RELAX komal vinod prabhakar

ಕಿಡ್ನ್ಯಾಪ್+ಕಾಮಿಡಿ+Love‘ರಿಲ್ಯಾಕ್ಸ್’

Picture of Cinibuzz

Cinibuzz

Bureau Report

ಕಾಮಿಡಿ ಕಿಂಗ್ ಕೋಮಲ್ ಕುಮಾರ್ ಮತ್ತೊಮ್ಮೆ ತೆರೆಮೇಲೆ ಭರ್ಜರಿ ಮನರಂಜನೆಯ ಕಿಕ್ ಕೊಟ್ಟಿದ್ದಾರೆ! ಶ್ರೀನಿವಾಸ ಮಂಡ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ‘ರಿಲ್ಯಾಕ್ಸ್’ ಸಿನಿಮಾ ಬರೀ ನಗುವಿನ ಕಚಗುಳಿಗಷ್ಟೇ ಸೀಮಿತವಾಗದೆ, ಕಿಡ್ನ್ಯಾಪ್ ಡ್ರಾಮಾ, ಸಸ್ಪೆನ್ಸ್, ಆ್ಯಕ್ಷನ್ ಮತ್ತು ಭಾವನಾತ್ಮಕ ತಿರುವುಗಳ ಮಸಾಲಾ ಮಿಶ್ರಣವಾಗಿ ಪ್ರೇಕ್ಷಕರ ಮುಂದೆ ಬಂದಿದೆ. ಕಥೆಯ ಆರಂಭದಿಂದಲೇ ಪ್ರೇಕ್ಷಕರನ್ನು ಸೀಟಿನ ತುದಿಗೆ ಕೂರಿಸಿ ಹಿಡಿದಿಟ್ಟುಕೊಳ್ಳುವ ಭರಪೂರ ಪ್ರಯತ್ನ ಚಿತ್ರದಲ್ಲಿದೆ.

