ತಿಂಗಳಾಂತ್ಯಕ್ಕೆ ಏಕ್ ಲವ್ ಯಾ ಶೂಟಿಂಗ್ ಶುರು!

Picture of Cinibuzz

Cinibuzz

Bureau Report

ದಿ ವಿಲನ್ ಸಕ್ಸಸ್ ನ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾ ಏಕ್ ಲವ್ ಯಾ. ಈ ಸಿನಿಮಾದ ಮೂಲಕ ರಕ್ಷಿತಾ ಸಹೋದರ ಅಭಿಷೇಕ್ ರಾವ್(ರಾಣಾ)​ ಅವರನ್ನು ಸ್ಯಾಂಡಲ್ ವುಡ್ ಗೆ ಲಾಂಚ್ ಮಾಡಲಾಗುತ್ತಿರುವುದು ವಿಶೇಷವಾಗಿದೆ. ಈಗಾಗಲೇ ಟೈಟಲ್ ಹಾಗೂ ಮೋಷನ್ ಟೀಸರ್​ನಿಂದ ಭಾರೀ ಕುತೂಹಲ ಮೂಡಿಸಿರುವ  ಈ ಚಿತ್ರದ ಶೂಟಿಂಗ್ ಇದೇ ತಿಂಗಳ ಅಂತ್ಯದಿಂದ ಶುರುವಾಗಲಿದೆ.

ವಿಶೇಷ ಅಂದ್ರೆ ಚಿತ್ರದ ಫಸ್ಟ್ ಶೆಡ್ಯೂಲ್ ಶೂಟಿಂಗ್ ಭರ್ಜರಿ ಆ್ಯಕ್ಷನ್‌ನಿಂದ ಕೂಡಿರಲಿದ್ದು, ಕಾಲಿವುಡ್ ನ ಖ್ಯಾತ ಸ್ಟಂಟ್ ಮಾಸ್ಟರ್ ಸಿಲ್ವಾ ರಾಣಾಗೆ ಫೈಟಿಂಗ್ ಹೇಳಿಕೊಡುತ್ತಿದ್ದಾರೆ. ತಮಿಳಿನ ರೋಬೋಟ್ ಹಾಗೂ ಕತ್ತಿ ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವವಿರೋ ಸ್ಟಂಟ್ ಮಾಸ್ಟರ್ ಅನ್ನು ಪ್ರೇಮ್ ಕನ್ನಡಕ್ಕೆ ಕರೆ ತರುತ್ತಿದ್ದಾರೆ. ಅಲ್ಲದೇ  ಈ ಸಿನಿಮಾದಲ್ಲಿ ಅತಿಥಿ ಪಾತ್ರಕ್ಕೆ ಬಾಲಿವುಡ್‌ನಿಂದ ದೊಡ್ಡ ನಟರೊಬ್ಬರನ್ನು ಕರೆತರಲಿದ್ದಾರೆ ಎನ್ನಲಾಗಿದೆ. ರಾಣನಿಗೆ ಜೋಡಿಯಾಗಿ ಯಾವ ನಟಿ ಅಭಿನಯಿಸಲಿದ್ದಾರೆ ಎಂಬ ಸುದ್ದಿಯನ್ನು ಪ್ರೇಮ್ ಇನ್ನು ಸಸ್ಪೆನ್ಸ್ ಆಗಿಯೇ ಇಟ್ಟಿದ್ದಾರೆ. ಹೀರೋಯಿನ್ ಇಲ್ಲದೆಯೇ ಚಿತ್ರೀಕರಣ ಮಾಡಲು ರೆಡಿಯಾಗಿದ್ದಾರೆ.

ಇನ್ನಷ್ಟು ಓದಿರಿ

Scroll to Top