ಆಧುನಿಕತೆಯ ಭರಾಟೆಯಲ್ಲಿ ನಮ್ಮ ಕಣ್ಣಿಗೆ ಕಾಣದಂತೆ ಕಣ್ಮರೆಯಾಗುತ್ತಿರುವ, ಪ್ರಕೃತಿಯ ಜೊತೆಯೇ ಜೀವಿಸುವ ಸಂಚಾರಿ ಕುರಿಗಾಯಿಗಳ ಬದುಕಿನ ರೋಚಕ ಹಾಗೂ ಕರುಳುಹಿಂಡುವ ಕಥಾನಕ ತೆರೆಗೆ ಬರಲು ಸಜ್ಜಾಗಿದೆ. ಹೌದು, ವಲಸೆ ಬದುಕಿನ ಅಲೆಮಾರಿಗಳ ಸಂಕಷ್ಟ, ಹೋರಾಟ ಮತ್ತು ಬಾಂಧವ್ಯದ ಹಳಹಳಿಯನ್ನು ಹೊತ್ತುತಂದಿರುವ ‘ಅನಂತ ಪಯಣ’ ಚಿತ್ರದ ಅಧಿಕೃತ ಟ್ರೇಲರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಗೊಂಡಿದೆ.
ವಿಶೇಷವೆಂದರೆ, ಯಾವುದೇ ತಾರಾ ವರ್ಚಸ್ಸಿನ ಸೆಲೆಬ್ರಿಟಿಗಳ ಬದಲಿಗೆ ಸ್ವತಃ ಸಂಚಾರಿ ಕುರಿಗಾಯಿಗಳೇ ಕೈಯಾರೆ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಅಸಲಿ ತಳಮಟ್ಟದ ನಂಟನ್ನು ಸಾಕ್ಷೀಕರಿಸಿದರು. ಈ ಅಪರೂಪದ ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಖಾತರಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಸೇರಿದಂತೆ ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಭಾಗಿಯಾಗಿ, ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು. ಕುರಿಗಾಯಿಗಳ ನೈಜ ಬದುಕಿನ ನೋವು-ನಲಿವುಗಳನ್ನು ಬಿಂಬಿಸುವ ಈ ಕಲಾಕೃತಿಗೆ ಪ್ರೇಕ್ಷಕರಿಂದ ಉತ್ತಮ ಬೆಂಬಲ ಸಿಗಲಿ ಎಂದು ಹಾರೈಸಿದರು.
ಈ ಚಿತ್ರವನ್ನು ಕೇವಲ ನಿರ್ದೇಶಿಸುವುದಲ್ಲದೆ, ನಾಯಕರಾಗಿಯೂ ಅಭಿನಯಿಸಿರುವ ಶ್ರೀಕಾಕಾ ಅವರು ತಮ್ಮ ಸಿನಿಮಾ ಪಯಣದ ಹಾದಿಯನ್ನು ಭಾವುಕವಾಗಿ ಹಂಚಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ನೃತ್ಯಗಾರರಾಗಿ ಗುರುತಿಸಿಕೊಂಡು ಸಿನಿಮಾ ರಂಗಕ್ಕೆ ಬಂದ ಶ್ರೀಕಾಕಾ, “ಈ ಸಿನಿಮಾದ ಜರ್ನಿಗೆ ಹೆಜ್ಜೆ ಹೆಜ್ಜೆಗೂ ಸಾಥ್ ನೀಡಿದ್ದು ನನ್ನ ಇಬ್ಬರು ನಿರ್ಮಾಪಕರು ಹಾಗೂ ಗೆಳೆಯರು. ಬೆಂಗಳೂರು, ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧ ಸುಂದರ ಹಾಗು ಅಷ್ಟೇ ಕಷ್ಟಕರ ಪ್ರದೇಶಗಳಲ್ಲಿ ಶೂಟ್ ಮಾಡಲಾಗಿದೆ. ಗ್ರಾಫಿಕ್ಸ್ ಅಥವಾ ಸೆಟ್ ಗಳ ಮೊಕಹೋಗದೆ, ಸಂಪೂರ್ಣ ರಿಯಲ್ ಆಗಿ ಚಿತ್ರೀಕರಣ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ,” ಎಂದು ಸಿನಿಮಾದ ಮೇಕಿಂಗ್ ಹಿಂದಿನ ಶ್ರಮವನ್ನು ಬಿಚ್ಚಿಟ್ಟಿದ್ದಾರೆ.
