುದಾಗಿದೆ. ಇತ್ತ ಕವಿತಾ ಲಂಕೇಶ್ ಬಂದರೆ ಆಡಳಿತದ ಬಿಗಿ ಹಿಡಿತ ಮತ್ತು ಹಣಕಾಸಿನ ವಿಚಾರದಲ್ಲಿ ಸಂಪೂರ್ಣ ಪ್ರಾಮಾಣಿಕತೆ ಇರುತ್ತದೆಯಾದರೂ, ಕಾರ್ಯಚಟುವಟಿಕೆಗಳು ತುಸು ಮಂದವಾಗಬಹುದು ಎಂಬ ಅಂಜಿಕೆಯೂ ವ್ಯಕ್ತವಾಗಿದೆ. ಇದು ಕೆಲವರ ಅಭಿಪ್ರಾಯವಾದರೂ ಕವಿತಾ ಲಂಕೇಶ್‌ ಯಾವುದೇ ಕೆಲಸವನ್ನು ಹಿಡಿದರೂ ಶಿಸ್ತು ಮತ್ತು ಸಂಯಮದಿಂದ ಅದನ್ನು ನಿಭಾಯಿಸುತ್ತಾರೆ. ಜಾಗತಿಕ ಸಿನಿಮಾ ವಲಯದಲ್ಲಿ ಅವರಿಗೆ ಉತ್ತಮ ಸಂಪರ್ಕಗಳಿವೆ. ಅದು ಕನ್ನಡ ಚಿತ್ರರಂಗಕ್ಕೆ ಯಾವುದಾದರೂ ರೂಪದಲ್ಲಿ ಸಹಕಾರಿಯಾಗಬಹುದು. ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಮತ್ತಷ್ಟು ಗುಣಮಟ್ಟ ಹೊಂದುತ್ತದೆ ಅನ್ನೋದರಲ್ಲಿ ಯಾವ ಡೌಟೂ ಇಲ್ಲ.

ಒಟ್ಟಿನಲ್ಲಿ ದುಡ್ಡಿನ ವಿಚಾರದಲ್ಲಿ ಪಾರದರ್ಶಕತೆ ಹಾಗೂ ಕೆಲಸದಲ್ಲಿ ವೇಗ ಎರಡೂ ಒಟ್ಟಿಗೆ ಸಿಗುವುದು ಸವಾಲಿನ ಸಂಗತಿಯಾಗಿದೆ. ಈ ನಡುವೆ ಇಬ್ಬರ ನಡುವೆ ಮತ್ತೊಬ್ಬರು ನುಸುಳಿ ತಮ್ಮ ಪ್ರಭಾವ ಬಳಸಿ ಅಧ್ಯಕ್ಷಗಾದಿಗೇರುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ!

