– ಅರುಣ್ ಕುಮಾರ್ ಜಿ.
ಮದುವೆ ಅಂತಾದ್ರೆ ಲವ್ ಮಾಡಿಯೇ ಆಗಬೇಕು ಅಂತಾ ಕಂಕಣ ತೊಟ್ಟ ಮೂವರು ಗೆಳೆಯರು. ಆ ಗ್ಯಾಂಗಿನಲ್ಲಿ ಹೀರೋ ಕೃಷ್ಣ ಕೂಡಾ ಒಬ್ಬ! ನೋಡೋಕೆ ಕರ್ರಗಿರುವ ಮಗನಿಗೆ ಯಾರು ಹೆಣ್ಣು ಕೊಡ್ತಾರೆ ಅನ್ನೋದೇ ಅವನ ತಾಯಿಯ ದೊಡ್ಡ ಚಿಂತೆ. ಕೆರಗೋಡಿನಲ್ಲೊಂದು ಮೊಬೈಲು ಅಂಗಡಿ ಇಟ್ಟುಕೊಂಡು, ಅದರಲ್ಲಿ ವ್ಯಾಪಾರ ಕುದುರಿಸೋಕೆ ದೊಡ್ಡ ಮನುಷ್ಯನನ್ನ ಕೂರಿಸಿ, ಮೊಬೈಲ್ ರಿಪೇರಿ ಕೆಲಸವನ್ನು ಪಾರ್ಟ್ ಟೈಂ ಕಸುಬನ್ನಾಗಿಸಿಕೊಂಡಿರೋ ಈ ಕೃಷ್ಣನಿಗೆ, ಹುಡುಗೀರ ಹಿಂದೆ ಬಿದ್ದು ಲವ್ ಮಾಡೋದೇ ಫುಲ್ ಟೈಂ ಚಾಕರಿ! ಥೇಟ್ ಶ್ರೀ ಕೃಷ್ಣ ಪರಮಾತ್ಮನಂತೇ ಇವನಿಗೂ ಗೋವುಗಳೆಂದರೆ ಎಲ್ಲಿಲ್ಲದ ಪ್ರೀತಿ. ಊರಲ್ಲಿರೋರ ಮನೆ ಕೊಟ್ಟಿಗೆಯಲ್ಲಿದ್ದ ಹಸುಗಳನ್ನೆಲ್ಲಾ ಹೊತ್ತೊಯ್ದು ಸಂಕ್ರಾಂತಿಯಂದು ಕಿಚ್ಚ ಹಾಯಿಸೋ ಖಯಾಲಿ ಇವನದ್ದು. ಯಾರಾದರೂ ಕಳ್ಳ ಕಾಕರು ಊರ ಹಸುಗಳ ಮೇಲೆ ಕೈಯಿಟ್ಟರೆ ಅವರಿಗೊಂದು ಗತಿ ಕಾಣಿಸುವ ರೋಷ ಬೇರೆ!
