ಹೊಸ ‘ಲಡ್ಡು’ ಆದರೆ ತಿನ್ನಲಿಕ್ಕಲ್ಲ!

Picture of Cinibuzz

Cinibuzz

Bureau Report

ವಿಭಿನ್ನ ಕಥೆಗಳು, ಟೈಟಲ್ ಗಳು, ಸ್ಕ್ರೀನ್ ಪ್ಲೇ, ಮೇಕಿಂಗ್ ಇತ್ಯಾದಿಗಳ ಮೂಲಕ ಹೊಸ ಬರ ಸಿನಿಮಾಗಳು ಇತ್ತೀಚಿಗೆ ಕಮಾಲು ಮಾಡುತ್ತಲೇ ಇದೆ. ಸ್ಯಾಂಡಲ್ ವುಡ್ ನಲ್ಲಿ ಹೈಪ್ ಕ್ರಿಯೇಟ್ ಮಾಡುತ್ತಲೂ ಇದೆ. ಅದರಲ್ಲೂ ಬಹಳಷ್ಟು ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದರೆ ಮತ್ತೆ ಕೆಲವು ಸಿನಿಮಾಗಳು ಹೇಳ ಹೆಸರಿಲ್ಲದೇ ಮಕಾಡೆ ಮಲಗಿದ್ದು ಉಂಟು.

ಸದ್ಯ ವಿಭಿನ್ನ ಟೈಟಲ್ ಮೂಲಕ ಹೆಚ್ಚು ಗಮನ ಸೆಳೆಯುತ್ತಿರುವ ಸಿನಿಮಾಗಳ ಪೈಕಿ ಲಡ್ಡು ಕೂಡ ಒಂದು. ಲಡ್ಡು ಎಂದಾಕ್ಷಣ ಎಲ್ಲರಿಗೂ ತಿರುಪತಿ ತಿಪ್ಪನ ಲಡ್ಡುವೇ ನೆನಪಾಗುತ್ತದೆ. ಅಂತಹುದೇ ಟೈಟಲ್ ಇಟ್ಟುಕೊಂಡು ಹೊಸ ಸಿನಿಮಾ ಸೆಟ್ಟೇರಿದೆ. ಇತ್ತೀಚಿಗೆ ಚಿತ್ರ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಫೋಸ್ಟರ್ ವಿಭಿನ್ನವಾಗಿಯೂ ಮೂಡಿಬಂದಿದೆ.

ಪೋಸ್ಟರ್ ನಲ್ಲಿ ಇಲಿಯೊಂದು ಲಡ್ಡು ತಿನ್ನುತ್ತಾ ಜನ ನೋಡುತ್ತಿರುವುದು ಗಮನ ಸೆಳೆಯುತ್ತಿದೆ. ಈ ಚಿತ್ರವನ್ನು ಆರ್. ರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀ ಮದ್ದಮ್ಮ ಕ್ರಿಯೇಷನ್ ಅಡಿಯಲ್ಲಿ ವಿ.ಮೇಘನಾ ಹಾಗೂ ಕಿಶೋರ್ ಚಂದ್ರ ಚಿತ್ರ ನಿರ್ಮಾಣ ಮಾಡಲಿದ್ದಾರೆ. ಸದ್ಯ ಚಿತ್ರದಲ್ಲಿ ಪವಿತ್ರ, ಮಂಜುಳಾ ರೆಡ್ಡಿ, ಶ್ವೇತಾ ಪಾಟಿಲ್, ಬಿಂದುಶ್ರೀ ಹರ್ಷಿತ್, ಸಮೀರ್ ಆಚಾರ್ಯ, ನವೀನ್ ಚಕ್ರವರ್ತಿ,ಮಧು ಶ್ರೇಯಸ್,ವಿಶಾಲ್ ಸಂಜಯ್, ರಾಕ್ಲೈನ್ ಸುಧಾಕರ್ ಸೇರಿದಂತೆ ಹಲವರ ತಾರಾಗಣವಿದೆ.

ಇನ್ನಷ್ಟು ಓದಿರಿ

Scroll to Top