ಏಪ್ರಿಲ್ ಅಂತ್ಯಕ್ಕೆ ಪೈಲ್ವಾನ್ ರಿಲೀಸ್ ..!

Picture of Cinibuzz

Cinibuzz

Bureau Report

ಸುದೀಪ್ ನಾಯಕತ್ವದಪೈಲ್ವಾನ್ಕನ್ನಡ ಸೇರಿದಂತೆ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹರಿದಾಡ್ತಿದೆ.. ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈಗಾಗಲೇ ಹೆಚ್ಚುಕಡಿಮೆ ಬಿಡುಗಡೆಗೆ ಸಿದ್ಧವಾಗಿದೆ.. ಆದ್ರೆ ರಿಲೀಸ್ ದಿನಾಂಕವನ್ನು ಚಿತ್ರತಂಡ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.. ಕಿಚ್ಚ ಸುದೀಪ್ ನಾಯಕತ್ವ, ‘ಹೆಬ್ಬುಲಿಪ್ರಸಿದ್ಧಿಯ ಕೃಷ್ಣ ನಿರ್ದೇಶನದಪೈಲ್ವಾನ್ಚಿತ್ರವು ಅದ್ದೂರಿ ಮೇಕಿಂಗ್ ಮೂಲಕ ಬಾರಿ ಕಮಾಲ್ ಮಾಡಲು ಬರುತ್ತಿದೆ.

ಚಿತ್ರದಲ್ಲಿ ಠಾಕೂರ್ ಅನೂಪ್ ಸಿಂಗ್, ಸುನೀಲ್ ಶೆಟ್ಟಿ, ಆಕಾಂಕ್ಷ ಸಿಂಗ್, ಕಬೀರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ಕೂಡ ನಟಿಸಿದ್ದಾರೆ. ನಟಿ ಆಕಾಂಕ್ಷ ಸಿಂಗ್ ಸುದೀಪ್‌ಗೆ ಜೋಡಿಯಾಗಿ ನಟಿಸಿದ್ದಾರೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಪೈಲ್ವಾನ್ ಚಿತ್ರವು ಇದೇ ಏಪ್ರಿಲ್ ೨೦೧೯ರ ಕೊನೆಯಲ್ಲಿ ತೆರೆಗೆ ಬರಲಿದೆ ಎನ್ನಲಾಗಿದೆ.. ಪೈಲ್ವಾನ್ ಚಿತ್ರದ ಲುಕ್‌ನಲ್ಲಿ ಹಣೆಗೆ ಆಂಜನೇಯನ ತಿಲಕ, ಕೇಸರಿ ಬಣ್ಣದ ಪೋಷಾಕು ತೊಟ್ಟು ಸಖತ್ತಾಗಿ ಕಾಣಿಸುತ್ತಿರುವ ಕಿಚ್ಚ ಇನ್ನು ತೆರೆಯ ಮೇಲೆ ಹೇಗೆ ಮಿಂಚುವರೆಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಇನ್ನಷ್ಟು ಓದಿರಿ

Scroll to Top