ಚಿತ್ರದ ನಾಯಕಿ ನಿವಿಷ್ಕಾ ಪಾಟೀಲ್ ಗೌರಿ ಎನ್ನುವ ಜೀವಂತಿಕೆಯುಳ್ಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರದ ಕುರಿತು ಮಾತನಾಡಿರುವ ಅವರು, “ಈ ತಂಡದ ಜೊತೆ ಕೆಲಸ ಮಾಡಿದ್ದು ನನಗೆ ದೊಡ್ಡ ಖುಷಿ ತಂದಿದೆ. ಇಂದಿನ ಆಧುನಿಕ ಕಾಲದಲ್ಲಿ ಮನುಷ್ಯ ಬದುಕಿಗಾಗಿ, ಅಸ್ತಿತ್ವಕ್ಕಾಗಿ ಹಾಗೂ ಕುರಿಗಳ ರಕ್ಷಣೆಗಾಗಿ ಏನೆಲ್ಲಾ ಹೋರಾಟ ಮಾಡುತ್ತಾನೆ ಎಂಬುದನ್ನು ಕೇಳಿದ ತಕ್ಷಣವೇ ಮನಸ್ಸಿಗೆ ನಾಟಿ ಈ ಸಿನಿಮಾ ಮಾಡಲು ಒಪ್ಪಿಕೊಂಡೆ,” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಸಹ ನಿರ್ಮಾಪಕ ಸಂತೋಷ ಹೆಗಡೆ ಮಾತನಾಡಿ, ಕಳೆದ 2-3 ವರ್ಷಗಳಿಂದ ಈ ಸಿನಿಮಾದ ಒಂದೊಂದೇ ಹೆಜ್ಜೆಗಳು ಸಾಗುತ್ತಾ ಬಂದಿದ್ದವು. ಇಂದು ಟ್ರೇಲರ್ ಬಿಡುಗಡೆಯಾಗಿ ಜನಮೆಚ್ಚುಗೆ ಪಡೆಯುತ್ತಿದೆ. ಇಡೀ ತಂಡದ ಸಾಮೂಹಿಕ ಸಹಕಾರ ಮತ್ತು ಪರಿಶ್ರಮದಿಂದ ಸಿನಿಮಾ ಬಹಳ ಅದ್ಭುತವಾಗಿ ಮೂಡಿಬಂದಿದೆ. ಸಂಚಾರಿ ಕುರಿಗಾಯಿಗಳ ಅರಿವಿಗೆ ಬಾರದ ಬದುಕನ್ನು ಬೆಳ್ಳಿತೆರೆಯ ಮೇಲೆ ತರಬೇಕು ಎನ್ನುವ ನಮ್ಮ ಕನಸು ಇಂದು ನಸಾಗಿದೆ (ನನಸಾಗಿದೆ) ಎಂದರು.
ಈ ಸಮಾರಂಭದಲ್ಲಿ ಮತ್ತೊಬ್ಬ ಸಹ ನಿರ್ಮಾಪಕ ಸಾಗರ ಬಿ, ನಟರಾದ ಸಂದೀಪ್ ನೀನಾಸಂ, ರಮೇಶ್ ಪವಾರ್, ವಿನಾಯಕ, ಸಚ್ಚಿನ್ ಸೇರಿದಂತೆ ಇಡೀ ತಂತ್ರಜ್ಞರ ಹಾಗೂ ಕಲಾವಿದರ ಬಳಗ ಚಿತ್ರದ ಹಿಂದಿನ ಸ್ವಾರಸ್ಯಕರ ಅನುಭವಗಳನ್ನು ಹಂಚಿಕೊಂಡಿತು. ಚಿತ್ರಕ್ಕೆ ಆಕಾಶ್ ಪರ್ವ ಅವರ ಮಂತ್ರಮುಗ್ಧಗೊಳಿಸುವ ಸಂಗೀತವಿದ್ದು, ಕಥೆಯ ಭಾವನೆಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ.
ಮಣ್ಣಿನ ಪರಿಮಳದ, ಅಲೆಮಾರಿಗಳ ಬದುಕಿನ ಕಣ್ಮರೆಯಾಗುತ್ತಿರುವ ಲೋಕವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಲಿರುವ ಈ ‘ಅನಂತ ಪಯಣ’ ನವೆಂಬರ್ 27ರಂದು ರಾಜ್ಯಾದ್ಯಂತ ಭರ್ಜರಿಯಾಗಿ ತೆರೆಕಾಣಲಿದ್ದು, ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗಿದೆ.
The thrilling and heart-wrenching tale of nomadic shepherds—who live in harmony with nature while gradually disappearing from our sight amid the rush of modernity—is all set to hit the big screen. Yes, the official trailer of ‘Anantha Payana’, a film that brings forth the hardships, struggles, and longing for connection in the lives of migrating nomads, was recently launched in a grand event.
In a special gesture, instead of star-studded celebrities, the nomadic shepherds themselves unveiled the trailer with their own hands, bearing testimony to the film’s authentic grassroots connection. Dignitaries from the film and political spheres—including MLC C.T. Ravi and Guarantee Schemes Implementation Committee Chairman H.M. Revanna—attended this rare event and extended their best wishes to the entire team. They hoped that this work of art, which reflects the real-life joys and sorrows of shepherds, receives strong support from the audience.
Srikaka, who has not only directed the film but also stars as the lead actor, emotionally shared the journey of his cinema career. Having entered the film industry after gaining recognition as a dancer alongside Rocking Star Yash, Srikaka revealed the hard work behind the making of the film: “My two producers and friends stood by me at every step of this film’s journey. We shot across various scenic yet equally challenging locations in Bengaluru, North Karnataka, and Maharashtra. Without relying on graphics or sets, we made an honest effort to shoot everything completely in real locations.”
The film’s leading lady, Nivishka Patil, appears in a vibrant role named Gowri. Speaking about her character, she shared her experience: “Working with this team has brought me immense joy. The moment I heard about all the struggles a human being goes through in today’s modern era for survival, identity, and protecting their sheep, it struck a chord in my heart, and I agreed to do this film.”
Co-producer Santhosh Hegde said that the film had been taking shape step by step over the last two to three years, and now the trailer is out and receiving public appreciation. He added that through the collective cooperation and hard work of the entire team, the film has turned out wonderfully, fulfilling their dream of bringing the unseen lives of nomadic shepherds onto the silver screen.
At the event, another co-producer Sagar B, along with actors Sandeep Ninasam, Ramesh Pawar, Vinayaka, Sachin, and the entire cast and crew, shared interesting behind-the-scenes experiences. The film features enchanting music by Akash Parva, which promises to elevate the emotions of the story even further.
‘Anantha Payana’, which vividly portrays the earthy fragrance and fading world of nomadic life, is set for a grand statewide release on November 27 and is all geared up to win the hearts of audiences.












































