ಭುವನ್ ಮೇಲೆ ಮಾರಣಾಂತಿಕ ಹಲ್ಲೆ!

Picture of Cinibuzz

Cinibuzz

Bureau Report

ನಟಿ ಹರ್ಷಿಕಾ ಪೂಣಚ್ಚಾ ಜೊತೆ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿರುವುದು ಬೆಳಕಿಗೆ ಬಂದಿದೆ. ನಿನ್ನೆ ಹರ್ಷಿಕಾ ಪೂಣಚ್ಚಾ ಮಡಿಕೇರಿಯ ನೀರು ಕೊಲ್ಲಿ ಗ್ರಾಮದ ಬಳಿ ಇರುವ ಖಾಸಗಿ ರೆಸಾರ್ಟ್​ನಲ್ಲಿ ನಡೆದ ಸಂಬಂಧಿಕರೊಬ್ಬರ ಮದುವೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಬನ್ಸಿ ಪೊನ್ನಪ್ಪ ಹಾಗೂ ಬಿಪಿನ್ ದೇವಯ್ಯ ಎಂಬ ಇಬ್ಬರು ಹರ್ಷಿಕಾರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರಂತೆ.

ಈ ಸಂಬಂಧ ಬಿಗ್​ಬಾಸ್​ ಖ್ಯಾತಿಯ ನಟ ಭುವನ್ ಪೊನ್ನಣ್ಣ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ 232, 242, 354, 506 ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು,  ಆರೋಪಿಗಳಾದ ಬನ್ಸಿ ಪೊನ್ನಪ್ಪ ಹಾಗೂ ಬಿಪಿನ್ ದೇವಯ್ಯನನ್ನ ಬಂಧಿಸಿ ಮಡಿಕೇರಿ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಈ ಸಂಬಂಧ ಹರ್ಷಿಕಾ ಕೂಡಾ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.

ಇನ್ನಷ್ಟು ಓದಿರಿ

Scroll to Top