ಅವನು ಅಲೆಕ್ಸ್. ಊರಲ್ಲಿ ಅವನೊಬ್ಬ ಪರಮ ಪೋಕರಿ! ಸಿಕ್ಕಿದ್ದನ್ನೆಲ್ಲಾ ಮಾರಿ, ಎಣ್ಣೆಗೆ ಕಾಸು ಹೊಂಚಿಕೊಂಡು ಸುತ್ತಾಡುವ ತಿರುಗಲುತಿಪ್ಪ. ಅವನಪ್ಪನ ಕಥೆ ಕೇಳಿದ್ರೆ ಇನ್ನೂ ವಿಚಿತ್ರ, ಅವನೊಬ್ಬ ಬೆಟ್ಟಿಂಗ್ ಪಂಟರ್. ಒಂದೆಡೆ ಏರಿಯಾದ ಜನರು, ವ್ಯಾಪಾರಿಗಳು ಹಾಗೂ ಸ್ವಾಮೀಜಿಗಳು ಸೇರಿ ಅಲೆಕ್ಸ್ನನ್ನು ‘ನಂಬರ್ ಒನ್ ಪೊರ್ಕಿ, ದೊಡ್ಡ ಕ್ರಿಮಿನಲ್, ದೇವರಿಗೇ ಧಮ್ಕಿ ಹಾಕೋ ಜಗತ್ಕಿಲಾಡಿ’ ಎಂದು ಹಿಗ್ಗಾಮುಗ್ಗಾ ಬೈಯುತ್ತಿರುತ್ತಾರೆ. ಸಾಮಾನ್ಯವಾಗಿ ಎಲ್ಲಾ ಇದ್ದವರನ್ನು, ಶ್ರೀಮಂತರನ್ನು ಕಿಡ್ನಾಪ್ ಮಾಡೋದರಲ್ಲಿ ಒಂದು ಅರ್ಥವಿರುತ್ತದೆ; ಆದರೆ ಕಿಸೆಯಲ್ಲಿ ಕಾಸಿಲ್ಲದೆ, ಏನೇನೂ ಇಲ್ಲದ ಈ ಅಲೆಕ್ಸ್ ಕೂಡಾ ಕಿಡ್ನ್ಯಾಪ್ ಆಗುತ್ತಾನೆ! ಅಷ್ಟಕ್ಕೂ ಅವನನ್ನು ಕಿಡ್ನ್ಯಾಪ್ ಮಾಡಲು ಕಾರಣವೇನು? ಕಿಡ್ನ್ಯಾಪ್ ಆದ ಜಾಗದಲ್ಲಿ ಇವನ ಜೊತೆಯಾಗುವ ಆ ಹುಡುಗಿ ಯಾರು? ಅವನಿಗೂ ಇವನಿಗೂ ಏನು ಸಂಬಂಧ? ಎಂಬಿತ್ಯಾದಿ ಕುತೂಹಲಕಾರಿ ಪ್ರಶ್ನೆಗಳು ಮತ್ತು ತಿರುವುಗಳೊಂದಿಗೆ ಬೆಸೆದುಕೊಂಡಿರುವ ಕತೆ ‘ರಿಲ್ಯಾಕ್ಸ್’ ಚಿತ್ರದಲ್ಲಿದೆ. ಬಣ್ಣಬಣ್ಣದ ಕಾಸ್ಟ್ಯೂಮ್ಗಳು, ಸ್ಟೈಲಿಶ್ ಕೂಲಿಂಗ್ ಗ್ಲಾಸ್ ಮತ್ತು ತನ್ನದೇ ಆದ ವಿಭಿನ್ನ ಮ್ಯಾನರಿಸಂನೊಂದಿಗೆ ಕೋಮಲ್ ಕುಮಾರ್ ಎಂದಿನಂತೆ ಎನರ್ಜಿಟಿಕ್ ಆಗಿ ಮಿಂಚಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಇನ್ನು ಚಿತ್ರದ ನಾಯಕಿಯಾಗಿ ಸೊನಾಲ್ ಮೊಂತೆರೊ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ಕೋಮಲ್ ಮತ್ತು ಸೊನಾಲ್ ನಡುವಿನ ತುಂಟಾಟದ ದೃಶ್ಯಗಳು, ‘ಟಿಫನ್ ಕೇಳಿದ್ರೆ ಫುಲ್ ಮೀಲ್ಸ್ ಕೊಡೋಕೆ ರೆಡಿಯಾಗಿದ್ದೀರಾ’ ಎನ್ನುವಂಥ ಕೋಮಲ್ ಅವರ ಪಂಚಿಂಗ್ ಡೈಲಾಗ್ಗಳು ಚಿತ್ರಕ್ಕೆ ಸಿಕ್ಕಾಪಟ್ಟೆ ಕಾಮಿಡಿ ಕಿಕ್ ನೀಡಿವೆ. ಮನೆಯ ಕೆಲಸಗಳನ್ನು ಮಾಡುತ್ತಾ ನಾಯಕಿಯ ಸೇವೆ ಮಾಡುವ ಸನ್ನಿವೇಶಗಳು ಮತ್ತು ಬೀಚ್ನ ಸುಂದರ ತಾಣಗಳಲ್ಲಿ ನಡೆಯುವ ರೊಮ್ಯಾಂಟಿಕ್ ಹಾಡುಗಳು ಚಿತ್ರಕ್ಕೆ ಕಲರ್ಫುಲ್ ಟಚ್ ಕೊಟ್ಟಿವೆ. ನಗುನಗಿಸುತ್ತಲೇ ಎದುರಾಗುವ ತಿರುವುಗಳು ಪ್ರೇಕ್ಷಕರನ್ನು ಮತ್ತಷ್ಟು ಮಗದಷ್ಟು ಕುತೂಹಲದ ಕಡಲಲ್ಲಿ ಮುಳುಗಿಸುತ್ತವೆ.

