ಪಡ್ಡೆಹುಲಿಗೆ ಕಿಚ್ಚನ ಹಾರೈಕೆ ಚಾಲೆಂಜಿಂಗ್ ಸ್ಟಾರ್ ಮೆಚ್ಚುಗೆ!

Picture of Cinibuzz

Cinibuzz

Bureau Report

ಕೆ ಮಂಜು ಅವರ ಪುತ್ರ ಶ್ರೇಯಸ್ ಪಡ್ಡೆಹುಲಿ ಚಿತ್ರದ ಮೂಲಕ ಮಾಸ್ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಎಂ ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರೋ ಈ ಚಿತ್ರವೀಗ ಪ್ರೇಕ್ಷಕರು ಮಾತ್ರವಲ್ಲದೇ ನಟನಟಿಯರನ್ನೂ ಸೆಳೆದುಕೊಂಡಿದೆ. ಅಷ್ಟಕ್ಕೂ ಈ ಚಿತ್ರಕ್ಕೆ ಮುಹೂರ್ತದ ದಿನದಿಂದಲೂ ಚಿತ್ರರಂಗದ ಭಾಗವಾಗಿರುವವರ ಸಹಕಾರ, ಶುಭ ಹಾರೈಕೆಯಿತ್ತು.

ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿಗೆ ಮುಹೂರ್ತದ ಸಂದರ್ಭದಲ್ಲಿಯೇ ಕಿಚ್ಚಾ ಸುದೀಪ್ ಶುಭ ಹಾರೈಸಿದ್ದರು. ಆಕರ್ಷಕವಾಗಿರೋ ಶೀರ್ಷಿಕೆಯ ಈ ಚಿತ್ರ ಹಿಟ್ ಆಗಿ, ಶ್ರೇಯಸ್ ನಾಯಕನಾಗಿ ನೆಲೆಗೊಳ್ಳಲಿ ಎಂದೂ ಹಾರೈಸಿದ್ದರು. ಆ ಹಾರೈಕೆಯಂತೆಯೇ ಬಿಡುಗಡೆಯ ಈ ಕಡೇ ಘಳಿಗೆಗಳಲ್ಲಿ ಪಡ್ಡೆಹುಲಿ ಸಖತ್ ಹವಾವನ್ನೇ ಸೃಷ್ಟಿಸಿದೆ.

ಇದೀಗ ಪಡ್ಡೆಹುಲಿ ಚೆಂದದ ಹಾಡುಗಳು ಮತ್ತು ಟೀಸರ್ ಮೂಲಕ ಮತ್ತಷ್ಟು ಪ್ರೇಕ್ಷಕರನ್ನ ಆಕರ್ಷಿಸಿಕೊಂಡು ಬಹು ನಿರೀಕ್ಷಿತ ಚಿತ್ರವಾಗಿ ಅನಾವರಣಗೊಂಡಿದೆ.  ಟ್ರೇಲರ್ ಮೂಲಕವಂತೂ ಹೊಸದಾಗಿ ಎಂಟ್ರಿ ಕೊಡುತ್ತಿರೋ ಶ್ರೇಯಸ್ ಮಾಡಿಕೊಂಡಿರುವ ತಯಾರಿ ಸ್ಪಷ್ಟವಾಗಿಯೇ ಕಾಣಿಸಿದೆ. ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ಕೂಡಾ ಶ್ರೇಯಸ್ ಅವರನ್ನು ಮೆಚ್ಚಿಕೊಂಡಿದ್ದಾರೆ. ಇಂಥಾ ಅದ್ಭುತ ತಯಾರಿ, ಪರಿಶ್ರಮಕ್ಕೆ ತಕ್ಕ ಗೆಲುವು ಸಿಗಲೆಂದು ಶುಭ ಕೋರಿದ್ದಾರೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಂತೂ ಆರಂಭ ಕಾಲದಿಂದಲೂ ಈ ಸಿನಿಮಾಗೆ ಸಾಥ್ ನೀಡುತ್ತಲೇ ಬಂದಿದ್ದಾರೆ. ತಮ್ಮದೇ ಪಿಆರ್ ಕೆ ಸಂಸ್ಥೆಯ ಮೂಲಕ ದೊಡ್ಡ ಮೊತ್ತಕ್ಕೆ ಪಡ್ಡೆಹುಲಿ ಹಾಡುಗಳನ್ನು ಖರೀದಿಸೋ ಮೂಲಕ ಬೆಂಬಲ ಕೊಟ್ಟಿದ್ದಾರೆ. ಈ ಎಲ್ಲ ಕಾರಣಗಳಿಂದ ಪಡ್ಡೆಹುಲಿ ಚಿತ್ರ ಪ್ರೇಕ್ಷಕರ ಆಸಕ್ತಿ ಕೇಂದ್ರ ತಲುಪಿಕೊಂಡಿದೆ. ಇದೇ ಏಪ್ರಿಲ್ ಹತ್ತೊಂಬತ್ತರಂದು ಪಡ್ಡೆಹುಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಇನ್ನಷ್ಟು ಓದಿರಿ

Scroll to Top