ಕಿಯಾರಾ ಹೇರ್ ಕಟ್ ಮಾಡಿಕೊಂಡ್ರು!

Picture of Cinibuzz

Cinibuzz

Bureau Report

ಎಮ್​.ಎಸ್​.ಧೋನಿ ಸಿನಿಮಾದಲ್ಲಿ ಸಾಕ್ಷಿ ಪಾತ್ರದಲ್ಲಿ ನಟಿಸಿದ್ದ ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ ಇದೀಗ ಸಖತ್​ ಟ್ರೆಂಡ್​ನಲ್ಲಿದ್ದಾರೆ. ನಿನ್ನೆಯಷ್ಟೆ ಕಿಯಾರಾ ಇನ್​ಸ್ಟಾಗ್ರಾಮ್​ ಪ್ರೊಫೈಲ್​ನಲ್ಲಿ ವಿಡಿಯೋವೊಂದನ್ನ ಅಪ್​ಲೋಡ್​ ಮಾಡಿದ್ದರು. 26 ವರ್ಷದ ಬೆಡಗಿ ಕಿಯಾರಾ ತನಗಾಗಿದ್ದ ಸ್ಟ್ರೆಸ್ಸನ್ನು ಹೊರಹಾಕಲು ಕನ್ನಡಿ ಮುಂದೆ ನಿಂತು ರ್ಯಾಪ್ ಸಾಂಗ್ ಹಾಡುತ್ತಾ ತನ್ನ ಉದ್ದ ಕೂದಲನ್ನ ಕಟ್​ ಮಾಡಿಕೊಂಡಿದ್ದಾರೆ.

https://www.instagram.com/p/Bw3larIDAeR/?utm_source=ig_web_copy_link

ಹೇರ್​ ಕೇರ್​ ಮಾಡಲು ನಾವು ನೆಗ್ಲೆಕ್ಟ್​ ಮಾಡ್ತೀವಿ. ಅದಕ್ಕೆ, ಇದೊಂದೆ ಸಲ್ಯೂಷನ್​.. ಅಂತ ಬರೆದುಕೊಂಡಿದ್ದಾರೆ. ಇದೀಗ ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಶೇರ್​ ಮಾಡಿಕೊಂಡಿದ್ದು, ಒಳ್ಳೆ ರೆಸ್ಪಾನ್ಸ್ ಕೂಡ ಸಿಗುತ್ತಿದೆ. ವಿಡಿಯೋ ನೋಡಿದ ಕಿಯಾರಾ ಅಭಿಮಾನಿಗಳು, ಕಿಯಾರಾಸ್​ ನ್ಯೂ ಲುಕ್​.. ಶಾರ್ಟ್​ ಹೇರ್​​ ನಿಮಗೆ ಸೂಟ್​ ಆಗುತ್ತೆ. ನೀವು ಸುಂದರವಾಗಿ ಕಾಣ್ತಿದ್ದೀರಿ ಎಂದಿದ್ದಾರೆ. ಇನ್ನು​ ಕೆಲವರು ನೀವು ನಿಜವಾಗ್ಲೂ ನಿಮ್ಮ ಹೇರ್​ ಕಟ್​ ಮಾಡ್ಕೊಂಡ್ರಾ ಅಂತ ಪ್ರಶ್ನಿಸಿದ್ದಾರೆ. ಈ ವಿಡಿಯೋ ಶೇರ್​ ಮಾಡಿದ್ದ ಕೆಲವೇ ಗಂಟೆಗಳಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ಲೈಕ್ಸ್​ ಬಂದಿದ್ದು, ಇನ್​ಸ್ಟಾಗ್ರಾಮ್​ ನಲ್ಲಿ ಸದ್ಯ ಟ್ರೆಂಡಿಂಗ್​ನಲ್ಲಿದೆ.

ಇನ್ನಷ್ಟು ಓದಿರಿ

Scroll to Top