- ಅರುಣ್ ಕುಮಾರ್ ಜಿ.
ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೆ ರಾಜಕಾರಣ ಮತ್ತು ಸಿನಿಮಾ ಎರಡೂ ಹೊಸದಲ್ಲ. ಸಣ್ಣ ಮಟ್ಟದ ಕಲಾವಿದನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟು, ನಂತರ ರಾಜಕಾರಣಿಯಾಗಿ, ಉದ್ಯಮಿಯಾಗಿ ಬೆಳೆದು, ಮತ್ತೆ ಸಿನಿಮಾ ನಾಯಕನಟನಾಗಿಯೂ ಮಿಂಚಿದವರು. ರಾಜಕೀಯ ಚದುರಂಗದಾಟದಲ್ಲಿ ತಮ್ಮದೇ ಆದ ದಾಳಗಳನ್ನು ಉರುಳಿಸುತ್ತಾ, ಎದುರಾಳಿಗಳಿಗೆ ಚಳಿ ಹುಟ್ಟಿಸುವ ತಂತ್ರಗಾರಿಕೆಯಲ್ಲಿ ಸಿದ್ಧಹಸ್ತರಾಗಿರುವ ಯೋಗೇಶ್ವರ್, ಈಗ ಗಾಂಧಿನಗರದಲ್ಲೂ ಅಷ್ಟೇ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದ್ದಾರೆ. ತಮ್ಮ ಪುತ್ರ ಧ್ಯಾನ್ನನ್ನು ಸ್ಯಾಂಡಲ್ವುಡ್ಗೆ ಅತ್ಯಂತ ಭರ್ಜರಿಯಾಗಿ, ರಾಜವೈಭವದೊಂದಿಗೆ ಪರಿಚಯಿಸಲು ಸ್ವತಃ ತಾವೇ ಕಥೆ ಬರೆದು ಕೈಗೆತ್ತಿಕೊಂಡಿದ್ದ ಬಹುನಿರೀಕ್ಷಿತ ಮೆಗಾ ಪ್ರಾಜೆಕ್ಟ್ ‘ಕರ್ಣಾಟಬಲಂ ಅಜೇಯಂ’. ಖುದ್ದು ಸಿ.ಎಂ. ಡಿಕೆ ಶಿವಕುಮಾರ್ ಅವರೇ ಬಂದು ಈ ಸಿನಿಮಾಗೆ ಚಾಲನೆ ಕೊಟ್ಟಿದ್ದರು. ಈಗ ನೋಡಿದರೆ, ಈ ಸಿನಿಮಾ ದಿಢೀರ್ ಅಂತಾ ಅರ್ಧಕ್ಕೇ ನಿಂತುಹೋಗಿರುವ ಸುದ್ದಿ ಇಡೀ ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಿರಿಯ ಹಾಗೂ ಅನುಭವಿ ನಿರ್ದೇಶಕ ನಾಗಣ್ಣ ಅವರ ಸಾರಥ್ಯದಲ್ಲಿ, ಬರೋಬ್ಬರಿ ೫೧ ದಿನಗಳ ಕಾಲ ಚಿತ್ರೀಕರಣ ನಡೆಸಿ, ಸರಿಸುಮಾರು ಒಂಭತ್ತು ಕೋಟಿ ರೂಪಾಯಿಗಳಷ್ಟು ಬೃಹತ್ ಹೂಡಿಕೆ ಮಾಡಿರುವ ಯೋಗೇಶ್ವರ್ ಈಗ ಸಿನಿಮಾವನ್ನು ಅರ್ಧಕ್ಕೇ ನಿಲ್ಲಿಸಿಬಿಟ್ಟರಾ? ತಮ್ಮದೇ ಕಥೆಯ ಮೇಲೆ ತಮಗೇ ನಂಬಿಕೆ ಇಲ್ಲದ ಮೇಲೆ ಇಷ್ಟೊಂದು ದಿನ ಶೂಟಿಂಗ್ ಮಾಡಿ, ಕೋಟಿ ಕೋಟಿ ಹಣವನ್ನು ಯಾಕೆ ಖರ್ಚು ಮಾಡಿದರು? ‘ಕರ್ನಾಟ ಬಲಂ’ ಇನ್ನು ಮುಂದುವರೆಯೋದೇ ಡೌಟಾ? ಎಂಬ ಪ್ರಶ್ನೆಗಳು ಸಿನಿಮಾ ವಲಯದಲ್ಲಿ ಜೋರಾಗಿ ಸದ್ದು ಮಾಡುತ್ತಿವೆ.