ಆದರೆ, ಕೇವಲ ಮುಂದಿನ ಅಧ್ಯಕ್ಷರ ಚರ್ಚೆಯಷ್ಟೇ ಅಲ್ಲ, ಹಾಲಿ ಅಧ್ಯಕ್ಷ ಸಾಧು ಕೋಕಿಲ ಅವರ ಆಡಳಿತ ವೈಖರಿ ಮತ್ತು ವಿವಾದಗಳು ಈಗ ಅಸಲಿ ರಂಗು ತಂದಿವೆ. ಸಂಗೀತ ನಿರ್ದೇಶಕ, ನಟ ಹಾಗೂ ನಿರ್ದೇಶಕರಾಗಿ ಸಾಧು ಕೋಕಿಲ ಅವರು ಪ್ರತಿಭಾವಂತರಾಗಿದ್ದರೂ ಸಹ, ಅಕಾಡೆಮಿ ಅಧ್ಯಕ್ಷರಾಗಿ ಅವರ ಅಧಿಕಾರಾವಧಿ ಮತ್ತು ಆಡಳಿತ ವೈಖರಿ ಸಾಕಷ್ಟು ವಿವಾದಗಳಿಗೆ ಹಾಗೂ ತೀವ್ರ ಟೀಕೆಗಳಿಗೆ ಗುರಿಯಾಗಿದೆ. ಮೂರು ವರ್ಷಗಳ ಅಧಿಕಾರಾವಧಿ ಕಳೆದಿದ್ದರೂ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾಡಿದ್ದನ್ನು ಹೊರತುಪಡಿಸಿ ಅಕಾಡೆಮಿ ಕೆಲಸಗಳಲ್ಲಿ ಇವರ ಪಾತ್ರ ಮತ್ತು ಸಾಧನೆ ಶೂನ್ಯ ಎಂಬ ಗಂಭೀರ ಆರೋಪವಿದೆ. ಸರ್ಕಾರದ ಅಧಿಕೃತ “ವಿಸಿಟಿಂಗ್ ಕಾರ್ಡ್” ಬಳಸಿ ಪದೇ ಪದೇ ವಿದೇಶಿ ಚಿತ್ರೋತ್ಸವಗಳಿಗೆ ಹಾರುವುದೇ ಇವರ ಪ್ರಮುಖ ಕೆಲಸವಾಯಿತು ಹೊರತು, ಇದರಿಂದ ಕನ್ನಡ ಚಿತ್ರರಂಗಕ್ಕೆ ಯಾವುದೇ ಸಾರ್ಥಕ ಲಾಭವಾಗಲಿಲ್ಲ ಎಂಬ ಬೇಸರ ಎಲ್ಲೆಡೆ ವ್ಯಕ್ತವಾಗಿದೆ.

ಅಲ್ಲದೆ, ಕಾನ್ಸ್ ಫಿಲ್ಮ್ ಫೆಸ್ಟಿವಲ್‌ಗೆ ತೆರಳಿದ್ದ ಅಧಿಕೃತ ನಿಯೋಗದಲ್ಲಿ ವಾರ್ತಾ ಇಲಾಖೆ ಆಯುಕ್ತರು ಹಾಗೂ ಸರ್ಕಾರದ ಕಾರ್ಯದರ್ಶಿಗಳಿಗೂ ಸಮಾರಂಭದ ಪಾಸ್ ಸಿಗದಂತೆ ಅವಮಾನವಾಗಲು ಸಾಧು ಅವರ ತಲೆಹರಟೆ ವರ್ತನೆಯೇ ಕಾರಣ ಎನ್ನಲಾಗಿದ್ದು, ಈ ಗೊಂದಲದಿಂದ ಅಕಾಡೆಮಿ ರಿಜಿಸ್ಟ್ರಾರ್ ಹಿಮಂತ್ ರಾಜು ವರ್ಗಾವಣೆಯಾದರು ಎಂಬ ಸುದ್ದಿಯೂ ಇದೆ. ಇನ್ನು ನಿಯಮಗಳ ಪ್ರಕಾರ ಮೂರು ತಿಂಗಳಿಗೊಮ್ಮೆ ನಡೆಯಬೇಕಿದ್ದ ಸಾಮಾನ್ಯ ಸಮಿತಿ ಸಭೆಗಳು ಸರಿಯಾಗಿ ನಡೆಯದೆ, ಅಕಾಡೆಮಿ ಕೇವಲ ನೆಪಮಾತ್ರಕ್ಕೆ ಎಂಬಂತಾಗಿದೆ. ಇದರ ಜೊತೆಗೆ, ಅಕಾಡೆಮಿಯ ಉದ್ದೇಶಗಳೇ ತಿಳಿಯದಂತಿರುವ ಸಾಧು ಕೋಕಿಲ, ಸರ್ಕಾರ ನೀಡಿದ ಅಧಿಕೃತ ಕಾರನ್ನು ತಮ್ಮ ದೈನಂದಿನ ಚಿತ್ರೀಕರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಹೆಸರಿಗೆ ಸಾಧು ಅಧ್ಯಕ್ಷರಾದರೂ, ಅಕಾಡೆಮಿಯ ಸಂಪೂರ್ಣ ಸೂತ್ರಧಾರ ಅವರ ಮಗ ಸುರಾಗ್ ಆಗಿದ್ದು, ಮರಿ ಸಾಧುವಿನ ಅಪ್ಪಣೆಯಿಲ್ಲದೆ ಯಾವುದೇ ಕೆಲಸವಾಗುವುದಿಲ್ಲ ಎಂಬ ವ್ಯಾಪಕ ಅಸಮಾಧಾನ ಮತ್ತು ಆಕ್ರೋಶ ಚಿತ್ರರಂಗದ ವಲಯದಲ್ಲಿ ಭುಗಿಲೆದ್ದಿತ್ತು.

