ಬ್ರಹ್ಮಾಸ್ತ್ರ ರಿಲೀಸ್ ಮುಂದಕ್ಕೆ!

Picture of Cinibuzz

Cinibuzz

Bureau Report

ಅಮಿತಾಬ್ ಬಚ್ಚನ್ ನಟನೆಯ ಹಾಗೂ ಕ್ಯೂಟ್ ಕಪಲ್ ಅಂತಾನೇ ಕರೆಸಿಕೊಳ್ಳುವ ಆಲಿಯಾ ಹಾಗೂ ರಣಬೀರ್ ಕಪೂರ್ ನಟನೆಯ ಸಿನಿಮಾ ಬ್ರಹ್ಮಾಸ್ತ್ರ ಈಗಾಗಲೇ ಹಲವಾರು ವಿಚಾರಗಳಿಂದ ಸದ್ದು ಮಾಡುತ್ತಿದೆ. ಅಷ್ಟೆ ಅಲ್ಲ ಈ ಸಿನಿಮಾ ಲೋಗೋ ಲಾಂಚ್ ಕೂಡ ಅದ್ಬುತವಾಗಿ ಮೂಡಿ ಬಂದಿತ್ತು. ಈ ಲೋಗೋ ಲಾಂಚ್ ಬಿಡುಗಡೆಯಾದ ಮೇಲಂತೂ ಈ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸುವಂತಿತ್ತು. ಸದ್ಯ ಈ ಸಿನಿಮಾ ರಿಲೀಸ್ ಗೆ ಮಹೂರ್ತ ಫಿಕ್ಸ್ ಆಗಿದೆ.

ಇನ್ನು ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕರು ಪೋಸ್ಟ್ ಒಂದನ್ನು ಮಾಡಿದ್ದಾರೆ. ಈ ಪೋಸ್ಟ್‌ ನಲ್ಲಿ ಸಿನಿಮಾ ಬಿಡುಗಡೆ ಯಾಕೆ ಮುಂದಿನ ವರ್ಷ ಎನ್ನುವುದನ್ನು ನಿರ್ದೇಶಕ ಅಯಾನ್ ಮುಖರ್ಜಿ ತಿಳಿಸಿದ್ದಾರೆ. “ನನಗೆ ಬ್ರಹ್ಮಾಸ್ತ್ರ ಸಿನಿಮಾ ಒಂದು ಕನಸು. ಈ ಕನಸು ಸುಂದರವಾಗಿ ಮೂಡಿ ಬರಬೇಕು. ಈ ಸಿನಿಮಾ ಅತ್ಯುನ್ನತ ತಂತ್ರಜ್ಞಾನದಲ್ಲಿ ಮೂಡಿಬರುತ್ತಿದ್ದು, ವಿಎಫ್‌ಎಕ್ಸ್ ಮೂಲಕ ಇರುವ ಸಿನಿಮಾ ಆಗಿರುವುದರಿಂದ ತಡವಾಗಬಹುದು. ಹಾಗಾಗಿ ಮುಂದಿನ ವರ್ಷ ಬೇಸಿಗೆಯಲ್ಲಿ ಸಿನಿಮಾ ತೆರೆಗೆ ಬರುತ್ತದೆ. ಅಷ್ಟೆ ಅಲ್ಲ ಈ ಪ್ರೀತಿ ವಾತ್ಸಲ್ಯ ಹಾಗೇ ಇರುತ್ತದೆ  ಅನ್ನೋ ನಂಬಿಕೆ ಇದೆ” ಎಂದು ಪತ್ರ ಮುಗಿಸಿದ್ದಾರೆ.

ಬ್ರಹ್ಮಾಸ್ತ್ರದಲ್ಲಿ ದೊಡ್ಡ ತಾರಾಬಳಗವಿದ್ದು, ಚಿತ್ರದಲ್ಲಿ ನಟ ರಣಬೀರ್ ಕಪೂರ್, ಆಲಿಯಾ ಭಟ್, ಅ%A

ಇನ್ನಷ್ಟು ಓದಿರಿ

Scroll to Top