ಚಿತ್ರದ ಮೇಕಿಂಗ್ನಲ್ಲಿ ಎಲ್ಲಿಯೂ ರಾಜಿಯಾಗದ ಯೋಗೇಶ್ವರ್, ಬರೋಬ್ಬರಿ ೫೧ ದಿನಗಳ ಕಾಲ ಸಿನಿಮಾದ ಚಿತ್ರೀಕರಣವನ್ನು ಅತ್ಯಂತ ಅದ್ಧೂರಿಯಾಗಿಯೇ ನಡೆಸಿದ್ದರು. ಕನ್ನಡ ನಾಡಿನ ಗತವೈಭವ ಸಾರುವ ಐತಿಹಾಸಿಕ ತಾಣಗಳಾದ ಬಾದಾಮಿ, ಪಟ್ಟದಕಲ್ಲು, ಐಹೊಳೆ ಸೇರಿದಂತೆ ಸಾಂಸ್ಕೃತಿಕ ನಗರಿ ಮೈಸೂರಿನ ಸುಂದರ ತಾಣಗಳಲ್ಲಿಯೂ ಕ್ಯಾಮೆರಾ ರೋಲ್ ಆಗಿತ್ತು. ಈ ಸಿನಿಮಾದ ಶ್ರೀಮಂತಿಕೆ ಎಷ್ಟಿತ್ತೆಂದರೆ, ನೃತ್ಯ ನಿರ್ದೇಶಕ ಮೋಹನ್ ಅವರ ಸಾರಥ್ಯದಲ್ಲಿ ಸತತ ಆರು ದಿನಗಳ ಕಾಲ ಚಿತ್ರೀಕರಿಸಲಾದ ಒಂದೇ ಒಂದು ಹಾಡಿಗಾಗಿ ಸಾವಿರದಿಂದ ಎರಡು ಸಾವಿರ ಮಂದಿ ಡ್ಯಾನ್ಸರ್ಗಳು ಹಾಗೂ ಜೂನಿಯರ್ ಆರ್ಟಿಸ್ಟ್ಗಳನ್ನು ಬಳಸಿಕೊಳ್ಳಲಾಗಿತ್ತು. ಕೇವಲ ಆ ಒಂದು ಹಾಡಿಗಾಗಿಯೇ ಎರಡು ಕೋಟಿ ರೂಪಾಯಿಗೂ ಅಧಿಕ ಹಣವನ್ನು ನೀರಿನಂತೆ ಖರ್ಚು ಮಾಡಲಾಗಿತ್ತು. ಇಷ್ಟೆಲ್ಲಾ ವೈಭವೋಪೇತವಾಗಿ, ರಾಯಲ್ ಆಗಿ ಸಾಗುತ್ತಿದ್ದ ಸಿನಿಮಾ ಪಯಣಕ್ಕೆ ದಿಢೀರ್ ಬ್ರೇಕ್ ಬಿದ್ದಿರುವುದರ ಹಿಂದೆ ಒಂದು ಕುತೂಹಲಕಾರಿ ಕಾರಣ ಕೇಳಿಬರುತ್ತಿದೆ.
೫೧ ದಿನಗಳ ಸುದೀರ್ಘ ಚಿತ್ರೀಕರಣದ ಬಳಿಕ ಸಿನಿಮಾದ ರಷಸ್ ವೀಕ್ಷಿಸಿದ ಸಿ.ಪಿ. ಯೋಗೇಶ್ವರ್ ಅವರ ಪತ್ನಿ ಶೀಲಾ ಯೋಗೇಶ್ವರ್ ಅವರಿಗೆ ಚಿತ್ರದ ಔಟ್ಪುಟ್ ಅಷ್ಟಾಗಿ ಹಿಡಿಸಿಲ್ಲ ಎನ್ನಲಾಗಿದೆ. ಮಗನ ಚೊಚ್ಚಲ ಸಿನಿಮಾದ ಬಗ್ಗೆ ಅಸಮಾಧಾನಗೊಂಡ ಅವರು, ಚಿತ್ರೀಕರಣವನ್ನು ತಕ್ಷಣವೇ ನಿಲ್ಲಿಸುವಂತೆ ಸೂಚಿಸಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಆದರೆ, ಚಿತ್ರತಂಡಕ್ಕೆ ಅಧಿಕೃತವಾಗಿ ನೀಡಿರುವ ಕಾರಣವೇ ಬೇರೆ. ಸಿನಿಮಾದ ದ್ವಿತೀಯಾರ್ಧದಲ್ಲಿ ರಾಜಕೀಯ ಅಂಶಗಳು ಹೆಚ್ಚಾಗಿ ನುಸುಳಿದ್ದು, ಕಥೆಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಬೇಕಿದೆ ಎಂಬ ನೆಪವೊಡ್ಡಿ ಚಿತ್ರೀಕರಣಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ ಎನ್ನಲಾಗುತ್ತಿದೆ. ಎಂ.ಎಸ್. ರಮೇಶ್ ಅವರ ಚಿತ್ರಕಥೆ ಹಾಗೂ ಗುರುರಾಜ ದೇಸಾಯಿ, ವಿಶ್ವ ಸೇರಿದಂತೆ ಘಟಾನುಘಟಿ ಬರಹಗಾರರು ಸಂಭಾಷಣೆ ಪೋಣಿಸಿದ್ದರು.
ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ, ಸ್ಯಾಂಡಲ್ವುಡ್ಗೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಹಿರಿಯ ನಿರ್ದೇಶಕ ನಾಗಣ್ಣ ಮಾತ್ರ ತುಟಿಪಿಟಿಕ್ ಎನ್ನದೆ ಮೌನಕ್ಕೆ ಶರಣಾಗಿದ್ದಾರೆ. ಅತ್ಯಂತ ಮೃದು ಸ್ವಭಾವದವರಾದ ನಾಗಣ್ಣ ಅವರ ಜಾಗದಲ್ಲಿ ಬೇರೆ ಯಾರೇ ನಿರ್ದೇಶಕರಾಗಿದ್ದರೂ, ಇಷ್ಟೊತ್ತಿಗೆ ಸಿನಿಮಾ ನಿಂತ ವಿಚಾರವನ್ನೇ ಮುಂದಿಟ್ಟುಕೊಂಡು ದೊಡ್ಡ ರಂಪಾಟ, ರಾದ್ಧಾಂತ ಮಾಡಿ ಸುದ್ದಿಯಾಗುತ್ತಿದ್ದರು. ಆದರೆ ನಾಗಣ್ಣ ತಮ್ಮ ಸಹಜ ಶಾಂತ ಸ್ವಭಾವದಿಂದಲೇ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. ಮತ್ತೊಂದೆಡೆ, ನಾಗಣ್ಣ ನಿರ್ದೇಶನದ ಇನ್ನೊಂದು ಚಿತ್ರ ‘ಭಾರ್ಗವ’ ಕೂಡ ಕುಂಟುತ್ತಾ, ತೆವಳುತ್ತಾ ಚಿತ್ರೀಕರಣದ ಹಂತದಲ್ಲೇ ಸಾಗುತ್ತಿದೆ. ಈ ಹಿಂದೆ ತಾವು ಕೈಗೆತ್ತಿಕೊಂಡ ಯಾವುದೇ ಸಿನಿಮಾಗಳನ್ನು ಅರ್ಧಕ್ಕೆ ನಿಲ್ಲಿಸದ ಹಿರಿಯ ನಿರ್ಮಾಪಕ ಸೂರಪ್ಪ ಬಾಬು ಅವರ ಈ ಚಿತ್ರ ಯಾಕೋ ನಿಧಾನಗತಿಯಲ್ಲಿ ಸಾಗುತ್ತಿದೆ. ಇನ್ನು ನಾಲ್ಕೇನಾಲ್ಕು ದಿನಗಳ ಪ್ಯಾಚ್ ಅಪ್ ಚಿತ್ರೀಕರಣ ಮುಗಿದರೆ ಪೂರ್ಣಗೊಳ್ಳಲಿದೆ.