Currently, the hot topic of intense discussion in the film industry is the secret behind the presidency of the Karnataka Chalanachitra Academy. Following the end of incumbent president Sadhu Kokila’s tenure, curiosity has sparked within the industry over who will take the helm next. The names of director Kavitha Lankesh and actor-director S. Narayan are being heard at the forefront of this race, making the question of who will secure the Academy seat the talk of the town!

Looking back, Kavitha Lankesh’s name was supposed to be finalized for the president’s post the last time itself. However, due to unavoidable political and other reasons, that opportunity slipped away. It is true that at that time, the position went to Sadhu Kokila out of necessity. This time, while there is strong favor leaning toward Kavitha Lankesh, S. Narayan—being close to top leaders in political circles—also has strong chances of gaining the upper hand through lobbying and political equations. The intense competition between the two has now captured everyone’s attention.

When analyzing who would benefit the film industry more, there is an opinion that S. Narayan would be at the forefront in accelerating Academy activities and effectively utilizing available opportunities. Just as Nagabharana previously expanded the Academy to various districts and gave it a people-friendly touch, similar proactiveness can be expected from S. Narayan. On the other hand, while Kavitha Lankesh’s appointment would ensure tight administrative control and complete honesty in financial matters, there is also some apprehension that activities might slow down a bit. Although this is the opinion of a few, Kavitha Lankesh handles any task she takes up with discipline and restraint. She has strong connections in the global cinema circuit, which could benefit the Kannada film industry in one way or another. There is no doubt that the Bengaluru International Film Festival would achieve even higher standards under her.

Overall, getting both transparency in financial matters and speed in execution at the same time remains a challenge. Meanwhile, the possibility of a third contender slipping in between the two and using their influence to ascend to the president’s chair cannot be ruled out either!

However, it is not just the discussion about the next president; incumbent president Sadhu Kokila’s style of administration and controversies have added real spice to the situation. Although Sadhu Kokila is talented as a music director, actor, and director, his tenure and administrative style as Academy President have drawn considerable controversy and sharp criticism. Despite completing a three-year term, there is a serious allegation that, apart from organizing the Bengaluru International Film Festival, his role and achievements in Academy work are zero. Widespread disappointment has been expressed that using the government’s official “visiting card” to repeatedly fly off to foreign film festivals became his primary job, yielding no meaningful benefit to the Kannada film industry.

Furthermore, it is alleged that Sadhu’s erratic behavior was the reason behind the embarrassment at the Cannes Film Festival, where even the Information Department Commissioner and the Government Secretary in the official delegation failed to get passes for the event—a confusion that reportedly led to the transfer of Academy Registrar Himanth Raju. Additionally, with general committee meetings—which are supposed to be held every three months according to rules—not taking place properly, the Academy has been reduced to a mere namesake body. Alongside this, allegations had also surfaced that Sadhu Kokila, seemingly unaware of the Academy’s objectives, was using the official government-allotted car for his daily film shoots. Widespread dissatisfaction and outrage had erupted in film circles over claims that although Sadhu was the president in name, his son Surag was the real puppet master of the Academy, with no work moving forward without “junior Sadhu’s” approval.

ಇನ್ನಷ್ಟು ಓದಿರಿ

ಹೇಗಿದೆ ಸಿನಿಮಾ?

Scroll to Top