ಇಂಥ ಕರೀ ಕೃಷ್ಣನನ್ನು ಮೆಚ್ಚಿದ ಬಿಳೀ ಹುಡುಗಿ ಗೌರಿ ಪ್ರೀತಿ ಶುರುಮಾಡುತ್ತಾಳೆ. ಮಂಡ್ಯದಲ್ಲಿ ಚಿಗುರಿದ ಇವರ ಲವ್ವು ನೇರವಾಗಿ ಗೋವಾ ತನಕ ಲಾಂಗ್ ಡ್ರೈವ್ ಹೋಗುತ್ತದೆ. ಅಲ್ಲಿತನಕ ಎಲ್ಲವೂ ಸ್ಮೂತ್ ಆಗಿದ್ದ ಕೃಷ್ಣನ ಬದುಕಲ್ಲಿ ಬಿರುಗಾಳಿ ಏಳೋದೇ ಅಲ್ಲಿಂದ! ಗೋವಾ ಪೂರ್ತಿ ತಿರುಗಾಡಿಬಂದ ಹುಡುಗಿ ಇವನನ್ನು ಮದುವೆಯಾಗುತ್ತಾಳಾ? ಇವನ ಬದುಕಿನಲ್ಲಿ ಆ ಹುಡುಗಿಯಿಂದ ಆಗುವ ಬದಲಾವಣೆಗಳೇನು? ದಿಲ್ದಾರಾಗಿ ಓಡಾಡಿಕೊಂಡಿದ್ದವನು ಯಾಕೆ ಏಕಾಏಕಿ ಪಿವೋಟಾಗುತ್ತಾನೆ? ತನ್ನೊಬ್ಬ ಮಗನನ್ನೇ ಜೀವದಂತೆ ಪೊರೆದ ತಾಯಿಯ ಪಾಡು ಏನೇನಾಗುತ್ತದೆ? ಅಮ್ಮನ ಆಸೆಯಂತೆ ಅವಳನ್ನು ಕಾಶಿಯಾತ್ರೆಗೆ ಕರೆದುಕೊಂಡು ಹೋಗ್ತಾನಾ? ಎಂಬಿತ್ಯಾದಿ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಸಿಗುವುದರೊಂದಿಗೆ ‘ಲಕ್ಷ್ಮೀ ಪುತ್ರ’ ಕೃಷ್ಣನ ಕಥೆ ಮುಕ್ತಾಯವಾಗುತ್ತದೆ. ‘ಲಕ್ಷ್ಮೀ ಪುತ್ರ’ ಅನ್ನೋ ಶೀರ್ಷಿಕೆಗೆ ತಕ್ಕುದಾಗಿಯೇ ಸಿನಿಮಾ ಕಥೆ ಇದೆ. ಆ ಟೈಟಲ್ನ ತೂಕವನ್ನು ಜಸ್ಟಿಫೈ ಮಾಡುವಂತೆಯೇ ಇಡೀ ಸಿನಿಮಾ ಸಾಗುತ್ತದೆ.

ಹೆತ್ತ ತಾಯಂದಿರಿಗೆ ಮಕ್ಕಳ ಮೇಲೆ ಇರುವ ಪ್ರೀತಿಯ ಜೊತೆಗೆ, ಜೊತೆಗಾತಿ ಸಿಕ್ಕಮೇಲೆ ಎಲ್ಲಿ ತನ್ನನ್ನು ಕಡೆಗಣಿಸಿಬಿಡುತ್ತಾನೋ, ತಾನೆಲ್ಲಿ ಒಂಟಿ ಆಗುತ್ತೀನೋ ಎನ್ನುವ ಭಯ ಮತ್ತು ಪೊಸೆಸಿವ್ನೆಸ್ಸುಗಳನ್ನು ನಟಿ ತಾರಾ ಮನಸ್ಸಿಗೆ ಹತ್ತಿರಾಗುವಂತೆ ಅದ್ಭುತವಾಗಿ ಅಭಿನಯಿಸಿದ್ದಾರೆ. ತಾರಾ ಅವರ ಪಾತ್ರ ಪೋಷಣೆ ಅತ್ಯುತ್ತಮವಾಗಿದ್ದರೂ ಕಂಟ್ಯೂನಿಟಿ ಮಿಸ್ ಆಗಿರುವುದು ಸ್ವಲ್ಪ ಕಿರಿಕಿರಿ ಅನ್ನಿಸುತ್ತದೆ. ಅದೇನೆಂದರೆ, ತಾರಾ ಸ್ಲಿಮ್ ಆಗುವ ಮುಂಚೆಯೇ ಈ ಚಿತ್ರದ ಬಹುಪಾಲು ಚಿತ್ರೀಕರಣವಾದಂತಿದೆ. ಹೀಗಾಗಿ ಅವರು ಮನೆ ಒಳಗಿದ್ದಾಗ ದಪ್ಪಗೂ, ಹೊರಗೆ ಬಂದಾಗ ಸಣ್ಣಗೂ ಆಗುತ್ತಾರೆ. ಹೀಗಾಗಿ ಒಂದೇ ಪಾತ್ರದಲ್ಲಿ ಎರಡು ಬಗೆಯಲ್ಲಿ ತಾರಾ ಕಾಣಿಸಿಕೊಂಡಂಗಾಗಿದೆ!