ಇದರ ನಡುವೆ ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿರುವುದು ವಿನೋದ್ ಪ್ರಭಾಕರ್ ಅವರ ಖಡಕ್ ಎಂಟ್ರಿ! ಗಂಭೀರ ನೋಟ ಮತ್ತು ಪವರ್ಫುಲ್ ಮ್ಯಾನರಿಸಂನೊಂದಿಗೆ ತೆರೆಯ ಮೇಲೆ ಕಾಣಿಸಿಕೊಂಡಿರುವ ವಿನೋದ್ ಪ್ರಭಾಕರ್ ಉಪಸ್ಥಿತಿ ಕಥೆಗೆ ಹೊಸ ತೀವ್ರತೆ ತಂದಿದೆ. ಸಿನಿಮಾ ಕೇವಲ ಕಾಮಿಡಿ ಮತ್ತು ಆ್ಯಕ್ಷನ್ಗೆ ಮಾತ್ರ ಸೀಮಿತವಾಗದೆ, ‘ನಮ್ಮಂಥ ಬಡವರ ಹತ್ರ ಹಣ ಇಲ್ಲದೆ ಇರಬಹುದು, ಆದರೆ ಒಂದು ಹೆಣ್ಣಿಗೆ ಹೇಗೆ ಗೌರವ ಕೊಡಬೇಕು ಅನ್ನೋ ಗುಣ ಇದೆ’ ಎಂದು ಕೋಮಲ್ ಹೇಳುವ ಭಾವನಾತ್ಮಕ ಸಂಭಾಷಣೆ ಚಿತ್ರಕ್ಕೆ ಒಂದು ಸುಂದರ ಸಂದೇಶ ಮತ್ತು ಹೃದಯಸ್ಪರ್ಶಿ ಸೆಂಟಿಮೆಂಟ್ ಸ್ಪರ್ಶವನ್ನೂ ನೀಡಿದೆ.

ಸಿನಿಮಾದ ಮುಕ್ಕಾಲು ಭಾಗ ಒಂದು ದೊಡ್ಡ ಬಂಗಲೆಯಲ್ಲಿ, ಎರಡು ಪಾತ್ರಗಳ ನಡುವೆ ನಡೆಯುತ್ತದೆ. ಇಂಥ ಕಥೆ ಹೇಳುವಾಗ ಛಾಯಾಗ್ರಾಹಕ ಸ್ವಲ್‌ ಸಪ್ಪೆ ಅನ್ನಿಸಿಕೊಂಡರೂ ನೋಡುಗರಿಗೆ ಚಿತ್ರ ಬೋರು ಹೊಡೆಸಿಬಿಡುತ್ತದೆ. ಆದರೆ ಛಾಯಾಗ್ರಾಹಕ ರಾಕೇಶ್ ಸಿ ತಿಲಕ್ ಒಂದು ಮನೆಯನ್ನು ಹೇಗೆಲ್ಲಾ ತೋರಿಸಬಹುದೋ ಹಾಗೆಲ್ಲಾ ತೋರಿಸಿದ್ದಾರೆ. ಎಲ್ಲೂ ಕ್ಯಾಮೆರಾ ಇಟ್ಟು ಸುಮ್ಮನಾಗದೆ, ಸಣ್ಣದಾಗಿ ಮೂವ್‌ಮೆಂಟ್‌ ಕೊಟ್ಟು ಇಡೀ ಚಿತ್ರದಕ್ಕೆ ಚಲನೆ ನೀಡಿದ್ದಾರೆ. ಡಾ. ಜೆಸ್ಸಿ ಗಿಫ್ಟ್ ಸಂಗೀತದಲ್ಲಿ ಆವತ್ತಿನ ಲವಲವಿಕೆ, ತಾಜಾತನ ಉಳಿದಿಲ್ಲ ಅನ್ನೋದು ನಿಜ.