ಸದ್ಯದ ಮಟ್ಟಿಗೆ ‘ಭಾರ್ಗವ’ ಸಿನಿಮಾ ಹೇಗೋ ದಡ ಸೇರುವ ಸ್ಪಷ್ಟ ಸೂಚನೆ ಸಿಕ್ಕಿದೆ. ಆದರೆ, ಈಗಾಗಲೇ ಸರಿಸುಮಾರು ಒಂಭತ್ತು ಕೋಟಿ ರೂಪಾಯಿ ಸುರಿದು, ಐತಿಹಾಸಿಕ ತಾಣಗಳಲ್ಲಿ ಶೂಟಿಂಗ್ ಮುಗಿಸಿರುವ ‘ಕರ್ನಾಟ ಬಲಂ ಅಜೇಯಂ’ ಭವಿಷ್ಯವೇನು ಎಂಬುದು ಯಕ್ಷಪ್ರಶ್ನೆಯಾಗಿದೆ. ಯೋಗೇಶ್ವರ್ ಪುತ್ರನ ಈ ಕನಸಿನ ಕೂಸು ಮತ್ತೆ ಟೇಕಾಫ್ ಆಗಿ ಬೆಳ್ಳಿತೆರೆಯ ಮೇಲೆ ಅಬ್ಬರಿಸುತ್ತದಾ ಅಥವಾ ಕೋಟಿ ಕೋಟಿ ಖರ್ಚಾದರೂ ಶಾಶ್ವತವಾಗಿ ಡಬ್ಬಾ ಸೇರುತ್ತದಾ ಎಂಬ ಪ್ರಶ್ನೆಗೆ ಬಹುಶಃ ಕೇಪಿ ಒಬ್ಬರಿಂದ ಮಾತ್ರ ಉತ್ತರ ಸಿಗಲು ಸಾಧ್ಯ!

What Happened to Karnatabalam Ajeyam?
Has Yogeshwar’s Son’s Mega Project Come to a Grinding Halt?
For former minister C.P. Yogeshwar, neither politics nor cinema is unfamiliar territory. Starting his journey in the entertainment world as a small-time artist before rising as a politician, entrepreneur, and eventually a lead actor, Yogeshwar knows the ropes of both arenas well. Known as a master strategist who plays the political chessboard with precision and sends shivers down his rivals’ spines, Yogeshwar has now stirred up an equally massive sensation in Gandhinagar. To launch his son Dhyan into Sandalwood on a grand, royal scale, Yogeshwar himself penned the story for the much-anticipated mega project ‘Karnatabalam Ajeyam’, which was famously launched by Deputy Chief Minister D.K. Shivakumar himself. Now, the sudden news that this high-profile venture has abruptly halted midway has sparked heated discussions across the Kannada film industry. Having completed a whopping 51 days of shooting under the direction of veteran filmmaker Naganna and poured nearly nine crore rupees into the venture, has Yogeshwar really pulled the plug on the film? If he lacked confidence in his own script, why go through such an extensive shoot and spend crores of rupees in the first place? Industry circles are buzzing with questions over whether ‘Karnatabalam’ will ever resume.
Making zero compromises on production values, Yogeshwar had ensured the 51-day schedule was mounted on a lavish canvas. Cameras rolled across iconic heritage sites celebrating Karnataka’s glorious past—including Badami, Pattadakal, and Aihole—as well as scenic locations in the cultural capital of Mysuru. Such was the grandeur of the project that a single song, choreographed by Mohan and shot continuously over six days, featured between 1,000 and 2,000 dancers and junior artists, burning through over two crore rupees just for that track alone. Behind the sudden brakes applied to a film progressing with such royal opulence lies an intriguing piece of industry gossip.
Word on the street suggests that after viewing the rushes from the 51-day shoot, Yogeshwar’s wife, Sheela Yogeshwar, was far from impressed with the output. Dissatisfied with the quality of her son’s debut vehicle, she reportedly instructed that filming be stopped immediately. However, the official reason communicated to the film crew tells a different story. Shooting has been placed on a temporary hold under the pretext that political elements have crept too heavily into the second half, requiring script revisions. Despite boasting a screenplay by M.S. Ramesh and dialogues crafted by heavyweights like Gururaj Desai and Vishwa, the real reason behind the sudden freeze remains shrouded in mystery.

Amid all these dramatic developments, veteran director Naganna—a filmmaker with several superhits to his credit—has maintained a dignified silence without uttering a word. Known for his remarkably soft-spoken nature, Naganna has handled the setback with composure; had almost any other director been in his shoes, the halting of the project would have triggered major public rows and controversies by now. Meanwhile, Naganna’s other directorial venture, ‘Bhargava’, has also been inching forward at a sluggish pace. Produced by senior filmmaker Soorappa Babu—who has a track record of never leaving a project unfinished—‘Bhargava’ has moved slowly for reasons unknown, though only four days of patch-up shooting remain before it wraps completely.
While ‘Bhargava’ appears set to cross the finish line soon, the fate of ‘Karnatabalam Ajeyam’—after swallowing nearly nine crore rupees across grand historical locales—hangs in the balance as a million-dollar question. Whether Yogeshwar’s dream project for his son will take off again to roar on the silver screen, or end up permanently shelved despite the crores spent, is a mystery that perhaps only C.P. Yogeshwar himself can answer.












