ಇನ್ನು ಇತರ ಪಾತ್ರಗಳತ್ತ ಗಮನ ಹರಿಸಿದರೆ, ಲಂಬೂ ಹುಡುಗಿ ವಂದಿತಾ ಚೆಂದಗೆ ಕಾಣುತ್ತಾರೆ. ಶಿವರಾಜ್ ಕೆ.ಆರ್.ಪೇಟೆ ಮತ್ತು ಡುಮ್ಮ ಗಿರಿ ಇಬ್ಬರಿಗೂ ಸಿಕ್ಕಿರುವ ಜಾಗ ಕಡಿಮೆ. ಕುರಿ ಪ್ರತಾಪ್ ಹೆಚ್ಚು ನಗಿಸುತ್ತಾರೆ. ಧರ್ಮಣ್ಣ ಕಡೂರು ಎಂದಿನ ತಮ್ಮ ಶೈಲಿಯಲ್ಲಿ ನಟಿಸಿದ್ದಾರೆ. ಎ.ಪಿ. ಅರ್ಜುನ್ ಅವರ ಹಿಂದಿನ ಸಿನಿಮಾಗಳಂತೆ ಇಲ್ಲಿಯೂ ಪುಸ್ತಕ ಹಿಡಿದು ಓಡಾಡುವ ಬುದ್ಧಿಜೀವಿ ಪಾತ್ರವಿದೆ. ಅದಕ್ಕವರು ‘ಮಂಡೇಲಾ’ ಅಂತಾ ಹೆಸರಿಟ್ಟಿದ್ದಾರೆ. ಮಿತ್ರಾ ಆ ಪಾತ್ರದಲ್ಲಿ ಗುಣಮಟ್ಟದ ಅಭಿನಯ ನೀಡಿದ್ದಾರೆ.
ಇನ್ನು ಮಾತುಗಳ ವಿಷಯಕ್ಕೆ ಬಂದರೆ, ಡಬಲ್ ಮೀನಿಂಗ್ ಅನ್ನಿಸಿಕೊಳ್ಳುವ ಮಾತುಗಳು ಇಡೀ ಚಿತ್ರದಲ್ಲಿ ತುಂಬಿ ತುಳುಕಿವೆ. ಅದರ ನಡುವೆ ಹೊಗಳುವವರು, ಬೊಗಳುವವರು, ಬಾಳು ಕೊಡುವವರು, ಬಾಳೆ ತೋಟ ಇರೋದು… ಅನ್ನೋತನಕ ಪ್ರಾಸದ ಡೈಲಾಗುಗಳು ಆ ಕ್ಷಣಕ್ಕೆ ಮಜಾ ಕೊಡುತ್ತವೆ.
ಈ ಸಿನಿಮಾದ ತಾಂತ್ರಿಕ ಮತ್ತು ಸೃಜನಶೀಲ ಕೈಚಳಕದ ಹಿಂದೆ ದೊಡ್ಡ ತಂಡವೇ ಕೆಲಸ ಮಾಡಿದೆ. ಅರ್ಜುನ್ ಜನ್ಯ ಸಂಗೀತ, ಗಿರೀಶ್ ಆರ್. ಗೌಡ ಛಾಯಾಗ್ರಹಣ, ದೀಪು ಎಸ್. ಕುಮಾರ್ ಎಡಿಟಿಂಗ್ ಚಿತ್ರಕ್ಕೆ ಬಲ ತುಂಬಿದೆ. ಎ.ಪಿ. ಅರ್ಜುನ್, ಪ್ರಶಾಂತ್ ರಾಜಪ್ಪ ಮತ್ತು ವಿಜಯ್ ಈಶ್ವರ್ ಸಂಭಾಷಣೆ ಬರೆದಿದ್ದರೆ, ಎ.ಪಿ. ಅರ್ಜುನ್ ಮತ್ತು ನಿರ್ದೇಶಕ ವಿಜಯ್ ಎಸ್. ಸ್ವಾಮಿ ಚಿತ್ರಕಥೆ ಹೆಣೆದಿದ್ದಾರೆ. ಪವಿತ್ರಾ ರೆಡ್ಡಿ ಕಾಸ್ಟ್ಯೂಮ್ ಡಿಸೈನಿಂಗ್, ಬಟ್ಟೆಗೆ ಬಳಸಿರುವ ಬಣ್ಣಗಳ ಕಾಂಬಿನೇಶನ್ ಚೆಂದ ಇದೆ. ಒಟ್ಟಿನಲ್ಲಿ, ಮಂಡ್ಯದ ಸೊಗಡು, ಪ್ರೀತಿ, ತಾಯಿಯ ಮಮತೆ, ತಮಾಷೆ ಮತ್ತು ತಿರುವುಗಳೊಂದಿಗೆ ಸಾಗುವ ಈ ಕಥೆ ಪ್ರೇಕ್ಷಕರ ಗಮನ ಸೆಳೆಯುವಂತಿದೆ.