ಶ್ರೀನಿವಾಸ ಮಂಡ್ಯ ಅವರಿಗೆ ತೀರಾ ದೊಡ್ಡ ಕಥೆಯೇನೂ ಬೇಡ; ಸಣ್ಣ ಎಳೆಯನ್ನೂ ವಿವರಿಸಿ, ಎಲ್ಲೂ ಬೋರು ಹೊಡೆಸದಂತೆ ಕಾಮಿಡಿ ಬೆರೆಸಿ ಕಟ್ಟಿಕೊಡುತ್ತಾರೆ ಅನ್ನೋದು ‘ರಿಲ್ಯಾಕ್ಸ್’ನಲ್ಲೂ ರುಜುವಾತಾಗಿದೆ. ಒಟ್ಟಾರೆಯಾಗಿ, ‘ರಿಲ್ಯಾಕ್ಸ್’ ಚಿತ್ರವು ಕೋಮಲ್ ಅವರ ಕಾಮಿಡಿ ಟೈಮಿಂಗ್, ವಿನೋದ್ ಪ್ರಭಾಕರ್ ಅವರ ಮಾಸ್ ಖದರ್, ಸೊನಾಲ್ ಮೊಂತೆರೊ ಅವರ ಗ್ಲಾಮರ್ ಮತ್ತು ಕುತೂಹಲಕಾರಿ ಕಿಡ್ನ್ಯಾಪ್ ಕಥಾಹಂದರದೊಂದಿಗೆ ಪ್ರೇಕ್ಷಕರಿಗೆ ಸಂಪೂರ್ಣ ಮನರಂಜಿಸುವಲ್ಲಿ ಗೆಲುವು ಕಂಡಿದೆ…!

– ಅರುಣ್

Kidnap + Comedy + Love: ‘Relax’

Comedy King Komal Kumar is back on the big screen delivering a solid dose of entertainment! Directed by Srinivasa Mandya, ‘Relax’ does not stop at tickling funny bones; it arrives before audiences as a masala blend of kidnap drama, suspense, action, and emotional twists. From the very beginning, the film makes a full-fledged effort to keep viewers seated on the edge of their chairs.

He is Alex, a thorough rogue in town! A drifter who sells whatever he gets his hands on and scrounges money for drinks. His father’s story is even stranger—he is a betting punter. On one side, neighborhood locals, merchants, and swamis gang up to curse Alex out as a “number one rogue, a big criminal, a master trickster who even threatens God.” Usually, kidnapping someone who has wealth and assets makes sense, yet this penniless Alex, who has nothing to his name, ends up getting kidnapped too! Why exactly was he kidnapped? Who is the girl who joins him where he is held? What is the connection between him and her? The story of ‘Relax’ is woven around intriguing questions and twists like these. With colorful costumes, stylish cooling glasses, and his own distinct mannerisms, Komal Kumar shines with his usual energy and entertains the audience.

Playing the female lead, Sonal Monteiro looks super glamorous, and the playful banter between Komal and Sonal—along with Komal’s punching lines like, “You’re ready to serve a full meal when I only asked for tiffin?”—brings a big comedy kick to the film. Scenes where he does household chores to serve the heroine and romantic songs set in scenic beach locations add a colorful touch. Twists that arrive while keeping everyone smiling pull the audience deeper into a sea of curiosity.

Adding even more weight to the film is Vinod Prabhakar’s sharp entry! Appearing on screen with a serious gaze and powerful mannerisms, Vinod Prabhakar’s presence brings a fresh intensity to the narrative. The movie isn’t confined only to comedy and action; Komal’s emotional dialogue—”Poor folks like us might not have money, but we have the character to know how to respect a woman”—gives the film a lovely message and a touching sentimental note.

Three-quarters of the film plays out inside a large bungalow between two characters. When telling a story like this, even if the cinematographer feels slightly dull, the film can end up boring viewers. However, cinematographer Rakesh C. Tilak shows a house in every conceivable way. Without simply parking the camera and leaving it static, he adds subtle movement throughout, giving motion to the entire film. At the same time, it is true that Dr. Jesse Gift’s music lacks the liveliness and freshness of earlier days.

Srinivasa Mandya doesn’t need an overly grand story; he unpacks even a thin thread and weaves comedy into it without letting it drag anywhere, something proven once again in ‘Relax’. Overall, with Komal’s comedy timing, Vinod Prabhakar’s mass swag, Sonal Monteiro’s glamour, and an engaging kidnap storyline, ‘Relax’ succeeds in thoroughly entertaining audiences.

-‌ Arun

ಇನ್ನಷ್ಟು ಓದಿರಿ

ಹೇಗಿದೆ ಸಿನಿಮಾ?

Scroll to Top