——————–
A Spring of Laughter Around ‘Lakshmīputra’, and a Mother’s Affection!
– ARUN KUMAR G
Three friends who have sworn that if they ever get married, it must be a love marriage—and hero Krishna is one of that gang! His mother’s biggest worry is who will be willing to marry off their daughter to a dark-skinned boy like him. Running a mobile shop in Keragodu, placing an older man there to handle business, and taking up mobile repair as a part-time hustle, Krishna’s full-time job is chasing girls and falling in love! Just like Lord Sri Krishna himself, he has an boundless love for cows. He has a habit of rounding up cows from people’s sheds across the village and celebrating Kicchu (a traditional bonfire ritual) on Sankranti. And if any thieves or bad elements dare lay a hand on the village cattle, he has a fierce streak of teaching them a lesson!
Gowri, a fair-skinned girl, takes a liking to this dark-skinned Krishna, and their romance begins. Their love, which buds in Mandya, takes them on a long drive all the way to Goa. Everything is smooth sailing until then—and that’s where the storm hits Krishna’s life! Will the girl who roams all over Goa end up marrying him? What changes does she bring into his life? Why does a carefree guy suddenly pivot? What happens to the mother who raised him as her sole son like her own life? Does he take her on a Kashi pilgrimage as she wishes? With answers to these intriguing questions, the story of ‘Lakshmīputra’ Krishna comes to an end. The film’s plot lives up to the title Lakshmīputra, moving forward in a way that justifies the weight of its name.
Along with a mother’s love for her child, actress Tara delivers a wonderful, heart-touching performance capturing the fear and possessiveness of wondering whether her son will neglect her once he finds a partner, or whether she will end up alone. Even though Tara’s character portrayal is top-notch, the missing continuity feels a bit jarring. Specifically, it seems most of the film was shot before Tara slimmed down—so she appears heavier when indoors and slimmer when outdoors, making it look like she plays two different versions of the same character!
Turning to the other characters, Vandita looks lovely as the tall girl. Shivraj K.R. Pete and Dumma Giri get limited screen time. Kuri Prathap gets the most laughs. Dharmanna Kadur acts in his usual style. Just like in A.P. Arjun’s earlier films, there is an intellectual character here who walks around holding a book, whom he has named “Mandela.” Mitra gives a quality performance in that role.
As for the dialogue, double-meaning lines overflow throughout the film. In between, rhyming lines—like hogaluvaru, bogaluvaru, bāḷu koḍuvaru, bāḷe tōṭa irōdu…—provide fun in the moment.
A large team has worked behind the technical and creative craftsmanship of this film. Arjun Janya’s music, Girish R. Gowda’s cinematography, and Deepu S. Kumar’s editing add strength to the movie. While A.P. Arjun, Prashanth Rajappa, and Vijay Eshwar penned the dialogues, A.P. Arjun and director Vijay S. Swami crafted the screenplay. Pavitra Reddy’s costume designing stands out, with nice color combinations used on the outfits. All in all, this story—moving forward with the flavor of Mandya, love, a mother’s affection, humor, and twists—is engaging enough to capture the audience’s attention.












































